ಕಾಗೇರಿ ಮತ್ತೆ ಗೆಲುವಿನ ಸರದಾರ!
Team Udayavani, May 16, 2018, 12:49 PM IST
ಶಿರಸಿ: ಮತ್ತೆ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಐದು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ಮುಂದುವರಿದಿದ್ದಾರೆ. ಕಳೆದ ಸಲಕ್ಕಿಂತ 15 ಸಾವಿರಕ್ಕೂ ಅಧಿ ಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶಿರಸಿ ಕ್ಷೇತ್ರದಲ್ಲಿ ಮೂವರೂ ಸಂಭಾವಿತ ಅಭ್ಯರ್ಥಿಗಳೇ ಆಗಿದ್ದರು. ಕಾಗೇರಿ ಬಿಜೆಪಿಯಿಂದ, ಭೀಮಣ್ಣ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರ ನಡುವೆ ತ್ರಿಕೋನ ಸ್ಪರ್ಧೆ ಎಂದೇ ಹೇಳಲಾಗಿತ್ತು. ಆದರೆ, ಮತದಾರರು ಚಿತ್ರಣ ಬದಲಾಯಿಸಿದ್ದಾರೆ. ಈ ಅವಧಿಯಲ್ಲಿ ಕೆಲಸ ಆಗಿಲ್ಲ ಎಂಬ ಅಸಮಾಧಾನಗಳು ಇದ್ದ ಹುಲೇಕಲ್ ಜಿಪಂ ಕ್ಷೇತ್ರದಲ್ಲೂ ಕಾಗೇರಿ ಅವರ ಗೆಲುವಿಗೆ ಲೀಡ್ ನೀಡಿದೆ. ಅಲ್ಲಿಂದ ಶುರುವಾದ ಮತ ಬೇಟೆ ಇಡೀ ಕ್ಷೇತ್ರದ 264 ಮತಗಟ್ಟಗಳಲ್ಲೂ ಮುನ್ನಡೆಗೆ ನೆರವಾಗಿದೆ. ಸಿದ್ದಾಪುರ ತಾಲೂಕಿನಲ್ಲೂ ಕಾಗೇರಿ ಲೀಡ್ ಹೆಚ್ಚಿಸಲು ಕಾರಣವಾಗಿದೆ.
ಸಮೀಕರಣ ಆಗಲಿಲ್ಲ!: ಜೆಡಿಎಸ್ ತನ್ನೊಂದಿಗೆ ಕಾಂಗ್ರೆಸ್ ಹೊರತು ಬಿಜೆಪಿಯಲ್ಲ, ಬಿಜೆಪಿ ಮೂರನೇ ಸ್ಥಾನಕ್ಕೆ ಪೈಪೋಟಿ ಎಂದಿತ್ತು. ನಾಮಧಾರಿ ಮತಗಳು ಅವರ ಸಮುದಾಯದ ಅಭ್ಯರ್ಥಿಗೆ ವಾಲುತ್ತವೆ, ಹವ್ಯಕರ ಮತಗಳು ಒಡೆಯುತ್ತವೆ ಎಂಬ ಲೆಕ್ಕಾಚಾರವೂ ಇತ್ತು. ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದೂ ಹೇಳಲಾಗುತ್ತಿತ್ತು. ಆದರೆ, ಇದ್ಯಾವುದೂ ನಡೆಯಲೇ ಇಲ್ಲ.
ಕಾಗೇರಿಗೆ ಅವರೊಂದಿಗೆ ಇರುವ ಸಜ್ಜನಿಕೆ ಪ್ಲಸ್ ಆದರೆ, ಅಲೆಗಳ ಓಡಾಟವೂ ನೆರವಾಯಿತು. ಭೀಮಣ್ಣರ ಸೋಲಿಗೆ ವಿಳಂಬ ಟಿಕೆಟ್ ನೀಡಿಕೆ, ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ಹೆಚ್ಚಿದ್ದೂ ಕಾರಣವಾಯಿತು. ಉತ್ತರ ಪ್ರದೇಶ, ಗುಜರಾತ್ ಜೊತೆ ಕರ್ನಾಟಕವೂ ಸೇರಿ ಉತ್ತರ ಕನ್ನಡಕ್ಕೆ ಒಂದು ಸ್ಥಾನದಿಂದ ಮೂರಕ್ಕೇರಿಸಿತು! ಶಿರಸಿಗೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು ಬರದೇ ಇರುವುದು, ಬಿಜೆಪಿಗೆ ಯೋಗಿ ಆದಿತ್ಯನಾಥ, ಯಶ್, ಕೇಂದ್ರ ಸಚಿವ ಅನಂತಕುಮಾರ, ಅನಂತಕುಮಾರ ಹೆಗಡೆ ಅವರೂ ಬಂದಿದ್ದು ಬಲ ಹೆಚ್ಚಿಸಿತು.
ಕೈಕೊಟ್ಟ ಕರೆಂಟ್: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಮಳೆ ಗಾಳಿ ಜೋರಾಗಿ ಸೋಮವಾರ ನಡೆದಿತ್ತು. ಇದರ ಪರಿಣಾಮ ಎಂಬಂತೆ ಮಂಗಳವಾರ ಕರೆಂಟ್ ಅರ್ಧ ಗಂಟೆಯೂ ಬಂದದ್ದು ನಿಲ್ಲಲಿಲ್ಲ. ಈ ಕಾರಣದಿಂದ ಟಿವಿ ಮುಂದೆ ಕುಳಿತು ರಾಜ್ಯದ, ಜಿಲ್ಲೆಯ ಚುನಾವಣಾ ಫಲಿತಾಂಶ ಪಡೆದುಕೊಳ್ಳಲು ವಿಶೇಷವಾಗಿ ಗ್ರಾಮೀಣ ಭಾಗದ ಮತದಾರರಿಗೆ ಹಿನ್ನಡೆ ಉಂಟಾಯಿತು.
ಕೆಲವರು ಮೊಬೈಲ್ ಬಳಸಿ ಟಿವಿಗಳ ಲೈವ್ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್ ಪವರ್ ಬಳಸಿ ಗ್ರಾಮಸ್ಥರು ಟಿವಿ ನೋಡಿದರು.
ಕಾರ್ಯಕರ್ತರ ದಂಡು: ಇಲ್ಲಿನ ರಾಘವೇಂದ್ರ ಮಠದ ಬಳಿ ಇರುವ ಶಾಸಕ ವಿಶ್ವೇಶ್ವರ ಹೆಗಡೆ ಕಚೇರಿಯಲ್ಲಿ ಕಾರ್ಯಕರ್ತರು ಒಟ್ಟಾಗಿ ಕುಳಿತು ಟಿವಿ ವೀಕ್ಷಿಸಿದರು. ಮೋದಿಗೆ, ಕಾಗೇರಿಗೆ ಜೈ ಎಂದರೆ, ಬಿಜೆಪಿ ಹವಾ ಎಬ್ಬಿಸಿದ ಪ್ರಧಾನಿಗೆ ನಮೋ ಎಂದರು. ಸಹಕಾರಿ ಶಾಂತಾರಾಮ ಹೆಗಡೆ ಅವರ ಕಚೇರಿ ಆವಾರದಲ್ಲೂ ಮತದಾರರು, ಪ್ರಮುಖರು ಟಿವಿ ನೋಡಿದರು.
ಏನಾದೀತು?: ಕಾಗೇರಿ ಗೆಲುವಿಗೆ ಡಬಲ್ ಧಮಾಕ ಆಗಬಹುದೇ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಹಿನ್ನೆಲೆಯಲ್ಲಿ ಏನಾಗಬಹುದು ಎಂಬ ಗೊಂದಲ ಉಂಟಾಯಿತು. ಬಿಜೆಪಿ ನೇತೃತ್ವದ ಸರಕಾರ ಆದರೆ ಮಾತ್ರ ಶಿರಸಿಗೆ ಮಂತ್ರಿ ಸ್ಥಾನ ಬಹುತೇಕ ಖಚಿತವಿತ್ತು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜೊತೆ ರಾಜ್ಯ ಸರಕಾರದಲ್ಲಿ ಕೂಡ ಹಿರಿಯ ಸಚಿವರಾಗಿ ಕಾಗೇರಿ ಅ ಧಿಕಾರ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ರಾಜ್ಯ, ರಾಷ್ಟ್ರ ರಾಜಕಾರಣದ ಚರ್ಚೆ ಆರಂಭಿಸಿದರು. ಕಾಂಗ್ರೆಸ್ ಜೆಡಿಎಸ್ ಅಧಿಕಾರ ಹಂಚಿಕೊಂಡರೆ ಕಾಗೇರಿಗೆ ಮಂತ್ರಿಸ್ಥಾನ ದೂರವಾಗಲಿದೆ ಎಂದೂ ಚರ್ಚೆಯಲ್ಲಿ ಮಾತನಾಡಿಕೊಂಡರು.
ಮತ ಮಾಹಿತಿ
ಕೆಲವರು ಮೊಬೈಲ್ ಬಳಸಿ ಟಿವಿಗಳ ಲೈವ್ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್ ಪವರ್ ಬಳಸಿ ಗ್ರಾಮಸ್ಥರು ಟಿವಿ ನೋಡಿದರು
ಗೆಲುವಿಗೆ ಕಾರಣವೇನು?
ಪ್ರಧಾನಿ ನರೇಂದ್ರ ಮೋದಿ ಅಲೆ
ಕಾಗೇರಿ ಸಚಿವರಾಗಿದ್ದಾಗ ಮಾಡಿದ ಶೈಕ್ಷಣಿಕ ಅಭಿವೃದ್ಧಿ
ಪ್ರಖರ ಹಿಂದುತ್ವ
ಆರ್‌ಎಸ್‌ಎಸ್ ಕಾರ್ಯಕರ್ತರ
ಪ್ರಯತ್ನ
ಪೇಜ್ ಪ್ರಮುಖ ನಡೆ ವಕೌìಟ್
ಸೋಲಿಗೆ ಕಾರಣವೇನು?
ವಿಳಂಬವಾಗಿ ಅಭ್ಯರ್ಥಿ ಘೋಷಣೆ
ಜಿಲ್ಲಾಧ್ಯಕ್ಷರೂ ಅಭ್ಯರ್ಥಿ, ನಿರ್ವಹಣಾ ಒತ್ತಡ ಹೆಚ್ಚಳ
ಜೆಡಿಎಸ್ ಕಾಂಗ್ರೆಸ್‌ಗೆ ಒಡೆದ ಬಂಗಾರಪ್ಪ ಅಭಿಮಾನಿಗಳ ಮತ
ಸಮೀಕರಣಗೊಳ್ಳದ ನಾಮಧಾರಿ ಮತಗಳು
ಕೊನೇ ದಿನಗಳಲ್ಲಿ ವೇಗ ಪಡೆಯದ ಹುರುಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.