ಶಿರಸಿ: ದ್ರೌಪದಿಯ ಶ್ರೀಮುಡಿ ನಾಟಕ ಪ್ರದರ್ಶನ
ರಂಗ ಪ್ರಯೋಗಗಳು ಸಮಾಜದ ಡೊಂಕು ತಿದ್ದುತ್ತವೆ: ಪೈ
Team Udayavani, Mar 5, 2022, 8:30 PM IST
ಶಿರಸಿ: ಸಮಾಜದ ಅಂಕು ಡೊಂಕು ತಿದ್ದುವ ಕಾರ್ಯ ರಂಗ ಪ್ರದರ್ಶನಗಳು ಮಾಡಲಿವೆ ಎಂದು ಎಂದು ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಶನಿವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ರಂಗ ಸೌಗಂಧ ಹಮ್ಮಿಕೊಂಡ ರಂಗ ಸಂಚಾರದ ಅಭಿಯಾನದಲ್ಲಿ ಭಟ್ಟ ನಾರಾಯಣನ ‘ವೇಣೀ ಸಂಹಾರ’ ಸಂಸ್ಕೃತ ನಾಟಕದ ದ್ರೌಪದಿಯ ಶ್ರೀಮುಡಿ ನಾಟಕ ಪ್ರದರ್ಶನಕ್ಕೆ ನಗಾರಿ ಭಾರಿಸಿ ಚಾಲನೆ ನೀಡಿ ಮಾತನಾಡಿದರು.
ನಮ್ಮೊಳಗಿನ ಅಂಕು ಡೊಂಕು ತಿದ್ದಲು ರಂಗ ಕ್ರಿಯೆ ನೆರವಾಗಲಿದೆ. ಯಕ್ಷಗಾನ, ತಾಳಮದ್ದಲೆ, ನಾಟಕ ಹಾಗೂ ಇತರ ಕಲೆಗಳ ಕೇಂದ್ರ ಶಿರಸಿಯಾಗಿದೆ. ಪೌರಾಣಿಕ ಆಖ್ಯಾನದ ಪ್ರಸ್ತುತಿ ಕೂಡ ಗಮನಾರ್ಹವೇ ಆಗಿದೆ. ಇಂಥ ಪ್ರಯತ್ನ ಇನ್ನಷ್ಟು ಹೆಚ್ಚಳವಾಗಲಿ. ಇಂಥ ಕಲಾ ಪ್ರದರ್ಶನಕ್ಕೆ ನೆರವಾಗಬೇಕು ಎಂದು ಹೇಳಿದರು.
ನೈಜ ಘಟನೆ, ನೈಜ ಸನ್ನಿವೇಶದಲ್ಲಿ ರಂಗಕರ್ಮಿ ಕೆ.ಆರ್. ಪ್ರಕಾಶ ನಾಟಕ ಆಡಿಸಿ, ನಾನೂ ಪಾತ್ರ ಮಾಡಿದ್ದೆ ಎಂದು ನೆನಪಿಸಿಕೊಂಡರು.
ಪತ್ರಕರ್ತೆ ಬೆಂಗಳೂರಿನ ಭಾರತೀ ಹೆಗಡೆ, ಹುಲಿಮನೆ ನಾಟಕಕ್ಕೆ ಅಪರೂಪದ ಕೊಡುಗೆ ನೀಡಿದ್ದ ಕುಟುಂಬ. ಗುಬ್ಬಿ ವೀರಣ್ಣ ಅವರ ನಾಟಕಕ್ಕಿಂತ ಮೊದಲೇ ನಾಡಿನಾದ್ಯಂತ ಓಡಾಟ ಮಾಡಿದ್ದರು. ಕರೆಂಟ್ ಇಲ್ಲದ ಕಾಲದಲ್ಲಿ ರಂಗದಲ್ಲಿ ಬೆಳಕು ತಂದಿದ್ದರು ಸೀತಾರಾಮ ಶಾಸ್ತ್ರಿಗಳು ಎಂದು ಬಣ್ಣಿಸಿದರು.
ಒಂದು ಪ್ರದೇಶ ನೆಮ್ಮದಿಯಿಂದ ಇರಲು ಶಾಂತಿ, ಸಹಬಾಳ್ವೆ ಬೇಕು. ಯುದ್ದ ಬೇಡದ ಸ್ಥಿತಿಯಲ್ಲಿ ಇದ್ದೇವೆ ಎಂದೂ ಹೇಳಿದರು.
ನಿರ್ದೇಶಕ ಗಣಪತಿ ಹುಲಿಮನೆ, ನಾಲ್ಕು ಪ್ರದರ್ಶನ ಕಂಡಿದ್ದು, ಇದು ಐದನೇ ಪ್ರದರ್ಶನ ಆಗಿದೆ. ಹುಲಿಮನೆ ಸೀತಾರಾಮ ಶಾಸ್ತ್ರೀ ನೆನಪಿನ ಸಂಸ್ಥೆ ಆಗಿದೆ ಎಂದರು. ದ್ರೌಪದಿ ಶ್ರೀಮುಡಿ ನಾಟಕದಲ್ಲಿ ಗಣಪತಿ ಗುಂಜಗೋಡ, ನಾಗಪತಿ ವಡ್ಡಿನಗದ್ದೆ, ಅಜಿತ್ ಭಟ್ಟ ಹೆಗ್ಗಾರಳ್ಳಿ, ಶ್ರೀಪಾದ ಕೋಡನಮನೆ, ಜಯಶ್ರೀ ಹುಲಿಮನೆ, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೆಕರ್, ಶಮಂತ ಶಿರಳಗಿ, ಪ್ರವೀಣಾ ಗುಂಜಗೋಡ, ಶುಭಾ ರಮೇಶ ರಂಗದಲ್ಲಿ ಕಾಣಿಸಿಕೊಂಡರು.
ಶ್ರೀಪಾದ್ ಹೆಗಡೆ ಕೋಡನಮನೆ ರಂಗ ವಿನ್ಯಾಸ ಮಾಡಿದರು. ಡಾ. ಶ್ರೀಪಾದ್ ಭಟ್ಟರ ಸಂಗೀತವಿದ್ದು ರಾಜೇಂದ್ರ ಕೊಳಗಿ, ಜೈರಾಮ್ ಭಟ್ಟ ಹೆಗ್ಗಾರಳ್ಳಿ ರಾಮ್ ಅಂಕೋಲೆಕರ್ ನಿರ್ವಹಿಸಿದರು. ಧ್ವನಿ, ಬೆಳಕು ನಾಗರಾಜ ಭಂಡಾರಿ ನೀಡಿದರು.
ಛಲಕ್ಕೆ ಹೆಸರಾದದ್ದು ದ್ರೌಪದಿ. ಸಂಧಾನ ಬೇಡ, ಯುದ್ದವೇ ಬೇಕು ಎಂದು ಆ ಕಾಲದಲ್ಲಿ ಮುನ್ನೆಡೆದವಳು. ಅಗ್ನಿ ಕನ್ಯೆಯಂಥ ಕಥಾವಸ್ತುವನ್ನು ಇಲ್ಲಿ ರಂಗ ತಿರುಗಾಟಕ್ಕೆ ಆಯ್ಕೆಮಾಡಿದ್ದು ವಿಶಿಷ್ಟವಾದದ್ದು.
– ಭಾರತೀ ಹೆಗಡೆ ಬೆಂಗಳೂರು, ಪತ್ರಕರ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.