Sirsi: ಭ್ರಮಾಲೋಕ ಸೃಷ್ಟಿಸುವ ಮಾಯಾ ಬಜಾರ್ ಸರಕಾರ; ಮಾಜಿ ಸ್ಪೀಕರ್ ಕಾಗೇರಿ ವಾಗ್ದಾಳಿ
Team Udayavani, Jul 25, 2023, 12:50 PM IST
ಶಿರಸಿ: ರಾಜ್ಯದ ಜನರ ಮುಂದೆ ಹೊಸ ಸರಕಾರವಾಗಿ ಒಂದು ಭ್ರಮಾ ಲೋಕ ಸೃಷ್ಟಿಸಿಕೊಂಡು ಕಾಂಗ್ರೆಸ್ ಸರಕಾರ ಆಡಳಿತ ಪ್ರಾರಂಭಿಸಿದೆ. ಇದೊಂದು ಮಾಯಾ ಭಜಾರ್ ಸರಕಾರ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಜು.25ರ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಕಾಂಗ್ರೆಸ್ ಸರಕಾರ ಸ್ವಾರ್ಥ ಸಾಧಿಸಿಕೊಂಡು ಕೆಲಸ ಮಾಡುತ್ತಿದೆ. ಎರಡುವರೆ ತಿಂಗಳಿಂದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರ ಗೊಂದಲ ಮಯ, ಅಭಿವೃದ್ದಿ ಶೂನ್ಯ ಆಡಳಿತ ಪ್ರಾರಂಭವಾಗಿದೆ. ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಸರಕಾರದ ಗ್ಯಾರೆಂಟಿಗಳೇ ಗೊಂದಲದ ಸಾಕ್ಷಿಯಾಗಿದೆ. ಉಳಿದ ಇಲಾಖೆಗಳಲ್ಲೂ ಗೊಂದಲ ಇದೆ. ಮಂತ್ರಿಗಳೂ ತಮ್ಮ ಇಲಾಖೆ ತಿಳಿದುಕೊಳ್ಳುವ ಪ್ರಮುಖ ಪ್ರಯತ್ನ ಮಾಡುತ್ತಿಲ್ಲ. ಜನರಿಗೆ ಬೆಲೆ ಏರಿಕೆ ಬಿಸಿ ಮಾಡಿದ್ದಾರೆ ಎಂದರು.
ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತರಬೇಕಿತ್ತು. ಆದರೆ ಜನರು ಗೊಂದಲರಾಗಿದ್ದಾರೆ. ವಿದ್ಯುತ್ ದರ ಕೂಡ ಏರಿಸಿದ್ದಾರೆ. ಹೇಳಿದಂತೆ ಉಚಿತ ಕೊಡಲಿಲ್ಲ. ಸರಕಾರ ಗಾಯದ ಮೇಲೆ ಬರೆ ಹಾಕಿದ್ದಾರೆ ಎಂದು ಹೇಳಿದರು.
ಬಸ್ ನಲ್ಲಿ ಮಹಿಖೆಯರಿಗೆ ಉಚಿತ ಪ್ರಯಾಣ ಎಂದು ಹೇಳಿದರು. ಆದರೆ ಸರಿಯಾದ ಬಸ್ಸಿಲ್ಲ, ಡ್ರೈವರ್- ಕಂಡಕ್ಟರ್ ಇಲ್ಲ. ಇದರಿಂದ ಅಟೋ ಚಾಲಕರು, ಟೆಂಪೋ ಚಾಲಕರು, ಖಾಸಗಿ ವಾಹನಗಳಿಗೆ ಕಷ್ಟವಾಗಿದೆ. ಒಂದು ಸೌಲಭ್ಯ ಮಾಡುವಾಗ ಇನ್ನೊಂದಕ್ಕೆ ಪರಿಹಾರ ನೋಡಬೇಕು ಎಂದ ಅವರು ಸರಕಾರದಿಂದ ಚಿಕ್ಕಪುಟ್ಟ ವಹಿವಾಟಿನವರಿಗೆ ಸಮಸ್ಯೆ ಆಗುತ್ತಿದೆ ಎಂದರು.
ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಇದೆ. ಪೂರ್ವ ಯೋಜಿತ ಸಿದ್ದತೆಯಿಲ್ಲದೇ ಆಡಳಿತ ಗೊಂದಲ ಮಾಡುತ್ತಿದ್ದಾರೆ. ಭ್ರಮೆ ಸೃಷ್ಟಿಸಿ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಎಲ್ಲರೂ ತಲ್ಲೀನರಾಗಿದ್ದಾರೆ ಎಂದರು.
ಭ್ರಷ್ಟಾಚಾರ ಎಲ್ಲೆಡೆ ಇದೆ. ಬಿಜೆಪಿಗೆ 40 ಪರ್ಸೆಂಟ್ ಕಮಿಷನ್ ಏಜೆಂಟ್ ಅಂದರು. ಕಾಂಗ್ರೆಸ್ ಏನಾಯ್ತು? ಜನ ಕಂಗಾಲಾಗಿದ್ದಾರೆ ಎಂದರು.
ಬಡವರಿಗೆ ಹತ್ತುಕೆಜಿ ಅಕ್ಕಿಕೊಡಬೇಕು ಎಂದಿದ್ದರೆ ಪ್ರಮಾಣ ವಚನ ತೆಗೆದುಕೊಂಡ ಬಳಿಕವಾದರೂ ಕೇಂದ್ರಕ್ಕೆ ಹೋಗಿ ವಿನಂತಿ ಮಾಡಬೇಕಿತ್ತು ಎಂದ ಅವರು ನಂತರ ಕಾಂಗ್ರೆಸ್ ಸರಕಾರ ರಾಜಕಾರಣ ಮಾಡಿದೆ ಎಂದೂ ವಾಗ್ದಾಳಿ ನಡೆಸಿದರು.
ಬಿಜೆಪಿ ಸರಕಾರ ಮಂಜೂರು ಮಾಡಿಸಿದ ಎಲ್ಲ ಕೆಲಸ ಆಗಬೇಕು. ಈಗಿನ ಶಾಸಕರು ಮಳೆಗಾಲ ಪೂರ್ವ ಸಿದ್ದತೆ ಏನು ಮಾಡಿದ್ದಾರೆ ಎಂದ ಅವರು ರಸ್ತೆ ಹಾಳಾಗಿದೆ, ವಿದ್ಯುತ್ ವ್ಯತ್ಯಾಸ ಆಗುತ್ತಿದೆ. ಜನರ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಕಿಸಾನ್ ಸಮ್ಮಾನದಲ್ಲಿ 4 ಸಾವಿರ ರೂ. ಕೊಡುತ್ತಿದ್ದರು. ಅದನ್ನು ಕೊನೆಗೊಳಿಸಿದ್ದು ಯಾಕೆ? ಜನರ ಜೀವನದ ಬಗ್ಗೆ ಕಾಳಜಿ ಇದ್ದವರು ಯಾಕೆ ಬಂದ್ ಮಾಡಿದರು ಎಂದು ಪ್ರಶ್ನಿಸಿದ ಅವರು ವಿದ್ಯಾ ನಿಧಿ ಯಾಕೆ ಬಂದ್ ಮಾಡುತ್ತಾರೆ? ವಾಹನ ತೆರಿಗೆ ಕೂಡ ಯದ್ವಾತದ್ವಾವಾಗಿ ಏರಿಸಿದ್ದಾರೆ ಎಂದೂ ಹೇಳಿದರು.
ಈ ವೇಳೆ ಚಂದ್ರು ಎಸಳೆ, ನಂದನ್ ಸಾಗರ, ಆರ್.ಡಿ ಹೆಗಡೆ, ಎನ್.ವಿ.ಹೆಗಡೆ, ಸದಾನಂದ ಭಟ್ಟ, ರವಿ ಹೆಗಡೆ, ವಿನಾಯಕ ಹೆಗಡೆ, ರಾಜೇಶ ಶೆಟ್ಟಿ ಇತರರು ಇದ್ದರು. ಇದೇ ವೇಳೆ ಹಿರಿಯ ಚಿಂತಕ ಅನಂತ ವೈದ್ಯ ಅಗಲಿಕೆಗೆ ಸಂತಾಪ ಸೂಚಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಸಿಂಗಾಪುರದಲ್ಲಿ ಕಾಂಗ್ರೆಸ್ ಸರಕಾರ ತೆಗೆಯಲು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತವರು ಯಾರೂ ಎಂದು ಅವರೇ ಹೇಳಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.