ಶಿರಸಿ: ಸುಟ್ಟು ಕರಕಲಾದ ತೋಟಕ್ಕೆ ಶಾಸಕ ಭೀಮಣ್ಣ ಭೇಟಿ; ಪರಿಹಾರದ ಭರವಸೆ
Team Udayavani, May 18, 2023, 6:26 PM IST
ಶಿರಸಿ: ಆಕಸ್ಮಿಕ ಅಗ್ನಿ ಅವಘಡಕ್ಕೆ ಒಳಗಾಗಿ ಹಾನಿಗೊಳಗಾದ ತಾಲೂಕಿನ ಅಮಚಿ ಮನೆಯ ಅಡಿಕೆ ತೋಟಕ್ಕೆ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ ಸರಕಾರದಿಂದ ಸೂಕ್ತ ಪರಿಹಾರದ ಒದಗಿಸುವ ಭರವಸೆ ನೀಡಿದರು.
ಗುರುವಾರ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆ ಅವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟ ಸುಟ್ಟು ಕರಕಲಾಗಿದ್ದನ್ನು ವೀಕ್ಷಿಸಿದ ಭೀಮಣ್ಣ, ನೊಂದ ರೈತರಿಗೆ ಸಾಂತ್ವನ ನುಡಿದರು.
ಆಕಸ್ಮಿಕವಾಗಿ ಮಾಲ್ಕಿ ಬೆಟ್ಟಕ್ಕೆ ತಗುಲಿದ ಬೆಂಕಿ ಮಳೆಗಾಲದ ಮಣ್ಣಿನ ಸವಕಳಿ ತಡೆಗೆ ಮುಚ್ಚಿಗೆ ಮಾಡಲಾದ ಕರಡ, ಸೊಪ್ಪಿಗೂ ತಗುಲಿ ಅಡಿಕೆ, ಬಾಳೆ, ಕಾಳು ಮೆಣಸು ಮರಗಿಡ ಸಂಪೂರ್ಣ ಸುಟ್ಟು ಹೋಗಿರುವದನ್ನು ವೀಕ್ಷಿಸಿ ಅವರೂ ವ್ಯಥೆಪಟ್ಟರು.
ನಾನೂ ಒಬ್ಬ ರೈತನಾಗಿದ್ದು, ಒಮ್ಮೆಲೆ ಅಡಿಕೆ ಬಾಳೆ, ಕಾಳುಮೆಣಸಿಗೆ ಹಾನಿ ಆದರೆ ಮತ್ತೆ ಬೆಳೆ ತೆಗೆಯಲು ಆರೆಂಟು ವರ್ಷಗಳೇ ಬೇಕಾಗುತ್ತವೆ. ಈಗಿನ ಬೆಳೆ ಹಾನಿ ಜೊತೆ ಮುಂದಿನ ಅರೆಂಟು ವರ್ಷ ಬೆಳೆಯೂ ಇರುವುದಿಲ್ಲ. ಮರು ನಾಟಿಯಿಂದ ಎಲ್ಲವೂ ವೆಚ್ಚದಾಯಕವೇ ಆಗಿದೆ. ಎಲ್ಲ ಸೇರಿದರೆ ಕೋಟಿಗೂ ಹೆಚ್ಚು ಹಾನಿ ಆಗುತ್ತದೆ. ಈ ಕಾರಣದಿಂದ ಸರಕಾರದಿಂದ ಗರಿಷ್ಟ ಪರಿಹಾರ ಕೂಡ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೊಂದ ರೈತರಿಗೆ ಭರವಸೆ ನೀಡಿದರು.
ಶಾಸಕ ಭೀಮಣ್ಣ ಅವರಿಗೆ ಎಂ.ವಿ.ಹೆಗಡೆ, ಜಿ.ಪಂ.ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಇತರರು ಬೆಂಕಿ ಅನಾಹುತದ ಮಾಹಿತಿ ಒದಗಿಸಿದರು.
ಈ ವೇಳೆ ಪ್ರಮುಖರಾದ ಎಸ್ಕೆ ಭಾಗವತ, ಗಣೇಶ ದಾವಣಗೆರೆ, ಅಧಿಕಾರಿಗಳಾದ ಬೆಳ್ಳೇಮನೆ, ಗ್ರಾ.ಪಂ. ಸದಸ್ಯ ಕಾಸಿಂ ಸಾಬ್, ಹುಲೇಕಲ್ ಗ್ರಾಪಂ ಪಿಡಿಓ ಉಪಸ್ಥಿತರಿದ್ದರು.
ಯಾವುದೇ ಹಂತದ ಸಮಸ್ಯೆಗಳಾದರೂ ನಮ್ಮನ್ನು ನೇರ ಸಂಪರ್ಕಿಸಿ. ಸರಕಾರ, ಜನಪ್ರತಿನಿಧಿ ಆದವನು ನೊಂದವರ ಜೊತೆಗೆ ಇರಬೇಕು ಎಂದು ನಂಬಿದವನು.
– ಭೀಮಣ್ಣ ನಾಯ್ಕ, ಶಾಸಕ
ಇದನ್ನೂ ಓದಿ: Beer-Powered Motorcycle: ಪೆಟ್ರೋಲ್ ಹಾಕಿದ್ರೆ ಓಡಲ್ಲ… ಬಿಯರ್ ಹಾಕಿದ್ರೆ ಮಾತ್ರ ಓಡೋದು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.