ಸೀಲ್‌ಡೌನ್: ನಿಯಮ ಕಟ್ಟುನಿಟ್ಟಿನ ಜಾರಿಗೆ ಸೂಚನೆ
Team Udayavani, Jul 22, 2020, 9:24 AM IST
ಸಿದ್ದಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಸಹಾಯಕ ಕಮೀಷನರ್ ಡಾ| ಈಶ್ವರ ಉಳ್ಳಾಗಡ್ಡಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಈಶ್ವರ ಉಳ್ಳಾಗಡ್ಡಿ, ಒಂದು ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ ಎಂದರೆ ಆದಷ್ಟು ಕಡಿಮೆ ಪ್ರದೇಶವನ್ನು ಸೀಲ್‌ಡೌನ್ ಮಾಡುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಸೀಲ್ ಡೌನ್ ಪ್ರದೇಶದಿಂದ ಜನರು ಒಡಾಡದಂತೆ ನಿಗಾವಹಿಸಿಬೇಕು. ಇದು ಪ್ರಮುಖ ವಿಷಯವಾಗಿದೆ. ಅವರಿಗೆ ಅವಶ್ಯಕವಿರುವ ದಿನಸಿ ಸಾಮಗ್ರಿಗಳನ್ನು ಸ್ಥಳೀಯವಾಗಿ ಒದಗಿಸಬೇಕು, ಸೀಲ್‌ಡೌನ್ ಪ್ರದೇಶದಲ್ಲಿ ಸ್ಥಳದಲ್ಲೇ ಸ್ವಾಬ್ ಸಂಗ್ರಹಿಸಬೇಕು. ಅವರನ್ನು ಓಡಾಡಿಸಬಾರದು. ಇದರಿಂದ ಹರಡುವ ಸಾಧ್ಯತೆ ಇರುತ್ತದೆ. ದಿನಸಿ ಸಾಮಗ್ರಿಗಳಿಗೆ ಯಾರೇ ಆಗಿರಲಿ ಹಣಪಾವತಿಸಬೇಕು. ಉಚಿತ ದಿನಸಿ ನೀಡಲು ಸಾಧ್ಯವಿಲ್ಲ. ಸರಕಾರದ ನಿಯಮಾವಳಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ಸಮನ್ವಯ ಸಾಧಿಸಿ ಕೆಲಸ ಮಾಡುವುದರ ಜೊತೆಗೆ ಜನರಲ್ಲಿ ಆತ್ಮವಿಶ್ವಾಸ ಹುಟ್ಟುವಂತೆ ಮಾಡಬೇಕು ಎಂದರು.
ಕೋವಿಡ್ ನಿಯಂತ್ರಣದಲ್ಲಿ ನಿಮ್ಮ ಪಾತ್ರ ಪ್ರಮುಖವಾದುದು. ಅಂಗನವಾಡಿ, ಆಶಾಕಾರ್ಯಕರ್ತೆಯರು ಸರ್ವೇ ಮಾಡುತ್ತಾರೆ, ಅದನ್ನು ಪರಿಶೀಲಿಸಬೇಕು, ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಆದರೆ ಅದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಮೊದಲು ಮಾಸ್ಕ್ ಹಾಕುವಂತೆ ಪ್ರಚಾರ ಮಾಡಬೇಕು. ನಂತರದ ದಿನದಲ್ಲಿ ದಂಡ ಹಾಕುವ ಪ್ರಕ್ರಿಯೆ ಮಾಡಬೇಕು. ಬೇರೆ ರಾಜ್ಯದಿಂದ ಬಂದವರ ಸ್ವಾಬ್ ಸಂಗ್ರಹಿಸುವುದು ಕಡ್ಡಾಯ. ಬೇರೆ ಜಿಲ್ಲೆಯಿಂದ ಬಂದವರಿಗೆ ಕೋವಿಡ್ ಲಕ್ಷಣಗಳಿದ್ದಲ್ಲಿ ಸ್ವಾಬ್ ಸಂಗ್ರಹಿಸಬೇಕು. ಆದರೆ 14 ದಿನದ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. ಕ್ವಾರೆಂಟೈನ್ ಪ್ರಕ್ರಿಯೆಯಲ್ಲಿ ಸ್ಥಳಿಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೂ ತಕಾರಾರು ಮಾಡಿದಲ್ಲಿ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಮೂಲಕ ಕ್ರಮ ತೆಗೆದುಕೊಳ್ಳಬೇಕು. ಸೆನಿಟೈಸರ್ ಮತ್ತು ಸೀಲ್ ಡೌನ್ ಮಾಡುವುದಕ್ಕೆ ಗ್ರಾಪಂ ಅನುದಾನವನ್ನು ಬಳಸಿಕೊಳ್ಳಬೇಕು. ಪ್ರಚಾರ ಕಾರ್ಯಗಳಿಗೆ ಇಲಾಖೆಯ ವಾಹನಗಳನ್ನೇ ಬಳಸಿಕೊಳ್ಳಬೇಕು. ಹೊರ ರಾಜ್ಯದಿಂದ, ಬೇರೆ ಜಿಲ್ಲೆಯಿಂದ ಬರುವವರನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಇದು ಕಾನೂನು ಉಲ್ಲಂಘನೆಯಾಗಿರುತ್ತದೆ. ಆದರೆ ಬಂದವರು ಇಲ್ಲಿಯ ನಿಯಮವನ್ನು ಪಾಲಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ ಮುಖ್ಯಕಾರ್ಯದರ್ಶಿ ಪ್ರಶಾಂತ, ಡಾ| ಲಕ್ಷ್ಮೀಕಾಂತ ನಾಯ್ಕ, ಸಿಪಿಐ ಪ್ರಕಾಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.