ಗ್ರಾಪಂ ನಡೆ ಅಸಮಾಧಾನಕ್ಕೆ ಎಡೆ
Team Udayavani, Apr 9, 2020, 5:56 PM IST
ಶಿರಸಿ: ರೈತರ ಭತ್ತದ ಉತ್ಪನ್ನ ಸಾಗಾಟಕ್ಕೆ ಅನುಮತಿ ನೀಡಲು, ಆರೋಗ್ಯ ತಪಾಸಣೆಗೆ ತೆರಳುವ ವಾಹನಕ್ಕೆ ಇಂಧನ ಒದಗಿಸಲು ಹಣ ವಸೂಲಿ ಮಾಡಿದ ಗ್ರಾಪಂ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಹೆಗಡೆಕಟ್ಟಾ ಪಂಚಾಯ್ತಿಯಲ್ಲಿ ಮಾನಸಿಕ ರೋಗಿಯೊಬ್ಬರ ಆರೋಗ್ಯ ತಪಾಸಣೆಗೆ ತೆರಳಲು ಅಗತ್ಯವಾದ 3 ಲೀಟರ್ ಪೆಟ್ರೋಲ್‌ಗೆ ಅನುಮತಿ ನೀಡಲು 100 ರೂ. ಹಣ ಹಾಗೂ ಭತ್ತವನ್ನು ಅಕ್ಕಿ ಮಾಡಿಸಿಕೊಂಡು ಬರುವ ಅನುಮತಿಗೆ 100 ರೂ. ಹಣ ಕಟ್ಟಿಸಿಕೊಂಡು ವಿವಾದಕ್ಕೆ ಕಾರಣವಾಗಿದ್ದಾರೆ.
ಕೋವಿಡ್ ತುರ್ತುಸ್ಥಿತಿಯಲ್ಲಿ ಗ್ರಾಮಸ್ಥರ ಬದುಕಿಗೆ ನೆರವಾಗಬೇಕಿದ್ದ ಪಂಚಾಯ್ತಿಯೇ ಜನರ ಸುಲಿಗೆ ಮಾಡುತ್ತಿರುವುದು ಅಸಮಾಧಾನಕ್ಕೆ ಮೂಲ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ಎಂ. ರೋಶನ್ ತನಿಖೆಗೆ ಆದೇಶ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಯಾವುದೇ ಸುರಕ್ಷಾ ಕ್ರಮ ಬಳಸದೆ ಜಾನ್ಮನೆ ಪಂಚಾಯ್ತಿಯಲ್ಲಿ ಕಚೇರಿ ಎದುರು ಕಾಮಗಾರಿ ಮಾಡುತ್ತಿರುವ ಕುರಿತು ದೂರು ದಾಖಲಾಗಿದ್ದು, ಈ ಬಗ್ಗೆ ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದೆ ಎಂದು “ಉದಯವಾಣಿ’ಗೆ ಉಪ ವಿಭಾಗಾಧಿಕಾರಿ ಡಾ| ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.