ಎಪಿಎಂಸಿ ಗದ್ದುಗೆ ಏರಿದ್ರೂ ಸಿಕ್ಕಿಲ್ಲ ಅವಕಾಶ

ಗ್ರಾಪಂ-ಉಪ ಚುನಾವಣೆ, ಕೊರೊನಾಘಾತ , ­ಕಳೆದ 20 ತಿಂಗಳಲ್ಲಿ ಸಂಕಷ್ಟವೇ ಹೆಚ್ಚು,

Team Udayavani, Jun 6, 2021, 8:45 PM IST

j5srs1

ವರದಿ: ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ವಿಧಾನ ಸಭಾ ಉಪ ಚುನಾವಣೆ, ಗ್ರಾಪಂ ಚುನಾವಣೆ, ಕೊರೊನಾಘಾತ, ಎಪಿಎಂಸಿ ಕಾಯಿದೆ ತಿದ್ದುಪಡಿ ಗೊಂದಲಗಳ ನಡುವೆ ಇಲ್ಲಿನ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆ ಅವಧಿ ಮುಗಿದಿದೆ.

ಅಧ್ಯಕ್ಷ ಸ್ಥಾನಕ್ಕೆ ಏರಿದರೂ ಸ್ವಂತ ಕ್ರಿಯಾಯೋಜನೆ ಅನುಷ್ಠಾನಕ್ಕೆ ಸಿಕ್ಕಿಲ್ಲ ಅವಕಾಶ ಎಂಬ ಸ್ಥಿತಿಯಲ್ಲಿ ಮುಗಿಸುವಂತಾಗಿದೆ. ಇಂಥ ವಿಲಕ್ಷಣ ಸ್ಥಿತಿಯಲ್ಲಿ ಎರಡು ವರ್ಷಗಳ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಇಪ್ಪತ್ತು ತಿಂಗಳು ಮುಗಿಯುತ್ತಿದೆ.

ರಾಜ್ಯದಲ್ಲೇ ಮಾದರಿ ಎಂದೇ ಹೆಸರಾದ ಶಿರಸಿ ಎಪಿಎಂಸಿಗೆ ಇಪ್ಪತ್ತು ತಿಂಗಳ ಹಿಂದೆ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಶೀಗೇಹಳ್ಳಿ, ಉಪಾಧ್ಯಕ್ಷೆಯಾಗಿ ವಿಮಲಾ ಹೆಗಡೆ ಆಯ್ಕೆ ಆಗಿದ್ದರು. ಬಿಜೆಪಿ ಆಳ್ವಿಕೆಯಲ್ಲಿದ್ದ ಪ್ರಥಮ ಹಂತದ ಅಧಿಕಾರಾವಧಿ ಪೂರ್ಣಗೊಂಡಿದೆ.

ಜೂ.18ಕ್ಕೆ ಇಪ್ಪತ್ತು ತಿಂಗಳು  ಪೂರ್ಣವಾಗಲಿದೆ. ಜೂ.19ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಹಿಂದಿನ ಅಧ್ಯಕ್ಷ ಸುನೀಲ ನಾಯ್ಕರ ಅವಧಿ ಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಲ್ಲಿ ಅನೇಕ ಯೋಜನೆಗಳಿಗೆ ಈಗ ಎಪಿಎಂಸಿ ನಿರ್ದೇಶಕರು ಅನುಮೋದನೆ ನೀಡಿದ್ದಾರೆ. 2019 ಅಕ್ಟೋಬರ್‌ 19ಕ್ಕೆ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಚುನಾವಣೆಯಲ್ಲಿ ಜಯಶೀಲರಾಗಿದ್ದರು. ಆದರೆ, ಸಂಕಷ್ಟದ ಅವಧಿಯಲ್ಲೇ 20 ತಿಂಗಳ ಕಂತಿನ ಅಧ್ಯಕ್ಷ ಸ್ಥಾನ ಪೂರ್ಣಗೊಳಿಸುವಂತಾಗಿದೆ.

ಶಿರಸಿ ಎಪಿಎಂಸಿಗೆ ಇಬ್ಬರು ಶಾಸಕರ ಕ್ಷೇತ್ರ ಬರಲಿದೆ. ಒಂದು ಶಿರಸಿ ಸಿದ್ದಾಪುರ, ಇನ್ನೊಂದು ಯಲ್ಲಾಪುರ ವಿಧಾನ ಸಭೆ. ಬನವಾಸಿ ಹೋಬಳಿಯ ಎಲ್ಲ ಪಂಚಾಯ್ತಿಗಳೂ ಯಲ್ಲಾಪುರ ವಿಧಾನ ಸಭೆಗೆ ಸೇರಲಿದೆ. ಒಂದುಕಡೆ ಸ್ಪೀಕರ್‌ ಕಾಗೇರಿ ಕ್ಷೇತ್ರ, ಇನ್ನೊಂದೆಡೆ ಸಚಿವ ಹೆಬ್ಟಾರ್‌ ಕ್ಷೇತ್ರ. ಇಂಥ ಬಲಾಡ್ಯರಿದ್ದೂ ಕೆಲಸ ತರಿಸಿಕೊಳ್ಳಲು ಕೊರೊನಾ ಏಟು ನೀಡಿದೆ.

2020ರ ಮಾರ್ಚ್‌ನಿಂದ ತಗುಲಿದ ಕೊರೊನಾಘಾತ, ಈ ಬಾರಿ ಬೇಸಗೆಯಲ್ಲಿ ತಗುಲಿದ ಏಟು ಎಪಿಎಂಸಿ ಚಟುವಟಿಕೆಗೆ ಕೂಡ ಹಿನ್ನಡೆ ಮಾಡಿದೆ. ಯಲ್ಲಾಪುರ ವಿಧಾನ ಸಭಾ ಉಪ ಚುನಾವಣೆ ಕೆಲ ಸಮಯ ನೀತಿ ಸಂಹಿತೆ ತಂದರೆ, ಗ್ರಾಪಂ ಚುನಾವಣಾ ನೀತಿ ಸಂಹಿತೆ ಕೂಡ ಏಟಾಗಿಸಿದೆ. ಈ ಮಧ್ಯೆ ವಿಧಾನ ಪರಿಷತ್‌ ಚುನಾವಣೆ ಕೂಡ ನಡೆದಿದೆ. ಎಪಿಎಂಸಿ ಕಾಯಿದೆ ಗೊಂದಲ ಮೂರ್‍ನಾಲ್ಕು ತಿಂಗಳು ಕಸಿದಿದೆ. ಈ ಕಾರಣದಿಂದ ಓಡಾಟ ನಡೆಸಿ ಈಗಿನ ಅಧ್ಯಕ್ಷರಿಗೆ ಕೆಲಸದ ವರ್ಚಸ್ಸು ತೋರಿಸಲೂ ಆಗಿಲ್ಲ. ಅನೇಕ ಐಡಿಯಾಗಳಿದ್ದರೂ ಅನುಷ್ಠಾನಕ್ಕೆ ಸಂಕಷ್ಟಗಳೇ ತೊಡಕಾಗಿದೆ. ಆದರೂ ನೈರ್ಮಲ್ಯ, ವಿದ್ಯುತ್‌, ಕುಡಿಯುವ ನಿರಿನ ಜೊತೆಗೆ ಸಿಟಿಟಿವಿ ಅಳಡಿಸಿಯೂ ರಕ್ಷಣಾತ್ಮಕ ಕೆಲಸ ಮಾಡಿದ್ದಾರೆ.

ಎಪಿಎಂಸಿ ಗೇಟು ಅಳವಡಿಸುವ ಕಾರ್ಯ ಕೂಡ ಪೂರ್ಣವಾಗಬೇಕಿದೆ. 18ರ ನಂತರ ಮತ್ತೆ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿಶ್ವನಾಥ ಹೆಗಡೆ ಅವರ ಪುನರಾಯ್ಕೆ ಜೊತೆಗೆ ಕಳೆದ ಬಾರಿ ಸ್ಪರ್ಧಿಸಿದ್ದ ಬನವಾಸಿ ದೇಸಾಯಿ ಗೌಡರು, ಸವಿತಾ ಹೆಗಡೆ, ಪ್ರಶಾಂತ ಗೌಡ, ಕೆರಿಯಾ ಬೋರಕರ್‌ ಅವರ ಹೆಸರು ಕೇಳಿ ಬರುತ್ತಿದೆ.

ನಾಮನಿರ್ದೇಶನ ಸಹಿತ ಒಟ್ಟೂ 17ರಲ್ಲಿ 11 ರೈತ ಪ್ರತಿನಿಧಿಗಳು ಬಿಜೆಪಿಗರೇ ಆಗಿದ್ದಾರೆ. ಸಹಕಾರಿ ಕ್ಷೇತ್ರದ್ದು ನ್ಯಾಯಾಲಯದಲ್ಲಿ ಇರುವುದರಿಂದ 16ಕ್ಕೆ ಲೆಕ್ಕಾಚಾರ ಆಗಬೇಕಿದೆ. 16ರಲ್ಲಿ ವರ್ತಕರ ಸಂಘದ ಪ್ರತಿನಿಧಿ, ತರಕಾರಿ ಬೆಳೆಗಾರರ ಸಂಘದ ಪ್ರತಿನಿಧಿಯಿದ್ದಾರೆ. ಮೂವರು ಕಾಂಗ್ರೆಸ್‌, ಇಬ್ಬರು ಪಕ್ಷೇತರರು ಇದ್ದಾರೆ. ಈ ಇಬ್ಬರ ಬೆಂಬಲ ಪಡೆದು ಯಾರು ಅಧ್ಯಕ್ಷರಾಗುತ್ತಾರೆ? ಉಭಯ ಶಾಸಕರು, ಸಂಸದರು ಸೇರಿ ಒಂದಾಗಿ ಅಂತಿಮ ನಿರ್ಣಯ ಕೈಗೊಂಡರೆ ಸುಲಭ ಆಗಬಹುದು.

ತುರುಸಿನ ನಡುವೆ ಹಳಬರಿಗೆ ಮಣೆ ಹಾಕುವವರೋ ಅಥವಾ ಹೊಸ ಮುಖವೋ? ಭಿನ್ನ ಮತ ಸ್ಫೋಟ ಆದರೆ ಬಿಜೆಪಿಯಿಂದ ಹೊರಗೆ ಇದ್ದವರೇ ನಿರ್ಣಾಯಕರಾಗಲಿದ್ದಾರೆ ಎಂಬುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.