ಅಮ್ಮನ ಜಾತ್ರೆಗೆ ರಥೋತ್ಸವದ ಮೆರಗು

ಮಾರಿಕಾಂಬಾ ಮಾತಾಕೀ ಜೈ.... ಮಾರಮ್ಮ ಉಧೋ ಉಧೋ... ಭಕ್ತರ ಜಯಘೋಘ

Team Udayavani, Mar 17, 2022, 11:23 AM IST

4

ಶಿರಸಿ: ಭಕ್ತರ ಜಯಘೋಷ, ಮಾರಿಕಾಂಬಾ ಮಾತಾಕಿ ಜೈ, ಮಾರಮ್ಮ ಉಧೋ ಉಧೋ ಘೋಷಗಳ ಮಧ್ಯೆ, ವಾದ್ಯ, ಡೊಳ್ಳು ಕುಣಿತಗಳ ನಡುವೆ ಮಾರಿಕಾಂಬಾ ದೇವಿಯ ಶೋಭಾಯಾತ್ರೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯದ ಸಭಾ ಮಂಟಪದಲ್ಲಿ ವಿರಾಜಮಾನಳಾದ ಅಮ್ಮ ಬುಧವಾರ ಬೆಳಗ್ಗೆ 7:06ರ ಬಳಿಕ ಅಲ್ಲಿಂದ ಎದ್ದು 7:10ರ ಸುಮಾರಿಗೆ ದೇವಾಲಯದಿಂದ ಹೊರ ಬಂದಳು. ಅಮ್ಮನ ದರ್ಶನ ಹೊರಗೆ ಆಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ನೂರಾರು ಬಾಬುದಾರರ, ಅರ್ಚಕರ, ಧರ್ಮದರ್ಶಿಗಳ ಸಹಕಾರದಿಂದ, ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಸರ್ವಾಲಂಕಾರ ಭೂಷಿತ ದೇವಿ 7.21 ನಿಮಿಷಕ್ಕೆ ರಥ ಏರಿದಳು. ರಥಾರೂಢ ದೇವಿಯನ್ನು ಕೆಲವು ಸಂಪ್ರದಾಯ ಪೂರ್ಣಗೊಳಿಸಿದ ಬಳಿಕ 8:36ಕ್ಕೆ ರಥೋತ್ಸವ ಆರಂಭಗೊಂಡಿತು. ಮಾರಿಕಾಂಬೆ ದರ್ಶನಕ್ಕೆ ಕರಾವಳಿ, ಮಲೆನಾಡು, ಬಯಲು ಸೀಮೆಯವರಷ್ಟೇ ಅಲ್ಲ ಮುಂಬಯಿ, ತಮಿಳುನಾಡು, ಆಂದ್ರ ಪ್ರದೇಶದಿಂದಲೂ ಆಗಮಿಸಿದ್ದಾರೆ. ಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಭಜಕರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಭಕ್ತರ ಹರ್ಷ  ಉದ್ಘಾರ: ಭಗವಾಧ್ವಜ ಹೊತ್ತ ಗಗ್ಗರ, ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪತಾಕೆ ಹಿಡಿದು ರಥೋತ್ಸವ ನಡೆಸಿದರು. ರಾಜ ಗಾಂಭೀರ್ಯದಲ್ಲಿ ಮಧುವಣಗಿತ್ತಿಯ ಸಿಂಗಾರದ ನವ ವಧು ಮಾರಿಕಾಂಬೆ ಒಂದು ಕಿಮೀ ದೂರ ರಥದಲ್ಲಿ ಬಂದಳು. ರಸ್ತೆಯ ಇಕ್ಕೆಲದಲ್ಲಿ ಭಕ್ತರು ಹಾರುಗೋಳಿ, ಬಾಳೆಹಣ್ಣು, ಕಡಲೆ, ಉತ್ತತ್ತಿ, ಹಣ ರಥಕ್ಕೆ ಎಸೆದು ಹರಕೆ ಸಲ್ಲಿಸಿದರು.

ಎಲ್ಲವೂ ಅಮ್ಮನಿಗಾಗಿ:  ಸಿಂಗಾರಗೊಂಡ ರಥದಲ್ಲಿ ದೇವಿ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದರು. ಮನೆಯ ಮಹಡಿ ಏರಿ ಕೂತಿದ್ದರು. ದೇವಿಯ ದರ್ಶನ ಕಾಣುತ್ತಿದ್ದಂತೆ ಉಧೋ ಉಧೋ ಎನ್ನುವ ಸವದತ್ತಿ ಎಲ್ಲಮನ ಭಕ್ತರು, ಗಾಳಿಮಾರ್ಯ ಕುಟುಂಬದವರು ಚಾಟಿ ಬೀಸಿಕೊಂಡು ಗಮನ ಸೆಳೆದರು. ಡೊಳ್ಳು, ಪಂಚವಾದ್ಯ ಮೊಳಗಿದವು.

ಮೇಟಿ ದೀಪಕ್ಕೆ ಕಾದ ದೇವಿ: 11:30ರ ವೇಳೆಗೆ ಭಕ್ತರ ಪ್ರೀತಿಗೆ ಸರಸರನೆ ಜಾತ್ರಾ ಗದ್ದುಗೆ ಬಳಿ ಬಂದ ದೇವಿ ಹೊತ್ತ ರಥ ತಾಸು ಚಪ್ಪರ ಸಮೀಪವೇ ನಿಂತುಕೊಳ್ಳುವಂತೆ ಆಯಿತು. ರಥದಿಂದ ಅಮ್ಮನನ್ನು ಇಳಿಸಿ ಗದ್ದುಗೆಗೆ ಕರೆತರಲು ಮೇಟಿ ದೀಪ ತರಬೇಕು. ಅದನ್ನು ಯುಗಾದಿ ತನಕ ರಕ್ಷಿಸುವ ಜವಾಬ್ದಾರಿ ಹೊತ್ತವರು ದೇವಸ್ಥಾನ ಸನಿಹ ಹೋಗಿ ತಂದರು. ಅಮ್ಮನ ಶಕ್ತಿ ದೀಪದಲ್ಲಿ ಇರುತ್ತದೆ ಎಂಬ ನಂಬಿಕೆ ಇದೆ. ದೀಪ ಗದ್ದುಗೆ ಬಳಿ ಬರುತ್ತಿದ್ದಂತೆ ರಥದಿಂದ ಮಾರಿಕಾಂಬೆಯನ್ನೂ ಇಳಿಸಿ ಹಾಕಲಾದ ದೇವಿಯ ಮಾರ್ಗದ ಬಿಳೆ ಬಟ್ಟೆ ಮೇಲೆ ಅಮ್ಮನನ್ನು ಕರೆತಂದು 12:53ರ ಸುಮಾರಿಗೆ ಪ್ರತಿಷ್ಠಾಪಿಸಲಾಯಿತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.