ಶಿರಸಿ: ಐಎಂಎ ಕನ್ನಡ ಬಳಗದ ಉದ್ಘಾಟನೆ
Team Udayavani, Jan 8, 2022, 4:59 PM IST
ಶಿರಸಿ: ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಐಎಂಎ ಕನ್ನಡ ಬಳಗದ ಉದ್ಘಾಟನಾ ಸಮಾರಂಭ ನಡೆಯಿತು.
ಕನ್ನಡ ಬಳಕೆಯನ್ನು ಹೆಚ್ಚಿಸುವ,ಕನ್ನಡ ವೈದ್ಯ ಸಾಹಿತ್ಯವನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಹಾಗೆ, ಸಂಘದ ಎಲ್ಲ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಒಂದು ಗೂಡಿಸುವ ಕನಸಾದ ಈ ವೇದಿಕೆ ಹೊಂದಿದೆ. ಕವಿ ಹೃದಯಿಗಳನ್ನು ಒಂದು ಸಮಾನಸ್ಕ ವೇದಿಕೆಯಲ್ಲಿ ಒಗ್ಗೂಡಿಸಿ ಕನ್ನಡ ಭಾಷೆಯ ಸೊಗಸನ್ನು ಹಂಚಿಕೊಳ್ಳಲು ,ವಿಚಾರಪೂರ್ಣ ವಿನಿಮಯಕ್ಕೆ ಕನ್ನಡ ಬಳಗ ಕೆಲಸ ಮಾಡಲಿದೆ. ಅಸ್ತಿತ್ವಕ್ಕೆ ಬಂದಿದೆ ಎಂದು ಬಳಗದ ಅಧ್ಯಕ್ಷ ಡಾ.ಡಿ.ಎಮ್.ಹೆಗಡೆ ಹೇಳಿದರು. ಇದೇ ವೇಳೆ ಸ್ವತಃ ವೈದ್ಯರೇ ರಚಿಸಿದ ಕವನಗಳನ್ನು ವಾಚಿಸಿದರು.
ಬಳಗ ಉದ್ಘಾಟಿಸಿ ಮಾತನಾಡಿದ ಐಎಮ್ಎ ಶಿರಸಿ ಅಧ್ಯಕ್ಷ ಡಾ.ರಾಮ.ಹೆಗಡೆ, ದೈನಂದಿನ ಕೆಲಸ ಕಾರ್ಯಗಳ ಆಯಾಸವನ್ನು ನೀಗುವ ಶಕ್ತಿ ಸಾಹಿತ್ಯದಲ್ಲಿದೆ ,ಅದರ ಉಪಯುಕ್ತತೆಯನ್ನು ನಾವು ಅರಿಯಬೇಕು ಅಂದರು. ಡಾ.ಕೃಷ್ಣಮೂರ್ತಿ ರಾಯಸದ ಅವರು ಕನ್ನಡದ ಸೊಗಡಿನ ವೈಭವವನ್ನು, ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯನ್ನು ಸೊಗಸಾಗಿ ವರ್ಣಿಸಿದರು. ಗೌರವ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವೈದ್ಯ ಸಾಹಿತಿ ಡಾ.ಕೆ.ಬಿ.ಪವಾರ್, ಕನ್ನಡ ಭಾಷೆಯ ಅಸ್ಮಿತೆ ಉಳಿಸಿಕೊಳ್ಳಬೇಕು. ಅವಳ ತೊಡಪು ಇವಳಿಗಿಟ್ಟು, ಇವಳ ತೊಡುಪು ಅವಳಿಗಿಟ್ಟು, ಚಂದ ನೋಡು ಎಂದು ಬಿ.ಎಮ್. ಶ್ರೀ ಅವರನ್ನು ಉಲ್ಲೇಖಿಸಿ ಎಲ್ಲ ಭಾಷೆಗಳನ್ನು ಗೌರವಿಸುತ್ತ ಸ್ವಭಾಷೆಯನ್ನು ಬೆಳೆಸಬೇಕು ಎಂದರು.
ಕನ್ನಡ ಬಳಗದ ಕಾರ್ಯದರ್ಶಿ ಡಾ.ತನುಶ್ರೀ ಹೆಗಡೆ ನಿರ್ವಹಿಸಿ , ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.