ಅಕ್ಷರದ ಬೆಳಕಿಗೆ ‘ಸೆಲ್ಕೋ’ದ ಸೌರ‌ಶಕ್ತಿ ಕೊಡುಗೆ!


Team Udayavani, Feb 28, 2022, 4:40 PM IST

ಅಕ್ಷರದ ಬೆಳಕಿಗೆ ‘ಸೆಲ್ಕೋ’ದ ಸೌರ‌ಶಕ್ತಿ ಕೊಡುಗೆ!

ಶಿರಸಿ: ಕಳೆದ‌ ಮೂವತ್ಮೂರು ವರ್ಷಗಳಿಂದ ಕಿವುಡ ಹಾಗೂ‌ ಮೂಕ ಮಕ್ಕಳ ಶಿಕ್ಷಣಕ್ಕೋಸ್ಕರ ಕೆಲಸ‌ ಮಾಡುತ್ತಿರುವ ಜಿಲ್ಲೆಯ ಪ್ರಪ್ರಥಮ ಇಲ್ಲಿನ ‌ಬನವಾಸಿ ರಸ್ತೆಯ ಮಹದೇವ ಭಟ್ ಕೂರ್ಸೆ ಕಿವುಡ ಹಾಗೂ‌ ಮೂಕ‌ ಮಕ್ಕಳ ಶಾಲೆಗೆ ಸೌರ ಶಕ್ತಿಯ ಬೆಳಕಿನ ಸ್ಪರ್ಷ ಸಿಕ್ಕಿದೆ. ಪ್ರತಿಭಾವಂತ ವಿಶೇಷ ಚೇತನ ಮಕ್ಕಳಿಗೆ ಅಕ್ಷರಶಃ ಬೆಳಕು‌ ಹಾಗೂ ಬೆಳಕಿನ ಶಕ್ತಿ ಬಳಕೆಗೆ ಲಭ್ಯವಾಗಿದೆ.

ಏನಿದು ಬೆಳಕು ಹಾಗೂ ಶಕ್ತಿ?: ಸೆಲ್ಕೋ ಫೌಂಡೇಶನ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆ ಈ ವಿಶಿಷ್ಟ ನೆರವಿನ ಕಾರ್ಯಕ್ಕೆ ಹೆಗಲು ನೀಡಿದೆ. ಸೆಲ್ಕೋ ತನ್ನ‌ ಸಾಮಾಜಿಕ ಬದ್ದತೆಯ ಭಾಗವಾಗಿ ೩.೫೦ ಲ.ರೂ‌. ಮೊತ್ತದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದ ಮಹದೇವ ಭಟ್ಟ ಸಂಸ್ಥೆಗೆ ಸಂಪೂರ್ಣ ಉಚಿತವಾಗಿ ಬೆಳಕಿನ ಶಕ್ತಿ ನೀಡಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ‌‌ ಸಮಸ್ಯೆಯಲ್ಲಿ ಬಳಲುತ್ತಿದ್ದ ಮಹದೇವ ಭಟ್ಟ ಕೂರ್ಸೆ ಶಾಲೆಯ ಹಾಗೂ ವಸತಿ ನಿಲಯದ ಪವರ್ ಸಮಸ್ಯೆ ಬಗೆಹರಿದಿದೆ.

ಏನಿದು ಸಂಸ್ಥೆ?:

ಮೂರು ದಶಕಗಳ ಹಿಂದೆ ಆರ್‌.ಎ.ಹೆಗಡೆ, ಭೂಮಾ ವಕೀಲರು, ಡಾ. ಎ.ಎನ್.ಪಟವರ್ಧನ್, ಆರ್.ಜಿ.ರಾಯ್ಕರ, ಡಾ. ಟಿ.ನಾರಾಯಣ ಭಟ್ಟ ಇತರರು ಸೇರಿ  ಸ್ಥಾಪಿಸಿದ ವಿಶೇಷ ಮಕ್ಕಳ ವಿಶೇಷ ಇದು. ಈ ಶಾಲೆಗೆ ಸರಕಾರದ ಅನುದಾನದ ಲಭ್ಯತೆಯ ವಿಳಂಬ ಹಾಗೂ ಕಡಿಮೆ ಮೊತ್ತದ  ನೆರವಿನ ನಡುವೆಯೂ ದಾನಿಗಳಿಂದ ಸಂಸ್ಥೆ ನಡೆಯುತ್ತಿದೆ.

ಕಿವುಡ ಹಾಗೂ‌ ಮೂಕ ಮಕ್ಕಳನ್ನೂ ಮುಖ್ಯ ವಾಹಿನಿಗೆ ತರಬೇಕು ಎನ್ನುವ‌ ಮಹತ್ವಾಕಾಂಕ್ಷಿ ಕನಸು ಹಾಗೂ‌ ಮೂಲ ಆಶಯ ಈ‌ ಸಂಸ್ಥೆಯದ್ದಾಗಿದೆ.

ಸಮಸ್ಯೆ ಆಗುತ್ತಿತ್ತು :

ಬಾಗಲಕೋಟೆ, ಗಂಗಾವತಿ, ಕುಮಟಾ, ಹೊನ್ನಾವರ, ಹಾವೇರಿ ಸೇರಿದಂತೆ ವಿವಿಧಡೆಯಿಂದ ಒಂದರಿಂದ ಹತ್ತನೇ ತರಗತಿಯ ತನಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದು ವಸತಿ ಸಹಿತ ಶಾಲೆ ಆಗಿದ್ದು, ಹೆಸ್ಕಾಂ ವಿದ್ಯುತ್ ಕೈ ಕೊಟ್ಟರೆ ಮಕ್ಕಳಿಗೆ ಊಟ ನೀಡುವದೂ ಕಷ್ಟ ಆಗುತ್ತಿತ್ತು. ರಾತ್ರಿ ವೇಳೆ ಕತ್ತಲೂ ಆಗುತ್ತಿತ್ತು. ಅವರ ಓದಿಗೂ ಕಷ್ಟವಾಗುತ್ತಿತ್ತು.

ಇದನ್ನು ಗಮನಿಸಿದ ಸೆಲ್ಕೋ‌ ಇಂಡಿಯಾದ ಸಿಇಓ‌ ಮೋಹನ ಭಾಸ್ಕರ ಹೆಗಡೆ ಅವರು ಸೆಲ್ಕೋ ಸಂಸ್ಥಾಪಕ, ಮ್ಯಾಗಸ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಡಾ. ಹರೀಶ್ ಹಂಡೆಯವರ ಗಮನಕ್ಕೆ ತಂದು, ಸೆಲ್ಕೋ ಫೌಂಡೇಶನ್ ಸಂಸ್ಥೆಯ‌ ಮೂಲಕ ಸೌರ ಶಕ್ತಿ ಒದಗಿಸಿ ಮಾತೃತ್ವ ಮೆರೆದಿದ್ದಾರೆ.  ಸೆಲ್ಕೋ ಶಿರಸಿ ಶಾಖೆಯ ಅಧಿಕಾರಿಗಳು ೫ ಕಿಲೋವ್ಯಾಟ್ ಸಾಮರ್ಥ್ಯದ ಉಪಕರಣಗಳನ್ನು ಅಳವಡಿಸಿದ್ದಾರೆ. ಈ ಬೆಳಕಿ‌ನ ಶಕ್ತಿಗೆ ಹದಿನಾರು ಪ್ಯಾನಲ್ ಜೋಡಿಸಲಾಗಿದೆ.

ಗ್ರಾಇಂಡರ್, ಮಿಕ್ಸರ್, ಹಾಗೂ ೨೫-೩೦ ಕ್ಕೂ ಅಧಿಕ ಬಲ್ಬು, ೧೫ಕ್ಕೂ ಹೆಚ್ಚು ಪ್ಯಾನ್ ಏಕಕಾಲಕ್ಕೆ ಓಡಿಸಬಹುದು. ಈಗ ವಿದ್ಯುತ್ ಉತ್ಪಾದನೆ ಮಾಡಿ‌ ಸ್ವತಃ ಶಾಲೆಯಲ್ಲಿ ಬಳಕೆ‌ ಮಾಡಲಾಗುತ್ತಿದೆ. ಸೆಲ್ಕೋ ಅಕ್ಷರಶ: ಅಕ್ಷರದ ಬೆಳಕಿಗೆ ಬೆಳಕನ್ನೇ ನೀಡಿದೆ, ನೀಡುತ್ತಿದೆ.

ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಅಗತ್ಯಕ್ಕೆ ಸ್ಪಂದಿಸುವ ಅವಕಾಶ ಒದಗಿದ್ದು ಪ್ರಯತ್ನಿಸಿದ್ದೇವೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ದೀರ್ಘಕಾಲ ಪ್ರಯೋಜನ ನೀಡುತ್ತದೆ. ಹಾಗಾಗಿ, ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸಿ, ಸಮರ್ಪಕವಾಗಿ ನಿರ್ವಹಿಸಬೇಕು. ಅದಾಗದಿದ್ದರೆ ಈ ಪರಿಸರ ಸ್ನೇಹಿ ಉದ್ಯಮದ ಮೇಲೆ ಅವಿಶ್ವಾಸ ಮೂಡುತ್ತದೆ. ಅದಾಗಬಾರದು. ಸೌರಶಕ್ತಿ ನಮ್ಮ ದೇಶದ ಭವಿಷ್ಯದ ಹಾಗೂ ಭರವಸೆಯ ಶಕ್ತಿ.-ಮೋಹನ ಭಾಸ್ಕರ ಹೆಗಡೆ, ಸಿಇಓ ಸೆಲ್ಕೋ ಸೋಲಾರ್

ಸೆಲ್ಕೋ ಸಂಸ್ಥೆಯ ಸಾಮಾಜಿಕ ಬದ್ಧತೆಯಿಂದ ನಮ್ಮ ಶಾಲೆಯ ಬೆಳಕಿನ ಕಷ್ಟಕ್ಕೆ ಶಾಶ್ವತ ಪರಿಹಾರ ನೀಡಿದಂತಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ ನೀಡಿದೆ. ನಾವು ಇದರ ಸದುಪಯೋಗ ಮಾಡಿಕೊಳ್ಳುತ್ತೇವೆ.-ಎಂ.ಎಂ.ಭಟ್ಟ ಕಾರೇಕೊಪ್ಪ, ಕಾರ್ಯದರ್ಶಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.