ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ: ರಾಜ್ಯ,ರಾಷ್ಟ್ರ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಆಗ್ರಹ
Team Udayavani, Apr 10, 2022, 5:33 PM IST
ಶಿರಸಿ: ರಾಜ್ಯ, ಕೇಂದ್ರ ಸರಕಾರದಿಂದ ನೀಡಲಾಗುವ ಶಿಕ್ಷಕ ಪ್ರಶಸ್ತಿ ಸಂಖ್ಯೆ ಹೆಚ್ಚಳ. ಆಗಬೇಕು ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ಅಧ್ಯಕ್ಷ ಬಸವರಾಜ ಗುರಿಕಾರ ಹಕ್ಕೊತ್ತಾಯ ಮಾಡಿದರು.
ಅವರು ಭಾನುವಾರ ನಗರದ ಎರಡನೇ ನಂಬರ್ ಶಾಲಾ ಅವಾರದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ಹಮ್ಮಿಕೊಂಡ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ, ರಾಜ್ಯ ಮಟ್ಟದ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೊದಲು 10-15 ರಾಷ್ಟ್ರೀಯ ಪ್ರಶಸ್ತಿ ರಾಜ್ಯಕ್ಕೆ ಬರುತ್ತಿತ್ತು. ಆದರೆ, ಈಗ 2-3 ಬರುತ್ತದೆ. ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಶಿಕ್ಷಕರಿದ್ದ ಕಾರಣದಿಂದ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿ ಸಂಖ್ಯೆ ಹೆಚ್ಚಳ ಮಾಡಬೇಕು ಎಂದರು.
ಕ್ರಿಯಾ ಸಮಿತಿಯಿಂದ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಅಭಿನಂದಿಸಿ ಕೆಲಸ ಮಾಡುತ್ತೇವೆ. ಸರಕಾರೇತರವಾಗಿ ಕೂಡ ಬೆಂಬಲಿಸುವ ಕಾರ್ಯ ಆಗಬೇಕು. ಅಂಥ ಕೆಲಸ ಕ್ರಿಯಾ ಸಮಿತಿ ಮಾಡುತ್ತದೆ. ಕೊರೋನಾ ವಾರಿಯರ್ಸ ಆಗಿ ಕೂಡ ಶಿಕ್ಷಕರು ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮಕೆ ಚಾಲನೆ ನೀಡಿದ, ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಹೊಸ ಶಿಕ್ಷಣ ನೀತಿ ಅರಿವು ನೀಡಿ ಜಾರಿಗೊಳಿಸಬೇಕಿತ್ತು. ಈಗಿರುವ ಶಿಕ್ಷಣ ನೀತಿಯಲ್ಲಿನ ಮಾರ್ಪಡಿಸಬೇಕು. ಈಗ ಇರುವ ಶಿಕ್ಷಕರೂ ಉಳಿಸಿಕೊಂಡು ಕೆಲಸ ಮಾಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ, ಕಲಿಕಾ ಶಿಸ್ತು, ಕಲಿಕಾ ಸಿದ್ಧತೆ ಕಲಿತು ಕೊಂಡರೆ ಯಾವುದನ್ನೂ ಕಲಿಸಬಹುದು. ರಾಷ್ಟ್ರೀಯ ಶಿಕ್ಷಣ ಸಿದ್ದತೆ ಮಕ್ಕಳ ಮನಸ್ಸಿನ ಹಾಗೂ ದೈಹಿಕ ಸಾಧ್ಯತೆಯ ಮೇಲೂ ಇದೆ ಎಂದರು.
ವೇದಿಕೆಯಲ್ಲಿ ರಾಜ್ಯ ಮಟ್ಟದ ಶಿಕ್ಷಣಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಯಟ್ ಉಪ ನಿರ್ದೇಶಕ ಡಿ.ಆರ್.ನಾಯಕ ಬಿಇಓ ಎಂ.ಎಸ್.ಹೆಗಡ, ಸುರೇಶ ಪ್ರಮುಖರಾದನಾಗರಾಜ್ ಗಾಂವಕರ್, ದಿನೇಶ ನಾಯ್ಕ, ನಾರಾಯಣ ನಾಯ್ಕಮಾರುತಿ ಕಾಕನೂರು ರಮೇಶ ಅಂಬಿಗೇರ ಇತರರು ಇದ್ದರು.
ಚಾರಿತ್ರ್ಯವಂತ ಮಕ್ಕಳ ನಿರ್ಮಾಣ ಆಗಬೇಕು. ಶಿಕ್ಷಣ ನೀತಿಗಿಂತ ಮಿಗಿಲಾದ ಕಾರ್ಯ ಅದು. ಶಿಕ್ಷಕ ಹಾಗೂ ಮಕ್ಕಳ ನಡುವೆ ಒಳ್ಳೆ ವಾತಾವರಣ ಇಟ್ಟುಕೊಳ್ಳಬೇಕು.-ಪ್ರೋ.ಕೆ.ಎನ್.ಹೊಸ್ಮನಿ, ನಿವೃತ್ರ ಪ್ರಾಧ್ಯಾಪಕ
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮುಂದಿನ ಶಿಕ್ಷಣಿಕ ವರ್ಷದೊಳಗೆ ತರಬೇತಿ ಕೂಡ ಯೋಜಿಸಲಾಗಿದೆ. ಮಗುವಿಗೆ ಕಲಿಕಾ ತರಬೇತಿ ನೀಡಲಾಗುತ್ತದೆ. – ಡಿ.ಆರ್.ನಾಯಕ, ಡಯಟ್ ಪ್ರಾಚಾರ್ಯ
ಯುಜಿಸಿ ಉಪನ್ಯಾಸಕರಿಗೆ ಹಾಗೂ ಅತಿಥಿ ಶಿಕ್ಷಕರಿಗೂ ಸರಕಾರದ ಸೌಲಭ್ಯದಲ್ಲಿ ವ್ಯತ್ಯಾಸ ಇದೆ. -ಜಿ.ಎಂ.ಹೆಗಡೆ ಮುಳಖಂಡ, ಎಂಇಎಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.