Sirsi: ನದಿಗಳ ಜಲಾನಯನ ಪ್ರದೇಶ ಉಳಿಸಿಕೊಳ್ಳದೇ ಹೋದರೆ ಬಹುದೊಡ್ಡ ದುರಂತ ಕಾದಿದೆ
Team Udayavani, Sep 28, 2023, 3:20 PM IST
ಶಿರಸಿ: ಕಾವೇರಿ ನದಿ ನೀರಿನ ಹಂಚಿಕೆ ಪ್ರತಿಭಟನೆ ನಡೆಯುತ್ತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೈಸರ್ಗಿಕ ಅರಣ್ಯ ನಾಶವಾಗಿದ್ದನ್ನು ನೋಡುತ್ತಿಲ್ಲ. ನದಿಗಳ ಜಲಾನಯನ ಪ್ರದೇಶ ಉಳಿಸಿಕೊಳ್ಳದೇ ಹೋದರೆ ಇನ್ನೂ ಬಹುದೊಡ್ಡ ದುರಂತ ಆಗಲಿದೆ ಎಂದು ಹಿರಿಯ ಪರಿಸರವಾದಿ, ಅಪ್ಪಿಕೋ ಚಳುವಳಿಯ ನೇತಾರ ಪಾಂಡುರಂಗ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಅವರು ಸೆ. 28ರ ಗುರುವಾರ ನಗರದ ಪಂಚವಟಿಯಲ್ಲಿ ನಡೆದ ನದಿ ಜಲಾಯನ ಪ್ರದೇಶಗಳ ಮುಖ್ಯಸ್ಥರಿಗೆ, ರೈತರಿಗೆ ನದಿ ವಲಯಗಳ ಸವಾಲುಗಳು ಕುರಿಯ ಕಾರ್ಯಾಗಾರ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
40 ವರ್ಷದ ಹಿಂದೆಯೇ ಕಾವೇರಿ ಮೂಲದ ಕೊಡಗಿನಲ್ಲಿ ಮನೋಕಲ್ಚರ್ ಗಿಡಗಳು ಬೆಳೆಸಲಾಗಿದೆ. ಪರಿಸರದ ಉಳಿವಿಗೆ, ಜಾಗತಿಕ ತಾಪಮಾನ ತಗ್ಗಿಸಲು ಎಲ್ಲರೂ ಉಳಿಸು, ಬೆಳಸಿ, ಮಿತವಾಗಿ ಬಳಸು ಎಂಬ ತತ್ವ ಪಾಲಿಸಬೇಕು. ಅಪ್ಪಿಕೋ ಚಳುವಳಿ ಮೂಲ ಉದ್ದೇಶ ಕೂಡ ಇದೇ ಆಗಿತ್ತು ಎಂದರು.
ಫಲವತ್ತು ಮಣ್ಣು, ನೀರು, ವಾತಾವರಣ ಶುದ್ಧತೆ ಸೃಷ್ಟಿ ಎಲ್ಲವೂ ಪುನರ್ ಸೃಷ್ಟಿ ಸಾಧ್ಯವಿಲ್ಲ. ಪ್ರಕೃತಿಯೇ ಮಾಡಬೇಕು ಎಂದ ಅವರು ಜಲಾನಯನ ಪ್ರದೇಶದಲ್ಲಿ ಉಳಿದ ಶೇಕಡಾ ಹತ್ತರಷ್ಟು ಇರುವ ಅರಣ್ಯ ಉಳಿಸಿಕೊಳ್ಳಬೇಕು. ಅಕೇಸಿಯಾ, ನೀಲಗಿರಿ ಗಿಡಗಳನ್ನು ಅಗಾಧ ಪ್ರಮಾಣದಲ್ಲಿ ಬೆಳಸುತ್ತಿರುವದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಅಜ್ಜಯ್ಯ ಜಿ.ಆರ್. ಕರೆ ಕಾರ್ಯಕ್ರಮಕೆ ಚಾಲನೆ ನೀಡಿ, ಜಾನ್ಮನೆ, ಇಟಗಿ, ಕ್ಯಾದಗಿ ಸೇರಿದಂತೆ ೧೨೦ ಕಡೆ ಇದೆ. ಅದು ಸ್ಪಂಜದಂತೆ ಕೆಲಸ ಮಾಡುತ್ತವೆ. ಆದರೆ ಅವುಗಳ ಸಂಖ್ಯೆ ಕಡಿಮೆ ಆಗಿದೆ. ಮಹಿಳೆಯರು, ರೈತರು ಏಳ್ಗೆಯಾದರೆ ದೇಶದ ಅಭಿವೃದ್ದಿ ಎಂದರು.
ಇಂಗು ಗುಂಡಿ ಮಾಡುವದರಿಂದ ಅಂತರ್ಜಲ ಹೆಚ್ಚಳ ಆಗುತ್ತದೆ. ಭಾರತ ವಿಶ್ವದಲ್ಲಿ ಯುವ ದೇಶ. ಇಲ್ಲಿ ಶೇ.29ರಷ್ಟು ಯುವಕರು ಇದ್ದಾರೆ. ಯುವಕರ ಕೌಶಲ ಅಭಿವೃದ್ದಿ ಆಗಬೇಕು. ಯುವಕರಿಗೆ ಸಮರ್ಥ, ದೇಶದ ನಿರ್ಮಾಣಕ್ಕೆ ಮುಂದಾಗಬೇಕು. ಯುವಕರಿಗೆ ಇರುವ ಕೌಶಲ ಅಭಿವೃದ್ದಿ ಆಗಬೇಕು. ಹೈನುಗಾರಿಕೆ, ತೋಟಗಾರಿಕೆ, ಜೇನು, ಬ್ಯುಟಿಶಯನ್ ಎಲ್ಲವಕ್ಕೂ ತರಬೇತಿ ನೀಡಿ ಯುವ ಶಕ್ತಿ ಸಮರ್ಥ ಮಾರ್ಗದರ್ಶನವನ್ನು ನೀಡಿ ಅವರ ಬದುಕಿನ ನಿರ್ಮಾಣ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಮನು ವಿಕಾಸ ಮುಂದಾಗುತ್ತಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮನು ವಿಕಾಸ ನಿರ್ದೇಶಕ ಗಣಪತಿ ಭಟ್, ಮನು ವಿಕಾಸದ ಸಂಸ್ಥೆಯು ಮೂರು ನದಿ ಆಯ್ಕೆ ಮಾಡಿಕೊಂಡಿದೆ. ವರದಾ, ಬೇಡ್ತಿ, ಅಘನಾಶಿನಿ ನದಿಯನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದೆ. ಜಲ ಸಂರಕ್ಷಣೆಗೆ ಕೆರೆಗಳು ನೆರವಾಗುತ್ತವೆ. ಕೆರೆಗಳು ನದಿಗೆ ಜೀವ ಜಲ ಕೊಡುತ್ತವೆ. ಅವುಗಳ ರಕ್ಷಣೆ ನಮ್ಮ ಜವಬ್ದಾರಿ ಎಂದರು.
ಹಿರಿಯ ವಿಜ್ಞಾನಿ ಡಾ. ಸುಭಾಶ್ಚಂದ್ರನ್, ಕಡಲಜೀವ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ಹಿರಿಯ ಪರಿಸರ ಬರಹಗಾರ ಶಿವಾನಂದ ಕಳವೆ, ರೈತರಾದ ನಟರಾಜ ದಾಸನಕೊಪ್ಪ, ವಿಶ್ವನಾಥ ಹಾದಿಮನೆ ಇತರರು ಇದ್ದರು.
ಮನು ವಿಕಾಸ ಸಂಸ್ಥೆ ಒಟ್ಟು 225 ಕೆರೆ ಅಭಿವೃದ್ದಿ, 3900 ಕೃಷಿ ಹೊಂಡ ಮಾಡಿದ್ದೇವೆ. ಮೂರು ವರ್ಷದಲ್ಲಿ 1 ಸಾವಿರ ಕೆರೆ, 10 ಸಾವಿರ ಕೃಷಿ ಹೊಂಡದ ನಿರ್ಮಾಣದ ಗುರಿ ಹೊಂದಿದ್ದೇವೆ. ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಮುದಾಯದ ಜೊತೆ ಕೆಲಸ ಮಾಡುತ್ತೇವೆ. – ಗಣಪತಿ ಭಟ್ಟ, ನಿರ್ದೇಶಕರು, ಮನು ವಿಕಾಸ
ಬೇಡ್ತಿ, ಅಘನಾಶಿನಿ ಜೀವಂತ ನದಿ. ವರದಾ ಹಾಗೂ ಬೇಡ್ತಿ ನದಿ ಜೋಡಿಸುವ ಪ್ರಯತ್ನ ನಡೆದಿದೆ. ಸ್ವಚ್ಛಂದ ನದಿಗಳ ಬೇರೆ ಕಡೆ ತಿರುಗಿಸಿದರೆ ಅದರಷ್ಟು ಅಪಾಯ ಬೇರೆ ಇಲ್ಲ. – ಪಾಂಡುರಂಗ ಹೆಗಡೆ, ಪರಿಸರ ಹೋರಾಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.