ಸದಭಿರುಚಿಯ ಶರಾವತಿ ಉತ್ಸವಕ್ಕೆ ಚಾಲನೆ

Team Udayavani, Jan 27, 2020, 3:41 PM IST

uk-tdy-1

ಹೊನ್ನಾವರ: ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕೃತಿಕ ಉತ್ಸವಗಳು ಬೇಕು ಎಂದು ಉದ್ಯಮಿ ಎನ್‌.ಆರ್‌. ಹೆಗಡೆ ರಾಘೋಣ ಹೇಳಿದರು.

ಸೇಂಟ್‌ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಶರಾವತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಭೂತಗಳಲ್ಲಿ ನೀರು ಪ್ರಮುಖವಾದುದು. ಅದನ್ನು ಗೌರವಿಸುವ ಈ ಉತ್ಸವ ಅರ್ಥಪೂರ್ಣವಾದುದ್ದು. ತಾಯಿ ಶರಾವತಿ ಆಶ್ರಯದಲ್ಲಿ ಅದೆಷ್ಟೋ ಪ್ರತಿಭಾವಂತರು ಹೊರಬಂದು ದೇಶಮಟ್ಟದಲ್ಲಿ ಬೆಳೆದಿದ್ದಾರೆ. ಶರಾವತಿಯ ನೀರು ಪವಿತ್ರವಾದದ್ದು. ಹುಟ್ಟಿದಲ್ಲಿನಿಂದ ಸಂಗಮದವರೆಗೆ ದೇಶಕ್ಕೆ ಬೆಳಕಾಗಿ, ರೈತನ ನೆಲಕ್ಕೆ ಜೀವಜಲವಾಗಿ, ನೋಡುಗರ ಕಣ್ಣಿಗೆ ಜಲಪಾತವಾಗಿ ಬಹುವಿಧದಲ್ಲಿ ಸಲ್ಲುತ್ತಿರುವ ಶರಾವತಿ ನದಿ ತಾಯಿಗೆ ಸಮಾನ. ಈ ಸಮಾರಂಭದ ಮುಖಾಂತರ ತಾಯಿಯನ್ನು ಗೌರವಿಸುವುದು, ಕಲಾಪ್ರದರ್ಶನವನ್ನು ಅವರಿಗೆ ಅರ್ಪಿಸುವುದು ಪವಿತ್ರವಾದ ಕೆಲಸ. ಕನ್ನಡ ನಾಡಿನ ವಿಚಾರ, ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ವೇದಿಕೆ ಕಾರ್ಯೋನ್ಮುಖವಾಗಿರುವುದು ಸಂತೋಷ. ಜಿಲ್ಲೆ, ರಾಜ್ಯಮಟ್ಟದ ಉತ್ಸವವಾಗಲಿ ಎಂದರು.

ಅಭಿಯಂತರಾಗಿ, ಕಲಾಪ್ರೇಮಿಯಾಗಿ, ಕಲಾವಿದರ ಹೆತ್ತ ತಂದೆಯಾಗಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಸಂದ ಸಜ್ಜನ ಎನಿಸಿಕೊಂಡ ನಿವೃತ್ತ ಅಭಿಯಂತ ಆರ್‌.ಜಿ. ಭಟ್‌, ಶಿಕ್ಷಣಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ, ಶಿಕ್ಷಕರಾಗಿ, ಶಾಲೆ ಸ್ಥಾಪಕರಾಗಿ, ನಿವೃತ್ತಿಯ ನಂತರವೂ ಇಳಿವಯಸ್ಸಿನಲ್ಲಿ ಊರ ಮತ್ತು ವಿದ್ಯಾರ್ಥಿ ಹಿತ ಬಯಸುವ ಅರುಣ ಉಭಯಕರ ಮಲ್ಲಾಪುರ ಮತ್ತು ಅವರ ಪತ್ನಿ ಸಮಾಜಸೇವಕಿ ಛಾಯಾ ಉಭಯಕರ, ಛಾಯಾಗ್ರಹಣ ಮತ್ತು ಮೃದಂಗವಾದನದಲ್ಲಿ ಪರಿಣಿತಿ ಪಡೆದ ಪಿ.ಕೆ. ಹೆಗಡೆ, ಹರಿಕೇರಿ, ಜಿಲ್ಲೆಗೆ ಅಪರೂಪದ ಮರಳು ಶಿಲ್ಪಿ ವೆಂಕಟ್ರಮಣ ಆಚಾರ್ಯ, ಸಂಗೀತ ಶಿಕ್ಷಕಿಯಾಗಿನೂರಾರು ಜನರನ್ನು ತರಬೇತಿಗೊಳಿಸಿದ ಲಕ್ಷ್ಮೀ ಹೆಗಡೆ ಹೊಸಾಕುಳಿ ಅವರನ್ನು ಶಾಲು, ಸ್ಮರಣಿಕೆ, ಪೇಟ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಶ್ರೀಕಾಂತ ಭಟ್‌ ಕುಮಟಾ ಅಧ್ಯಕ್ಷತೆ ವಹಿಸಿದ್ದರು. ಶರಾವತಿ ವೇದಿಕೆ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಮತ್ತು ಕಾರ್ಯದರ್ಶಿ ಶಂಭು ಹೆಗಡೆ ಸಂತನ್‌, ಗೌರವ ಕಾರ್ಯದರ್ಶಿ ಗೋಪಾಲಕೃಷ್ಣ ಹೆಗಡೆ ಇದ್ದರು. ವೇದಿಕೆ ಗೌರವಾಧ್ಯಕ್ಷ ಪಿ.ಎಸ್‌. ಭಟ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್‌.ಜಿ. ಭಟ್‌ ಮತ್ತು ಕಲ್ಪನಾ ಹೆಗಡೆ ನಿರ್ವಹಿಸಿದರು.

ನಂತರ ನಡೆದ ಪೂಜಾ ಹೆಗಡೆ, ಸಾನ್ವಿ ರಾವ್‌, ಅನ್ವಿತಾ ಹರೀಶ ನಾಯ್ಕ ಮತ್ತು ಸಂಗಡಿಗರಿಂದ ಭರತನಾಟ್ಯ, ರಿಷಿ ಸಾಯಿದಾಸ ಇವರಿಂದ ಗಾಯನ. ಲತಾ ಗುರುರಾಜ ಹಾಗೂ ಗುರುರಾಜ ಹೆಗಡೆ ಆಡುಕಳ ಇವರಿಂದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.