ಶಿರಸಿ: ಪ್ರಾತಃ-ಸಂಧ್ಯಾಕಾಲದ ಪೂಜೆ-ಪಠಣದಿಂದ ಸಮೃದ್ಧಿ
Team Udayavani, Aug 16, 2023, 6:05 PM IST
ಶಿರಸಿ: ಪ್ರತಿಯೊಬ್ಬರು ದಿನವೂ ಸಂಧ್ಯಾ ಕಾಲದಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡಬೇಕು. ಇದರಿಂದ ವ್ಯವಹಾರ, ಆರೋಗ್ಯ ಎಲ್ಲವೂ ಪ್ರಗತಿಯಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧಿಶರಾದ ಜಗದ್ಗುರು
ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀಯಲ್ಲಿ ಚಾತುರ್ಮಾಸ್ಯ ವೃತಾಚರಣೆಯ ಹಿನ್ನೆಲೆಯಲ್ಲಿ ಚಿನ್ನಾಪುರ ಸೀಮೆಯ ಮೇಲ್ತರ್ಪು, ಕೆಳತರ್ಪಿನ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.
ಸಂಧ್ಯಾ ಕಾಲದಲ್ಲಿ ದೇವರ ಪೂಜೆ, ಸ್ತೋತ್ರ ಪಠಣ, ಸಹಸ್ರನಾಮ, ಪ್ರಾಣಾಯಾಮ, ಯೋಗಾಸನ ಮಾಡದೇ ಇರುವದೇ ಬಹಳಷ್ಟು ಜನರ ಆರೋಗ್ಯ ಹಾಳಾಗಲು ಕಾರಣ. ಪ್ರತಿದಿನ ಮುಂಜಾನೆ ಮತ್ತು ಸಂದ್ಯಾಕಾಲದಲ್ಲಿ ಪ್ರಾಣಾಯಾಮ, ಆಸನ, ಪೂಜೆ ಮಾಡಬೇಕು ಎಂದರು.
ಸೂರ್ಯೋದಯ, ಸೂರ್ಯಾಸ್ತದ ಕಾಲವೇ ಸಂಧ್ಯಾ ಕಾಲಗಳು. ಇವು ದೇವರ ಪೂಜೆ, ಜಪ, ಅನುಷ್ಠಾನಕ್ಕೆ ಪ್ರಶಸ್ತವಾದ ಕಾಲ. ಈ ವೇಳೆಯಲ್ಲಿ ಯಾವುದೇ ಅನುಷ್ಠಾನ ಮಾಡಿದರೂ ಹೆಚ್ಚು ಫಲ. ಮನಸ್ಸು ದೇವರಲ್ಲಿ ಏಕಾಗೃತೆಗೊಳ್ಳುವುದು ಸಂಧ್ಯಾ ಕಾಲದಲ್ಲಿ ಹೆಚ್ಚು. ಒಂದೊಂದು ಕಾಲವು ಈ ದೇಹದ ಮೇಲೆ ಬೇರೆ ಬೇರೆ ಪರಿಣಾಮ ಉಂಟು ಮಾಡುತ್ತದೆ. ಅದು ಮನಸ್ಸಿನ ಪರಿವರ್ತನೆಗೂ ಕಾರಣವಾಗುತ್ತದೆ. ಸಂಧ್ಯಾ ಕಾಲದಲ್ಲಿ ಏಕಾಗೃತೆಗೆ ಅನುಕೂಲ ಇರುತ್ತದೆ. ಆದ್ದರಿಂದಲೇ ಸಂಧ್ಯಾ ವಂದನೆ ಎಂಬುದು ಬಂದಿದೆ ಎಂದು ವಿವರಿಸಿದರು.
ಬೆಳಗಿನ ಪೂಜೆ ಇಡೀ ದಿನದ ವ್ಯವಹಾರದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ. ವ್ಯವಹಾರ ಮಾಡಲು ಚುರುಕು ತನ ಬರುತ್ತದೆ. ನೀವು ಹೇಳುವಂತೆ ಒಳ್ಳೆಯ ಮೂಡ್ ಬಂದಿರುತ್ತದೆ. ಹಗಲಿನ ಪ್ರಯೋಜನಕ್ಕಿಂತ ಅಮೂಲ್ಯ ಪ್ರಯೋಜನ ಸಂಧ್ಯಾ ಕಾಲದ ಅನುಷ್ಠಾನದಿಂದ ಆಗಲಿದೆ. ಉತ್ತಮವಾದ ನಿದ್ದೆ ಬರುತ್ತದೆ. ನಿದ್ದೆ ಸಮರ್ಪಕವಾಗಿ ಬಾರದೇ ಇದ್ದರೆ ಮಾನಸಿಕ, ದೈಹಿಕ ಸಮಸ್ಯೆಗಳು ಆಗುತ್ತದೆ. ನಿದ್ರಾ ಹೀನತೆ ತಪ್ಪಲು ಸಂಜೆಯ ಸಂಧ್ಯಾ ಕಾಲದ ಜಪಾನುಷ್ಠಾನ ನೆರವಾಗುತ್ತದೆ. ಇದು ನಿದ್ದೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಪ್ರತಿಯೊಂದು ಜೀವಿಗಳ ಮನಸ್ಸೂ ಗಾಢ ನಿದ್ರೆಯಲ್ಲಿ ಪರಮಾತ್ಮನ ಸಾನ್ನಿಧ್ಯಕ್ಕೆ ಹೋಗುತ್ತವೆ. ಗಾಢ ನಿದ್ದೆಗೆ ಸಂಧ್ಯಾ ಕಾಲದ ದೇವರ ಧ್ಯಾನ ನೆರವಾಗುತ್ತದೆ. ದಿನದ 24 ಗಂಟೆಯಲ್ಲಿ 6 ಗಂಟೆ ನಿದ್ದೆ ಬಂದರೆ ಸಾಕು. ಅದರಲ್ಲಿ 2 ತಾಸಾದರೂ ಗಾಢವಾದ ನಿದ್ದೆ ಬೇಕು. ಆ ನಿದ್ದೆಗೆ ಹೋಗದೇ ಇದ್ದರೆ ಮಾನಸಿಕ-ದೈಹಿಕ ಆರೋಗ್ಯ ಹದಗೆಡುತ್ತದೆ. ಗಾಢ ನಿದ್ದೆಗೆ ಹೋಗಲು ಸಂಧ್ಯಾ ಕಾಲದ ದೇವರ ಧ್ಯಾನ, ಸ್ಮರಣೆ ಮಾಡಬೇಕು. ಈ ಪ್ರಯೋಜನದ ಅನುಭವ ಎಲ್ಲರಿಗೂ ಬರಬೇಕು. ಆರೋಗ್ಯ, ವ್ಯವಹಾರದ ಉನ್ನತಿ ಎಲ್ಲರಲ್ಲೂ ಆಗಬೇಕು ಎಂದು ಆಶಿಸಿದರು.
ಈ ವೇಳೆ ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ನಾರಾಯಣ ಹೆಗಡೆ ಬೀಗಾರ, ತಿಮ್ಮಣ್ಣ ಭಟ್ಟ ನಡಿಗೆಮನೆ, ರವೀಂದ್ರ ಕೋಮಾರ್ ಸೂತ್ರೆಮನೆ, ಶ್ರೀಪಾದ ಭಟ್ಟ ಕಳಚೆ, ಆರ್.ಎಸ್.ಹೆಗಡೆ ಭೈರುಂಬೆ ಇತರರು ಇದ್ದರು.
ದೇವರಿಗೆ ಪೂಜೆ ಆಗಲಿ ಪೂಜೆ ಮಾಡಬೇಕಲ್ಲಾ ಎಂದು ಮಾಡಬೇಡಿ. ಮನಸ್ಸಿನಲ್ಲಿ ಶ್ರದ್ಧೆ, ಏಕಾಗೃತೆ, ಶಾಂತಿಯಿಂದ ದೇವರ ಪೂಜೆ ಮಾಡಬೇಕು. ದೇವರಿಗೆ ಪೂಜೆ ಎಂದರೆ ನೋಡುವವರಿಗೆ ಕಂಡರಾಯಿತು ಎಂಬಂತೆ ಆಗಬಾರದು.
ಸ್ವರ್ಣವಲ್ಲೀ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.