ಅಧ್ಯಕ್ಷರ ವಿರುದ್ಧ ಸಿಡಿದೆದ್ದ ಸದಸ್ಯ ಬಹಿಷ್ಕಾರ
Team Udayavani, Dec 30, 2018, 11:39 AM IST
ಶಿರಸಿ: ತಾಲೂಕಿನ ಬದನಗೋಡ ಗ್ರಾಪಂನ ದಾಸನಕೊಪ್ಪದಲ್ಲಿ ನಡೆದ ಸಾಮಾನ್ಯ ಸಭೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಕೆಲ ಸದಸ್ಯರು ಹಾಲಿ ಅಧ್ಯಕ್ಷರನ್ನು ಕೆಳಗಿಳಿಸಿ, ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿ ಪಿಡಿಒ ಗಣೇಶ ಲಂಬಾಣಿಗೆ ಮನವಿ ಸಲ್ಲಿಸಿದರು.
ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಂದ ಕಳೆದೆರಡು ತಿಂಗಳಿನಿಂದ ಗ್ರಾ.ಪಂ ಸಾಮಾನ್ಯ ಸಭೆಯನ್ನು ಕೆಲ ಸದಸ್ಯರು ಬಹಿಷ್ಕರಿಸುತ್ತಿದ್ದು, ಕೋರಂ ಕೊರತೆಯಿಂದ ಮುಂದೂಡಲ್ಪಡುತ್ತಿದೆ. ಇದರಿಂದಾಗಿ ಗ್ರಾ.ಪಂ ವ್ಯಾಪ್ತಿಯ ಹಲವು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಎಂದು ಜನ ಆರೋಪಿಸಿದರು.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಯಿಸಿದ ತಾಲೂಕಿನ ಬದನಗೋಡ ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಗ್ರಾಪಂನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ತಾಪಂ ವರದಿ ನೀಡಿದೆ. ಸದಸ್ಯರು ಸುಳ್ಳು ಆರೋಪ ಮಾಡಿದ್ದಾರೆ. 21 ಅಧಿ ಕಾರಿಗಳು ಇಲ್ಲಿಯ ತನಕ ಬದಲಾಗಿದ್ದಾರೆ. ವಯಕ್ತಿಕ ಕಾರಣದಿಂದ ಈ ವಿರೋಧವಾಗಿದೆ ಎಂದರು.
ಸೋಲಾರ್ ಲೈಟ್, ಜೇನು ಪೆಟ್ಟಿಗೆ, ಪಶು ಭಾಗ್ಯ, ಕುರಿ ಭಾಗ್ಯ ಇತ್ಯಾದಿ ಎಲ್ಲದರಲ್ಲಿಯೂ ಸದಸ್ಯರು ದುಡ್ಡು ಹೊಡೆಯುವ ಕೆಲಸಕ್ಕೆ ಅಡ್ಡಿಯಾಗಿದ್ದಕ್ಕೆ ಈ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ನಿರ್ಮಾಣವಾಗುತ್ತಿದೆ. ಅನುದಾನ ಸೋರಿಕೆಗೆ, ಅವ್ಯವಹಾರಕ್ಕೆ ಅವಕಾಶ ಇರದಿರುವುದೇ ಅವರಿಗೆ ತೊಂದರೆಯಾಗಿದೆ ಎಂದರು.
ರಾಜಕೀಯ ದುರುದ್ದೇಶದಿಂದ ಅಧ್ಯಕ್ಷ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. 2 ಸದಸ್ಯರು ಅಹಂಭಾವದಿಂದ ವ್ಯವಸ್ಥೆ ಹಾಳು ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಚಿಂತನೆ ಮಾಡದೇ ವಯಕ್ತಿಕ ಹಿತಾಸಕ್ತಿ, ಲಾಭಕ್ಕೆ ಚರ್ಚಿಸುವುದೇ ಉದ್ದೇಶವಾಗಿದೆ. ಕಳೆದ ಒಂದೂವರೆ ತಿಂಗಳಿಂದ ಬದನಗೋಡದ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾ.ಪಂ. ಸದಸ್ಯೆ ಆತ್ಮಾದೇವಿ ಮಾತನಾಡಿ, ಪ್ರತಿ ಸಭೆಯಲ್ಲಿ ತಕರಾರು ಬಿಟ್ಟು ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಕಳೆದ ಒಂದು, ಒಂದೂವರೆ ತಿಂಗಳಿನಿಂದ ಕುಡಿಯಲು ನೀರಿಲ್ಲ. ತಕರಾರು ಮಾಡುವುದೇ ಇವರ ಕೆಲಸ. ಇದು ಅಭಿವೃದ್ಧಿಗೆ ಮಾರಕವಾಗಿದೆ. ತಕರಾರಿನಿಂದ ಶಾಲಾ ಆವರಣ ಗೋಡೆಯ ನಿರ್ಮಾಣದ 13 ಲಕ್ಷ ರು.ಗಳನ್ನು ತಡೆಹಿಡಿದಿದ್ದಾರೆ ಎಂದರು.
ಸದಸ್ಯ ಗಣೇಶ ಕ್ಷತ್ರಿಯ ಮಾತನಾಡಿ, ಬಹುಮತ ಇಲ್ಲದ ಅಧ್ಯಕ್ಷರು ಕರೆದ ಸಾಮಾನ್ಯ ಸಭೆ ವಿರೋಧಿಸಿ, ಬಹಿಷ್ಕರಿಸಿ ಹೊರಬಂದಿದ್ದೇವೆ. ಭ್ರಷ್ಟಾಚಾರ ಮಾಡುವ ಅಧ್ಯಕ್ಷರು ಅಭಿವೃದ್ಧಿ ಬಿಟ್ಟು ಬಹುಮತ ಇಲ್ಲದೇ ಕುಳಿತಿದ್ದಾರೆ ಎಂದರು.
ಸದಸ್ಯ ಮಂಜುನಾಥ ಪಾಟೀಲ್ ಮಾತನಾಡಿ, 21 ಸದಸ್ಯರ ಗ್ರಾಪಂ ಇದಾಗಿದೆ. 2-3 ತಿಂಗಳಿನಿಂದ ಸಭೆ ಮುಂದೂಡಲಾಗಿದೆ. 13 ಲಕ್ಷ ಅಭಿವೃದ್ಧಿ ಹಣ ಮರಳಿ ಹೋಗುವಂತಾಗಿದೆ. ಸದಸ್ಯರಿಗೆ ಕಷ್ಟವಾಗಿದೆ. 8 ಗ್ರಾಮದ ಎಲ್ಲ ಶಾಲೆಗಳಿಗೂ ನೀರಿನ ಸಮಸ್ಯೆಯಿದೆ. ಕುಪ್ಪಗಡ್ಡೆ ಶಾಲೆಯ ಬೋರ್ ಸಮಸ್ಯೆಯಾಗಿದೆ, ದುರಸ್ತಿ ಮಾಡಲು ಆಗುತ್ತಿಲ್ಲ. ವಾಟರ್‌ಮನ್ ಬಿಲ್ ನಾವು ಕೊಟ್ಟಿಲ್ಲ. ಸಾಮಾನ್ಯ ಸಭೆ ಪ್ರತಿ ತಿಂಗಳು ಕರೆಯುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದೂ ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.