ಬೆಂಗಳೂರಿಗೆ ಶರಾವತಿ ನೀರು ಅವೈಜ್ಞಾನಿಕ ಯೋಜನೆ’; ಯೋಜನೆ ವಿರುದ್ಧ ಬಿಜೆಪಿ ಹೋರಾಟ


Team Udayavani, Aug 27, 2024, 6:05 PM IST

ಬೆಂಗಳೂರಿಗೆ ಶರಾವತಿ ನೀರು ಅವೈಜ್ಞಾನಿಕ ಯೋಜನೆ’; ಯೋಜನೆ ವಿರುದ್ಧ ಬಿಜೆಪಿ ಹೋರಾಟ

ಉದಯವಾಣಿ ಸಮಾಚಾರ
ಭಟ್ಕಳ: ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕವಾಗಿದ್ದು ಇದಕ್ಕೆ ನಾಗರೀಕರ
ಹಾಗೂ ಬಿ.ಜೆ.ಪಿ. ತೀವ್ರ ವಿರೋಧವಿದೆ ಎಂದು ಮಾಜಿ ಶಾಸಕ ಹಾಗೂ ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ
ಹೇಳಿದರು.

ಭಟ್ಕಳ ಬಿ.ಜೆ.ಪಿ. ಮಂಡಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಜಾರಿಗೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಹಸಿರು ನ್ಯಾಯಾಧೀಕರಣ ಸೇರಿದಂತೆ ನ್ಯಾಯಾಲಯದಲ್ಲಿಯೂ ಕೂಡಾ ಹೋರಾಟ ಮಾಡಲಾಗುವುದು. ಪ್ರಥಮ ಹಂತದಲ್ಲಿ ಪ್ರತಿಭಟನೆ ಕೈಗೊಳ್ಳುವುದನ್ನು ನಿರ್ಧರಿಸಲು ಹೊನ್ನಾವರವನ್ನು
ಕೇಂದ್ರವನ್ನಾಗಿರಿಸಿಕೊಂಡು ಶೀಘ್ರದಲ್ಲೇ ಒಂದು ಸಭೆ ಮಾಡಲಾಗುವುದು ಎಂದರು.

ಶರಾವತಿ ನೀರನ್ನು 2800 ಅಡಿ ಎತ್ತರದ ಹಾಗೂ ಸುಮಾರು 480 ಕಿ.ಮೀ. ದೂರದ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಕಾರ್ಯ ಸಾಧುವಲ್ಲ. ಆದರೆ ಈಗಿನ ಕಾಂಗ್ರೆಸ್‌ ಸರಕಾರ ಸುಮಾರು 22 ಸಾವಿರ ಕೋಟಿ ವೆಚ್ಚದ (ಮುಗಿಯುವಾಗ 30 ಸಾವಿರ ಕೋಟಿ ದಾಟುವ ಅಂದಾಜು) ಯೋಜನೆಗೆ ಮುಂದಾಗಿರುವುದು ಸಂಶಯ ಮೂಡಿಸುತ್ತಿದೆ. ಅಲ್ಲದೇ ಪರೋಕ್ಷವಾಗಿ ಇದಲ್ಲಿ ಹಲವು ಭ್ರಷ್ಟ ಕೈಗಳ ಹಸ್ತಕ್ಷೇಪವಿದೆ ಎಂದು ದೂರಿದರು.

ಯೋಜನೆ ವಿರೋಧಿಸಲು ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಚರ್ಚೆ ನಡೆಸಲಾಗಿದೆ. ಶರಾವತಿ ಒಡಲನ್ನು ಅಗೆದು-ಬಗೆದು-ಸೀಳಿ ಪಶ್ಚಿಮಘಟ್ಟದಲ್ಲಿ ದೊಡ್ಡ ದುರಂತ ಸಂಭವಿಸಲು ಎಂದಿಗೂ ಅವಕಾಶ ಕೊಡೆವು. ವಿರೋಧದ ಮಧ್ಯೆಯೂ ಸರಕಾರ ಯೋಜನೆ ಜಾರಿಗೆ ಮುಂದಾದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ. ಹಸಿರು ನ್ಯಾಯಾಧೀಕರಣ, ಸರ್ವೋಚ್ಚ ನ್ಯಾಯಾಲಯದ
ತನಕ ನ್ಯಾಯಕ್ಕಾಗಿ ಹೋರಾಟ ಮಾಡಲೂ ಸಿದ್ಧ.

ಈಗಾಗಲೇ ಪಶ್ಚಿಮಘಟ್ಟ ಪ್ರದೇಶದ ಜನ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ನೂರಾರು ಕಿ.ಮೀ. ಹತ್ತಾರು ಅಡಿ ಆಳಕ್ಕೆ ಅಗೆದು ಪೈಪ್‌ ಹಾಕುವ ಪ್ರಕ್ರಿಯೆಯಲ್ಲಿ ನೂರಾರು ದೈತ್ಯ ಲಾರಿಗಳು, ಯಂತ್ರಗಳು ಓಡಾಡಿ ಮಣ್ಣು ಸಂಪೂರ್ಣ ಶಿಥಿಲ ಪರಿಸ್ಥಿತಿ ನಿರ್ಮಾಣವಾಗಲಿದೆ. 450 ಕಿ.ಮೀ. ದೂರ ಪೈಪ್‌ಲೈನ್‌ ಅಳವಡಿಸಲು ಗುಡ್ಡ ಅಗೆದು ಮರಗಳನ್ನು ಕಡಿದು ಕಾಮಗಾರಿ
ಕೈಗೊಳ್ಳಬೇಕು. ಅಲ್ಲದೇ ಶರಾವತಿಯಿಂದ 30-40 ಟಿ.ಎಂ.ಸಿ. ನೀರನ್ನು ಎತ್ತಿ ಬೆಂಗಳೂರಿಗೆ ತೆಗೆದುಕೊಂಡು ಹೋದರೆ ಹೊಳೆಯಲ್ಲಿ ಉಪ್ಪು ನೀರು ನುಗ್ಗಿ ನದಿ ಪಾತ್ರದಲ್ಲಿರುವ ಸಾವಿರಾರು ಎಕರೆ ಜಮೀನು ನಿಷ್ಪ್ರಯೋಜಕವಾಗಲಿದೆ ಎಂದರು.

ಈಗಾಗಲೇ 16 ಸಾವಿರ ಕೋಟಿ ವೆಚ್ಚ ಮಾಡಿದ ಎತ್ತಿನಹೊಳೆ ಯೋಜನೆಯಲ್ಲಿ  ಒಂದು ಹನಿ ನೀರು ಬೆಂಗಳೂರು ತಲುಪಿಲ್ಲ. ಸರಕಾರದ ಅಧಿಕಾರಿಗಳಲ್ಲಿಯೇ ಗೊಂದಲವಿದ್ದು ಹೇಗೆ ನೀರು ತೆಗೆದುಕೊಂದು ಹೋಗಬೇಕೆನ್ನುವ ಕುರಿತು ಸ್ಪಷ್ಟತೆ ಇಲ್ಲ
ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್‌ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್‌. ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿ.ಜೆ.ಪಿ. ಮಂಡಳ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಹೊನ್ನಾವರದ ರಾಜು ಭಂಡಾರಿ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಪ್ರಮುಖರಾದ ಕೇದಾರ ಕೊಲ್ಲೆ, ಶ್ರೀನಿವಾಸ ನಾಯ್ಕ, ಉಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.