ಕಾಯಿಲೆ ಭೀತಿಯಲ್ಲಿ ಶಿರವಾಡ ಗ್ರಾಮಸ್ಥರು

•ಹಳ್ಳ-ಬಾವಿಗಳಿಗೆ ಸೇರುತ್ತಿದೆ ಕಲ್ಮಷಯುಕ್ತ ನೀರು•ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ

Team Udayavani, Jul 3, 2019, 10:40 AM IST

uk-tdy-1..

ಕಾರವಾರ: ಸಮೀಪದ ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕವೇ ತ್ಯಾಜ್ಯದ ವಾಸನೆ ಹಾಗೂ ನಿರ್ವಹಣೆ ಸಮಸ್ಯೆ ಎದುರಿಸುತ್ತಿದೆ. ಶಿರವಾಡ ಗ್ರಾಮಸ್ಥರು, ಜನಪ್ರತಿನಿಧಿಗಳು ಜಿಲ್ಲಾಡಳಿತ ಕಂಡು ಸಮಸ್ಯೆಯನ್ನು ನಿವೇದಿಸಿದ್ದಲ್ಲದೇ, ತ್ಯಾಜ್ಯ ಘಟಕದ ವಿಡಿಯೋ ಚಿತ್ರಣವನ್ನೂ ಸಲ್ಲಿಸಿದರು.

ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಘನತ್ಯಾಜ್ಯವನ್ನು ಹಸಿಕಸ, ಒಣಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ವಿಂಗಡಿಸಿ ನಗರ ಸಮೀಪದ ಶಿರವಾಡ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆಯಾದರೂ, ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಲಾಗುತ್ತಿಲ್ಲ. ಘನತ್ಯಾಜ್ಯ ಘಟಕದ ಗೋಡೆ ಒಡೆದು ತ್ಯಾಜ್ಯ ನೀರು ಹರಿಯುತ್ತಿದೆ. ಅದು ಬಾವಿ ಹಳ್ಳಕ್ಕೆ ಸೇರುತ್ತಿದೆ. ರೋಗ ರುಜಿನಿ ಹರಡುವ ಭೀತಿ ಎದುರಾಗಿದೆ.

ಕೆಯುಡಿಎಫ್‌ಸಿ ನಿಧಿಯಲ್ಲಿ ಘನತ್ಯಾಜ್ಯ ಘಟಕ: ನಗರಸಭೆಗೆ ಹರಿದು ಬಂದ ಕರ್ನಾಟಕ ಮೂಲಭೂತ ಸೌಕರ್ಯಗಳ ಜಾರಿ ಯೋಜನೆಯಲ್ಲಿ ಕಾರವಾರಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಎರಡು ಎಕರೆ ಭೂಮಿಯಲ್ಲಿ 2 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿತ್ತು. ಆ ತ್ಯಾಜ್ಯ ಗುಂಡಿ 4 ವರ್ಷಗಳಲ್ಲಿ ತುಂಬಿತು. ಆಗ ಅದರ ಪಕ್ಕದ ಖಾಲಿ ಭೂಮಿಗೆ ತ್ಯಾಜ್ಯ ವಿಲೇವಾರಿ ಮಾಡಿ, ಮತ್ತಷ್ಟು ವ್ಯವಸ್ಥಿತವಾಗಿ ತ್ಯಾಜ್ಯ ಹೂಳುವ ವ್ಯವಸ್ಥೆಗೆ ನಗರಸಭೆ ಮುಂದಾಯಿತು. ಆದರೂ ತ್ಯಾಜ್ಯ ನಿರ್ವಹಣೆ ಮತ್ತಷ್ಟು ಸಮಸ್ಯೆಯಾಯಿತು, ನಗರದಲ್ಲಿ 19321 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿವೆ. ಹೋಟೆಲ್, ಸಂತೆ, ವಸತಿ ಗೃಹಗಳು, ವಸತಿಗಳಿಂದ ತ್ಯಾಜ್ಯ ದಿನವೂ ಟನ್‌ಗಟ್ಟಲೆ ಉತ್ಪತ್ತಿಯಾಗುತ್ತಲೇ ಇದೆ. ಕೆಲ ವಾರ್ಡ್‌ಗಳಿಂದ 9ಕ್ಕೂ ಹೆಚ್ಚು ಮಿನಿ ಆಟೋ ಟಿಪ್ಪರ್‌ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ಮನೆಯಿಂದ ಕಸ ಸಂಗ್ರಹಣೆಗೆ ವರ್ಷಕ್ಕೆ 180 ರೂ. ಸಂಗ್ರಹಿಸಲಾಗುತ್ತಿದೆ. ಆದರೂ ಕಸ ನಿರ್ವಹಣೆ ಬಗ್ಗೆ ದೂರುಗಳು ಕೇಳಿ ಬರಲಾರಂಭಿಸಿವೆ. ಈಚಿನ ಎರಡು ಮೂರು ವರ್ಷಗಳಲ್ಲಿ ಶಿರವಾಡದ ಗ್ರಾಮಸ್ಥರು ಘನತ್ಯಾಜ್ಯ ವಿಲೇವಾರಿ ಘಟಕವನ್ನೇ ಸ್ಥಳಾಂತರಿಸಿ ಎಂಬ ಕೂಗು ಎತ್ತಿದ್ದಾರೆ.

ಸತ್ತ ಪ್ರಾಣಿಗಳನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಬಿಸಾಡಲಾಗುತ್ತಿದೆ. ಸತ್ತ ಪ್ರಾಣಿಗಳನ್ನು ಹೂಳುತ್ತಿಲ್ಲ. ಸುತ್ತಮುತ್ತಲ ಜನತೆ ಬದುಕು ನರಕವಾಗಿದೆ ಎಂದಿದ್ದಾರೆ. ನಗರಸಭೆ ಒಂದಿಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುತ್ತದೆ. ಆದರೂ ಮಳೆಗಾಲದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ. ಹಾಗೆ ಎದ್ದ ವಿವಾದವೂ ಬೇಗನೇ ತಣ್ಣಗಾಗುತ್ತಿದೆ.

2018 ರಿಂದ ಘನತ್ಯಾಜ್ಯ ವಿಲೇವಾರಿ ಘಟಕ ಶಿರವಾಡ ಗ್ರಾಪಂ ಪಾಲಿಗೆ ಮಗ್ಗಲ ಮುಳ್ಳಾಗಿದೆ. 2018 ರಿಂದ ಅಲ್ಲಿಂದ ಸಮಸ್ಯೆ ಆರಂಭವಾದುದು ಆಗಾಗ ಪ್ರತಿಧ್ವನಿಸುತ್ತಲೇ ಇದೆ.

ಶಿರವಾಡ ಗ್ರಾಮಸ್ಥರು ಹೇಳುವುದೇನು: ಘನತ್ಯಾಜ್ಯ ಘಟಕದಲ್ಲಿ ವಿಂಗಡಿಸಿ ಹಾಕುತ್ತಿಲ್ಲ. ಸತ್ತ ಪ್ರಾಣಿಗಳನ್ನು ಸಹ ತ್ಯಾಜ್ಯ ಘಟಕಕ್ಕೆ ತಂದು ಎಸೆಯಲಾಗುತ್ತಿದೆ. ಕೊಳಚೆ ನೀರು ಮಳೆ ನೀರಿನ ಜೊತೆ ಸೇರಿ ಬಾವಿಗಳನ್ನು ಮಲೀನ ಮಾಡಿದೆ. ಘಟಕದಿಂದ ವಾಸನೆ ಬರುತ್ತಿದೆ. ಸೊಳ್ಳೆ ಮತ್ತು ನೊಣಗಳು ಹೆಚ್ಚಿವೆ. ಆರೋಗ್ಯದ ಭಯ ಹುಟ್ಟಿದೆ. ಇದನ್ನು ಸರಿಯಾಗಿ ನಿರ್ವಹಿಸಿ ಇಲ್ಲವೇ ಸ್ಥಳಾಂತರಿಸಿ ಎಂದು ನಗರಸಭೆ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಜಿಲ್ಲಾಧಿಕಾರಿಗಳನ್ನು ಕಂಡ ಜನಪ್ರತಿನಿಧಿಗಳು: ಶಿರವಾಡ ಘನತ್ಯಾಜ್ಯ ಘಟಕದ ನೈಜ ಸ್ಥಿತಿಯ ವಿಡಿಯೋವನ್ನು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ ಅವರಿಗೆ ಮಂಗಳವಾರ ತೋರಿಸಿದರು.

ಘನತ್ಯಾಜ್ಯ ಘಟಕದ ಕೊಳಚೆ ನೀರು ಹಾಗೂ ಸತ್ತ ಪ್ರಾಣಿಗಳು ಜನರಲ್ಲಿ ರೋಗ ಹರಡುವ ಭೀತಿ ಮೂಡಿಸಿವೆ. ಇದಕ್ಕೆ ತಕ್ಷಣ ಸ್ಪಂದಿಸುವಂತೆ ಜಿ.ಪಂ ಸದಸ್ಯೆ ಚೈತ್ರಾ ಕೋಠಾರಕರ್‌ ವಿನಂತಿಸಿದರು.

ಜನ ವಿರೋಧ ಬಂದ ಮೇಲೆ ನಗರಸಭೆ ಹಲವು ಕ್ರಮಕ್ಕೆ ಮುಂದಾಗುತ್ತದೆ. ನಿರಂತರ ನಿರ್ವಹಣೆ ಇಲ್ಲ ಎಂದು ಜಿಲ್ಲಾಡಳಿತದ ಗಮನಸೆಳೆದರು.

ವಿಡಿಯೋ ವೀಕ್ಷಿಸಿದ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗೆ ತಕ್ಷಣ ಸ್ಥಳ ವೀಕ್ಷಣೆಗೆ ಆದೇಶಿಸಿದರು.

ವಾರದಲ್ಲಿ ಕ್ರಮ: ಶಿರವಾಡ ಘನತ್ಯಾಜ್ಯ ಸಮಸ್ಯೆ ಅರಿತ ಜಿಲ್ಲಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ ಈಗ ಸಮಸ್ಯೆಯಾಗುತ್ತಿದೆ. ಅತ್ಯುತ್ತಮ ನಿರ್ವಹಣೆ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಗಳು ಬೇಕು ಎಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಿಸಬೇಕಿದೆ. ಕುಮಟಾದ ಕಸವನ್ನು ಪಕ್ಕದ ಹಳ್ಳಿಯವರು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಮೂರು ನಾಲ್ಕು ಗ್ರಾಮಗಳಿಗೆ ಒಂದರಂತೆ ಘನತ್ಯಾಜ್ಯ ಘಟಕಗಳ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಹಣ ಸಹ ಬಿಡುಗಡೆಯಾಗುತ್ತಿದೆ. ಹಾಗಾಗಿ ಇರುವ ಘನತ್ಯಾಜ್ಯ ಘಟಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದರು.

 

ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯೇ ಇಲ್ಲ. ಅಲ್ಲಿ ಕಸ ವಿಂಗಡಿಸುತ್ತಿಲ್ಲ. ಸತ್ತ ಪ್ರಾಣಿಗಳನ್ನು ಹಾಗೆ ಬಿಸಡಲಾಗುತ್ತಿದೆ. •ಚೈತ್ರಾ ಕೋಠಾರಕರ್‌,ಜಿ.ಪಂ ಸದಸ್ಯೆ.

ಒಂದು ವಾರದಲ್ಲಿ ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಸಲಾಗುವುದು. ನಿರ್ವಹಣೆಗೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗುವುದು. ಸಮಸ್ಯೆ ಅರಿಯಲು ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.•ಡಾ| ಹರೀಶ್‌ಕುಮಾರ್‌ ಜಿಲ್ಲಾಧಿಕಾರಿ ಕಾರವಾರ

 

•ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.