ಉ.ಕ. ಮೂಲದ ಪ್ರಸಿದ್ಧ ಭಾಗವತ ಐನಬೈಲುಗೆ ಸಾರ್ಥಕ ಸಾಧಕ-2023 ಪ್ರಶಸ್ತಿ
Team Udayavani, Aug 3, 2023, 11:46 AM IST
ಶಿರಸಿ: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ನೀಡುವ ಸಾರ್ಥಕ ಸಾಧಕ-2023 ಪ್ರಶಸ್ತಿಯನ್ನು ಉತ್ತರ ಕನ್ನಡ ಮೂಲದ ಪ್ರಸಿದ್ಧ ಭಾಗವತ ಪರಮೇಶ್ವರ ಹೆಗಡೆ ಐನಬೈಲು ಅವರಿಗೆ ಪ್ರಕಟಿಸಲಾಗಿದೆ.
ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಆ. 6ರ ಭಾನುವಾರ ಮಧ್ಯಾಹ್ನ 3 ರಿಂದ ನಡೆಯುವ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸಂಗಕರ್ತ ಶ್ರೀಧರ್ ಡಿ.ಎಸ್, ಸಾಹಿತಿ ಜಗದೀಶ್ ಶರ್ಮ ಸಂಪಾ, ಕಿರಣ್ ಉಪಾಧ್ಯಾಯ ಬಹ್ರೇನ್ ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನ ಗುರು ಪರಂಪರೆಯಲ್ಲಿ ಪ್ರತ್ಯೇಕ ಸ್ಥಾನ ಹೊಂದಿದ ಪರಮೇಶ್ವರ ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲೂಕಿನ ಐನಬೈಲ್ ಗ್ರಾಮದವರು. ಯಕ್ಷಗಾನಕ್ಕೆ ತಮ್ಮ ಹದಿಮೂರನೇ ವಯಸ್ಸಿಗೆ ಪಾದಾರ್ಪಣೆಯನ್ನು ಮಾಡಿದ ಅವರಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಯಕ್ಷಗಾನ ಕಲಿಕೆಯೂ ಕೂಡ ಸ್ವತಃ ತಂದೆಯಿಂದಲೇ ಆರಂಭವಾಯಿತು.
ಆಟವಾಡುವ ವಯಸ್ಸಿನಲ್ಲಿ ಕಲೆಯತ್ತ ಆಕರ್ಷಿತರಾದ ಐನಬೈಲ್ ಅವರು, ಆ ಕಾಲದ ಗುರುಗಳಾಗಿದ್ದ ಬಾಳೆಹದ್ದ ಕೃಷ್ಣ ಭಾಗವತರಲ್ಲಿ ಯಕ್ಷಗಾನವನ್ನು ಅಭ್ಯಾಸವನ್ನು ಮಾಡಿದರು. ಮುಂದೆ ಅವರು ಜೊತೆಗೆ ಶಿರಳಗಿ ಮಂಜುನಾಥ ಭಟ್ಟರಲ್ಲಿ ನಾಟ್ಯವನ್ನು ಅಭ್ಯಸಿಸಿದರು.
ನಿರಂತರ ಅಭ್ಯಾಸವನ್ನು ಮಾಡಿದ ಐನಬೈಲ್, ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟವನ್ನು ಆರಂಭಿಸಿದವರು. ಸೋಂದ ಮೇಳದಲ್ಲಿ ವೇಷಧಾರಿಗಳಾಗಿ ಕಾಣಿಸಿಕೊಂಡ ಅವರು, ಪುಂಡುವೇಶದ ಸಾಲಿನ ಅನೇಕ ವೇಷಗಳನ್ನು ಮಾಡಿ ಜನರಿಂದ ಮೆಚ್ಚುಗೆ ಗಳಿಸಿಕೊಂಡರು.
ವ್ಯವಸಾಯೀ ಮೇಳದಲ್ಲಿ ಹೆಚ್ಚು ಕಾಲ ವೃತ್ತಿಯನ್ನು ಮಾಡದೆ ಹವ್ಯಾಸಿಯಾಗಿ ಮುಂದುವರೆದರು. ವೇಷಧಾರಿಗಳಾಗಿದ್ದ ಐನಬೈಲ್ ಅವರು ಭಾಗವತರಾಗಿ ಹಾಗೂ ಯಕ್ಷಗುರುಗಳಾಗಿ ಬೆಳೆಯುವುದಕ್ಕೆ ಯಕ್ಷಋಷಿ ಎನಿಸಿಕೊಂಡ ಹೊಸ್ತೋಟ ಮಂಜುನಾಥ ಭಾಗವತರ ಪ್ರೇರಣೆ, ಮಾರ್ಗದರ್ಶನ ಸಿಕ್ಕಿತು.
ಅವರ ಗರಡಿಯಲ್ಲಿ ಯಕ್ಷಗಾನದ ಅನೇಕ ಸೂತ್ರಗಳನ್ನು ರಂಗತಂತ್ರಗಳನ್ನು, ಪ್ರಸಂಗವನ್ನು ನಿರ್ದೇಶನವನ್ನು ಕಲಿತರು. ಮುಂದೆ ಅವರು ಯಕ್ಷಗಾನದ ಶಿಕ್ಷಕರಾಗಿ ಗುರುವಿನಂತೆ ಸಾಧನೆಯನ್ನು ಮಾಡಿದರು. ಕೇವಲ ರಂಗದ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ ಯಕ್ಷ ಕವಿಗಳಾಗಿ ಹದಿನಾರಕ್ಕೂ ಹೆಚ್ಚು ಪ್ರಸಂಗಳನ್ನು ರಚಿಸಿರುವುದು ವಿಶೇಷವಾಗಿದೆ.
ಯಕ್ಷಗಾನ ವಿಸ್ತಾರಗೊಳ್ಳುವುದಕ್ಕೆ ಮಕ್ಕಳು, ಹವ್ಯಾಸಿಗಳು ಯಕ್ಷಗಾನಕ್ಕೆ ಬರುವುದು ತೀರಾ ಅಗತ್ಯವೆಂದು ನಂಬಿರುವ ಐನಬೈಲ್, ಆಸಕ್ತರಿಗೆ ತರಬೇತಿ ನೀಡುತ್ತ ಬಂದಿದ್ದಾರೆ.
ಶಾರದ ದೇವಿ ಅಂಧ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನ ಕಲಿಸಿ ಅವರಿಂದ ಪ್ರದರ್ಶವನ್ನು ಮಾಡಿಸಿದ್ದು, ಅವರ ಮಹತ್ತರ ಸಾಧನೆಯಾಗಿದೆ. ಶಿವಮೊಗ್ಗದ ತರಂಗ ಶಾಲೆಯ ಕಿವುಡ, ಮೂಕ ಮಕ್ಕಳಿಗೂ ಕೂಡ ಯಕ್ಷಗಾನ ತರಬೇತಿ ನೀಡಿದ್ದಾರೆ. ಕೊಂಕಣಿ, ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನ ಮಾಡಿಸಿದ್ದಾರೆ ಎಂದು ರವಿ ಮಡೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.