ಶಿರಸಿ: ಬಾಯಾರಿದ ಜೀವಕ್ಕೆ”ಜಲ’ ಕೊಡುತ್ತಿದೆ ಕಾರ್ಯಪಡೆ
Team Udayavani, May 29, 2023, 10:32 AM IST
ಶಿರಸಿ: ಕಳೆದ ಏಳು ವರ್ಷಗಳಿಂದ ವರ್ಷಕ್ಕೆ ಕನಿಷ್ಠ ಐದಾರು ಕೆರೆಗಳ ಅಭಿವೃದ್ದಿ ಮಾಡುತ್ತಿರುವ ಶಿರಸಿಯ ಜೀವಜಲ ಕಾರ್ಯ ಪಡೆ ಕೇವಲ ಕೆರೆಯ ಹೂಳೆತ್ತಿವಿಕೆ ಮಾತ್ರವಲ್ಲ, ನೀರಿಲ್ಲದ ಜನರಿಗೆ ಕುಡಿಯುವ ನೀರನ್ನು ಮನೆ ಬಾಗಿಲಿಗೆ ಕೊಡುವ ಕಾಯಕ ಮಾಡುತ್ತಿದೆ.
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರ ಕನಸಿನ ನೆರವಿನ ಹಸ್ತದ ಯೋಜನೆಯಾಗಿದೆ. “ಬಾಯಾರಿದವರಿಗೆ ಶುದ್ಧ ಕುಡಿಯುವ ನೀರು ಕೊಡುವ ಕಾಯಕ’ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಮೊದ ಮೊದಲು ಅಲ್ಲಿ ಇಲ್ಲಿ ಬೇರೆ ಬೇರೆ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದ ಕಾರ್ಯಪಡೆಯ ಹೆಬ್ಬಾರರು ನಂತರ ಕಾರ್ಯಪಡೆಗೆ ನೀರಿ ಟ್ಯಾಂಕರ್ ವಾಹನ ಖರೀದಿಸಿ ನೀರು ಬೇಕೆಂದವರಿಗೆ ಧಾರಾಳವಾಗಿ ನೀಡುವ ವ್ಯವಸ್ಥೆ ಮಾಡಿದ್ದಾರೆ.
ಈ ವರ್ಷದ ಬಿರು ಬೇಸಗೆಯ ಕಾರಣದಿಂದ ಶಿರಸಿಗೆ ನೀರು ಪೂರೈಸುವ ಕೆಂಗ್ರೆ ಹಾಗೂ ಮಾರಿಗದ್ದೆಯ ಹಳ್ಳದಲ್ಲೂ ನೀರಿನ ಕೊರತೆ ಆಗಿದ್ದು ನಗರಸಭೆ ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದೆ. ಕೆಲವಡೆ ಬಾವಿ ನೀರು ಆಶ್ರಯಸಿಕೊಂಡವರಿಗೆ ತಳ ಕಂಡಿದೆ.
ಹೀಗಾಗಿ ನಗರದ ಮರಾಠಿಕೊಪ್ಪ ಸೇರಿದಂತೆ ಹಲವಡೆ ನೀತಿನ ತುಟಾಗ್ರತೆ ಉಂಟಾಗಿದೆ. ಈ ತುಟಾಗ್ರತೆಯನ್ನು ಜೀವ ಜಲ ಕಾರ್ಯಪಡೆ ನೀಗಿಸುತ್ತಿದೆ. ಬೆಳಗಿನಿಂದ ಸಂಜೆಯ ತನಕ ನೀರು ಬೇಕಾದವರಿಗೆ ಒಂದೇ ಒಂದು ರೂಪಾಯಿ ಕೂಡ ಪಡೆಯದೇ ನೀಡುತ್ತಿದೆ. ಶಿರಸಿ ನಗರ ಹಾಗೂ ಸುತ್ತಲಿನ 5 ಕಿಮಿ ವ್ಯಾಪ್ತಿಯಲ್ಲಿ ತನ್ನ ಸೇವಾ ಕೈಂಕರ್ಯ ನಡೆಸುತ್ತಿದೆ. ನಗರದ ಮರಾಠಿಕೊಪ್ಪ ಅಂಜನಾದ್ರಿ ದೇವಸ್ಥಾನದ ಬಳಿ ತೆಗೆಯಲಾದ ಬೋರ್‌ವೆಲ್‌ನಲ್ಲಿ ಗುಣಮಟ್ಟದ ನೀರಿದ್ದು, ಅದನ್ನು ಅಗತ್ಯ ಉಳ್ಳವರಿಗೆ
ನೀಡುತ್ತಿದೆ. ಜಲ ಸಂರಕ್ಷಣೆ ಜೊತೆಗೆ ಕಾರ್ಯಪಡೆ ಜಲ ನೀಡಿ ದಾಹ ಕಡಿಮೆ ಮಾಡುತ್ತಲಿದೆ.
ಭೂಮಿಯ ಒಡಲಿನ ದಾಹಕ್ಕೆ ಕೆರೆ ಮದ್ದಾದರೆ, ಜನರ ದಾಹಕ್ಕೆ ಕಾರ್ಯಪಡೆಯ ಟ್ಯಾಂಕರ್ ಮೂಲಕ ಉಚಿತವಾಗಿ ಸ್ಪಂದಿಸುತ್ತಿದೆ. ಕಾರ್ಯಪಡೆಯ ಸಮಾಜಮುಖಿ ನಡಿಗೆ ಹಲವರ ಶ್ಲಾಘನೆಗೆ ಕಾರಣವಾಗಿದೆ.
ಜೀವಜಲ ಕಾರ್ಯಪಡೆ ಟ್ಯಾಂಕರ್ ನೀರು ನಮ್ಮ ಬೇಸಗೆಯ ಜಲ ಸಂಕಷ್ಟ ನಿವಾರಿಸುತ್ತಿದೆ. ನೆಂಟರಿಷ್ಟರು ಬಂದಾಗ ಮರ್ಯಾದೆ ಉಳಿಸಿದೆ.
*ಗಿರಿಜಾ, ಮರಾಠಿಕೊಪ್ಪದ ಮಹಿಳೆ
ಐದು ಕಿಮಿ ವ್ಯಾಪ್ತಿಯಲ್ಲಿ ಯಾರಿಗೇ ಕುಡಿಯುವ ನೀರಿನ ಸಮಸ್ಯೆ ಆದರೂ ನೆರವಾಗಬೇಕು ಎಂಬ ಆಶಯದಲ್ಲಿ ಕೆಲಸ ಮಾಡಲಾಗುತ್ತಿದೆ. ಜನರ ಬಾಯಾರಿಕೆ ನೀಗಿಸುವ ಖುಷಿಗಿಂತ ದೊಡ್ಡದೇನಿಲ್ಲ.
ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲ ಕಾರ್ಯಪಡೆ
*ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.