Sirsi; ಮನೆಯಲ್ಲಿ ಜನರಿದ್ದಾಗಲೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

ವರಮಹಾಲಕ್ಷ್ಮೀ ಪೂಜೆಗೆಂದು ದೇವರ ಕೋಣೆಯಲ್ಲಿ ತೆಗೆದಿಟ್ಟಿದ್ದ ಆಭರಣಗಳು

Team Udayavani, Aug 24, 2023, 6:17 PM IST

1-wwwqe

ಶಿರಸಿ: ನಗರದ ಅಯೋಧ್ಯಾ ಕಾಲೋನಿಯ ಮನೆ ಒಂದರ ದೇವರ ಕೋಣೆಯಲ್ಲಿ ಇಟ್ಟಿದ್ದ ಚಿನ್ನ ಬೆಳ್ಳಿ ಆಭರಣ ಮತ್ತು ನಗದುಗಳನ್ನು ಕಳ್ಳರು ದೋಚಿದ ಘಟನೆ ಬುಧವಾರ ರಾತ್ರಿ ರಾತ್ರಿ ನಡೆದಿದೆ. ಹೊಲಿಗೆ ಮಷೀನ್ ಡೀಲರ್ ಆಗಿರುವ ಆಶೀಶ್ ವಿಲಾಸ್ ಲೋಖಂಡೆ ಅವರು ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆಯ‌ ಮಹಡಿಯ ಮೇಲೆ ಹಾಗೂ ಕೆಳಗಡೆ ಒಂದು ರೂಮಿನಲ್ಲಿ ಮನೆಯ ಜನರು ಮಲಗಿದ್ದರೂ, ಯಾರೂ ಇರದ ಕೋಣೆಯಿಂದ ಚೋರರು ಸದ್ದಾಗದಂತೆ ಕಿಟಕಿ ಬಾಗಿಲು ಮುರಿದು ಒಳಗೆ ಬಂದು ವರಮಹಾಲಕ್ಷ್ಮೀ ಪೂಜೆಗೆ ಇಟ್ಟಿದ್ದ ಆಭರಣ ಕದ್ದೊಯ್ದಿದ್ದಾರೆ.

ದೇವರ ಕೋಣೆಯಲ್ಲಿದ್ದ ಬಂಗಾರದ ನೆಕ್ಲೆಸ್, ಬಂಗಾರದ ಬಳೆಗಳು, ಬೆಳ್ಳಿ ತಂಬಿಗೆ, ಆರತಿ ಸೆಟ್, ಬೆಳ್ಳಿಯ ಕಾಮಾಕ್ಷಿ ದೀಪ, ಬೆಳ್ಳಿ ಲೋಟ, 4000 ರೂ‌ ನಗದು ಸೇರಿದಂತೆ 5,28,000 ರೂ. ಆಭರಣ ಮತ್ತು ನಗುದನ್ನು ದೋಚಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರುಕಟ್ಟೆಯ ಪಿಎಸ್ಐ ಮಾಲಿನಿ ಹಾಸಭಾವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚೋರರು ಸ್ಥಳೀಯರೇ, ಹೊರಗಿನವರೇ ಎಂದೂ ತನಿಖೆ ‌ಮಾಡಲಾಗುತ್ತಿದೆ. ಸಿಸಿಟಿವಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಎಲ್ಲ‌ ಮೂಲದಿಂದಲೂ ತನಿಖೆ
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲ ವಿಭಾಗದಿಂದಲೂ ಸೂಕ್ಷ್ಮ ತನಿಖೆ ಆರಂಭಿಸಿದ್ದಾರೆ. ಕಾರವಾರದಿಂದ ಶ್ವಾನ ದಳ, ಬೆರಳಚ್ಚು ತಜ್ಞರೂ ಕೂಡ ಆಗಮಿಸಿ ತ‌ನಿಖೆ ಚುರುಕಿಗೆ ಸಹಕಾರ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಸೋಕೋ ಅಧಿಕಾರಿ ವಿನುತಾ ಅವರು ಬಂದು ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯಿಂದ ಪೋರೆನ್ಸಿಕ್ ತಂಡದ ಅಧಿಕಾರಿ ಡಾಕ್ಟರ್ ಮಾಂತೇಶ್ ರವರಿಂದಲೂ ಘಟನೆ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ.

ಮೂರು‌ ತಂಡ ರಚನೆ
ಶಿರಸಿ ಡಿಎಸ್ಪಿ ರವರಾದ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಗ್ರಾಮೀಣ ಠಾಣೆಯ ಇನಸ್ಪೆಕ್ಟರ್‌ ಸೀತಾರಾಮ್ ಪಿ, ಪಿಎಸ್ಐ ರತ್ನ ಕೆ, ಮಾಲಿನಿ ಹಾಂಸಬಾವಿ, ನಗರ ಠಾಣೆಯ ರಾಜಕುಮಾರ್ ಮಹಾಂತೇಶ್, ಪ್ರತಾಪ್, ದಯಾ ಜೋಗಳೇಕರ್, ಶಿರಸಿ ತಾಲೂಕಿನ ನುರಿತ ಅಪರಾಧ ಸಿಬ್ಬಂದಿಗಳಾದ ಮಹಾಂತೇಶ, ಅಶೋಕ, ಚಂದ್ರಪ್ಪ ಶಿವರಾಜ್, ಪ್ರಶಾಂತ್, ಸದ್ದಾಂ, ಗಣಪತಿ, ಎಲ್ಲಪ್ಪ ಇತರೆ ಅಧಿಕಾರಿ ಸಿಬ್ಬಂದಿಗಳು ಮನೆ ಕಳ್ಳತನದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಿರಸಿ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.