16 ರಂದು ಕರಾವಳಿ ಪರಿಸರ ಸ್ಥಿತಿಗತಿ ವಿಚಾರ ಸಂಕಿರಣ
Team Udayavani, Feb 13, 2019, 11:21 AM IST
ಶಿರಸಿ: ಸಂಕೀರ್ಣ ಸ್ಥಿತಿಯಲ್ಲಿರುವ ಕರಾವಳಿಯ ಅರಣ್ಯ, ಪರಿಸರ ಪರಿಸ್ಥಿತಿ, ಸವಾಲುಗಳು ಹಾಗೂ ಪರಿಹಾರದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಫೆ.16ರಂದು ಭಟ್ಕಳ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮುಂಜಾನೆ 10:30ರಿಂದ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ, ಕರಾವಳಿ ಹಾಗೂ ಪಶ್ಚಿಮ ಘಟ್ಟದ ಪರಿಸರ ಸ್ಥಿತಿಗತಿ ಅತ್ಯಂತ ಸೂಕ್ಷ್ಮ ಹಾಗೂ ಸವಾಲಿನಿಂದ ಕೂಡಿದೆ. ಸಂರಕ್ಷಣೆಗೆ ಹಲವು ಕಾನೂನು ತೊಡಕುಗಳೂ ಇವೆ. ಪಶ್ಚಿಮ ಘಟ್ಟದ ನದಿ ಕಣಿವೆಗಳ ಉಳಿವಿಗೆ ಕರಾವಳಿ ರಕ್ಷಣೆ ಅಗತ್ಯ. ಅತಿಯಾದ ವಾಣಿಜ್ಯೀಕರಣದಿಂದ ಇಲ್ಲಿನ ಜೀವ ವೈವಿದ್ಯಕ್ಕೂ ಕುತ್ತು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಅನೇಕ ಸಂಕಟಗಳೂ ಎದುರಾಗಿವೆ. ಜನ ಜಾಗೃತಿ ಆಗಬೇಕು ಎಂದರು.
ಕಾರವಾರದ ಸೆಂಟರ್ ಫಾರ್ ಪಾಲಿಸಿ ರಿಸರ್ಚ್, ಭಟ್ಕಳದ ಶಿವಶಾಂತಿಕಾ ಸಾವಯವ ಪರಿವಾರ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿವಿ ಸಹಕಾರದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ತಜ್ಞರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿ, ಸಂವಾದ: ಮುಂಜಾನೆ 10ಕ್ಕೆ ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದು, ಜಿಲ್ಲಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಹೋರಾಟಗಾರ ಅನಂತ ಅಶೀಸರ ಪ್ರಾಸ್ತಾವಿಕ ಮಾತನಾಡಲಿದ್ದು, ಅತಿಥಿಗಳಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜಕುಮಾರ, ಅರಣ್ಯಾಧಿಕಾರಿ ಶ್ರೀಧರ, ವಿಜ್ಞಾನಿಗಳಾದ ಡಾ| ಸುಭಾಶ್ಚಂದ್ರನ್, ಕೇಶವ, ಮಂಜು, ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು, ಹೋರಾಟಗಾರ ಬಿ.ಎಚ್. ರಾಘವೇಂದ್ರ ಪಾಲ್ಗೊಳ್ಳುವರು.
ಪ್ರಥಮ ಗೋಷ್ಠಿ ಕರಾವಳಿ ಪರಿಸರ ಪರಿಸ್ಥಿತಿ ಕುರಿತು ನಡೆಯಲಿದ್ದು ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಅಧ್ಯಕ್ಷತೆ ವಹಿಸುವರು. ವಿಜ್ಞಾನಿಗಳಾದ ಡಾ| ಮಹಾಬಲೇಶ್ವರ, ಡಾ| ಪ್ರಕಾಶ ಮೇಸ್ತ, ಡಾ| ವಿ.ಎನ್. ನಾಯಕ, ಅಧಿಕಾರಿ ದಿನೇಶ ಕುಮಾರ ಮಾತನಾಡುವರು. ರಾಜ್ಯ ಪತ್ರಕರ್ತರ ಸಂಘದ ಸದಸ್ಯ ಜಿ.ಸುಬ್ರಾಯ ಭಟ್ಟ ಬಕ್ಕಳ, ಅಬ್ದುಲ್ ಜಬ್ಟಾರ ಉಪಸ್ಥಿತರಿರುವರು.
ಕೃಷಿ ತೋಟಗಾರಿಕೆಯಲ್ಲಿ ಕೀಟನಾಶಕಗಳ ದುರ್ಬಳಕೆ ಹಾಗೂ ತಡೆ, ಸಾವಯವ ಪ್ರಯೋಗದ ಕುರಿತು ಎರಡನೇ ಗೋಷ್ಠಿ ಅಧ್ಯಕ್ಷತೆಯನ್ನು ಪ್ರೊ| ರಘುನಾಥ ವಹಿಸುವರು. ವಿಜ್ಞಾನಿಗಳಾದ ಡಾ| ಜವರೇಗೌಡ, ಶ್ರೀಧರ ಹೆಬ್ಟಾರ, ಕಿಶನ್ ಬಲ್ಸೆ, ಈರಯ್ಯ ದೇವಾಡಿಗ ಮಾತನಾಡುವರು. ನಾಗರಾಜ್ ಬೇಂಗ್ರೆ, ನಾರಾಯಣ ಕೊಲ್ಲೆ ಪಾಲ್ಗೊಳ್ಳುವರು. ಮಧ್ಯಾಹ್ನ 3:30ಕ್ಕೆ ಮುಕ್ತ ಸಂವಾದದಲ್ಲಿ ಆರ್‌ಎಫ್‌ಒ ಶಂಕರ ಗೌಡ, ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಟಾರ, ರಘುನಂದನ ಭಟ್ಟ, ನರಸಿಂಹ ಸಾತೊಡ್ಡಿ, ಭಾಸ್ಕರ ನಾಯಕ, ಕದಂಬದ ವಿಶ್ವೇಶ್ವರ ಭಟ್ಟ ಕೋಟೆಮನೆ, ಗ್ರಾಮ ಅರಣ್ಯ ಸಮಿತಿಯ ರಾಮಾ ನಾಯಕ, ಕಿಸಾನ್ ಸಂಘದ ನಾರಾಯಣ ಭಟ್ಟ, ವನವಾಸಿಯ ಸೋಮು ಗೌಡ, ರವೀಂದ್ರ ಶೆಟ್ಟಿ, ಶಾಂತಾರಾಂ ಸಿದ್ದಿ, ರಮೇಶ ಖಾರ್ವಿ, ಎನ್.ಜಿ. ಸತ್ಯನಾರಾಯಣ ಸುಳ್ಯ, ಸತ್ಯನಾರಾಯಣ ಉಡುಪ, ಗಣಪತಿ ಕೆ., ಪಾಲ್ಗೊಳ್ಳುವರು.
ಸಮಾರೋಪ ಸಮಾರಂಭ ಸಂಜೆ 4ಕ್ಕೆ ಸ್ನೇಹಕುಂಜದ ಅಧ್ಯಕ್ಷ ಎಂ.ಆರ್.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಮಾಜಿ ಶಾಸಕ ಮಂಕಾಳು ವೈದ್ಯ, ಪತ್ರಕರ್ತ ಅಶೋಕ ಹಾಸ್ಯಗಾರ, ಅರಣ್ಯಾಧಿಕಾರಿ ಬಾಲಚಂದ್ರ, ಶಿವಾನಿ ಶಾಂತಾರಾಮ ಭಟ್ಕಳ, ಡಾ| ಜಗದೀಶ, ವಿನೋದ ಪಟಗಾರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ನಿರ್ಣಯ ಅಂಗೀಕಾರ ಕೂಡ ಇದೆ ಎಂದು ವಿವರಿಸಿದರು.
ಪತ್ರಕರ್ತರ ಸಂಘ ಕೂಡ ಪರಿಸರ ಸಂರಕ್ಷಣೆಗೆ ಕೈ ಜೋಡಿಸುತ್ತಿರುವುದು ಅಭಿನಂದನೀಯ.
•ಅನಂತ ಅಶೀಸರ, ಹೋರಾಟಗಾರ
ಪತ್ರಕರ್ತರು ಪರಿಸರದಿಂದ ಹೊರತಾಗಿಲ್ಲ. ಪರಿಸರ ಸಂರಕ್ಷಣೆ ಕೂಡ ನಮ್ಮ ಜವಾಬ್ದಾರಿ. ಈ ಅರಿವಿನ ದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜನೆ.
•ರಾಧಾಕೃಷ್ಣ ಭಟ್ಟ ಭಟ್ಕಳ ಅಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.