ಸೊಸೈಟಿ ವ್ಯವಸ್ಥಾಪಕಿ ಆತ್ಮಹತ್ಯೆ ಪ್ರಕರಣ; ಸಹೋದ್ಯೋಗಿಗಳ ಒತ್ತಡ ಆತ್ಮಹತ್ಯೆಗೆ ಕಾರಣ: ದೂರು
ಸಿದ್ದಾಪುರ ಸೊಸೈಟಿ ವ್ಯವಸ್ಥಾಪಕಿ ಆಶಾ ಆತ್ಮಹತ್ಯೆ ಪ್ರಕರಣ
Team Udayavani, Mar 27, 2024, 6:15 AM IST
ಸಿದ್ದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯಾಗಿ ಆಶಾ ಎಸ್. (52) ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾವ್, ಸಿಬಂದಿ ಮಂಜುನಾಥ, ವಲಯ ಮೇಲ್ವಿಚಾರಕ ಉದಯ ಕುಮಾರ ಶೆಟ್ಟಿ ಅವರೇ ಪ್ರೇರಣೆ ಎಂದು ಪತಿ ವಿಜಯ (52) ಮಾ. 25ರಂದು ಪೊಲೀಸರಿಗೆ ಮರು ದೂರು ನೀಡಿದ್ದಾರೆ.
ಆಶಾ ಮಾ. 20ರ ಮಧ್ಯಾಹ್ನ ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಕಚೇರಿಯ ಸಿಬಂದಿ ನಿರಂತರ ಕಿರುಕುಳ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಕೆ ಮನೆಯಲ್ಲಿ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ವಿಚಾರಿಸಿದಾಗ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾವ್, ಸಿಬಂದಿ ಮಂಜುನಾಥ, ವಲಯ ಮೇಲ್ವಿಚಾರಕ ಉದಯಕುಮಾರ ಶೆಟ್ಟಿ ಅವರು ಸಂಘದಲ್ಲಿ ನಡೆದ ವಂಚನೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. “ಬ್ಯಾಂಕಿನ ಹಣವನ್ನು ವಂಚನೆ ಮಾಡಿದ್ದಿ. ಅದನ್ನು ಮರಳಿ ಕೊಡು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೋ’ ಎಂದು ಪ್ರೇರಣೆ ನೀಡುತ್ತಿದ್ದರು. ಮಾ. 20ರಂದು ಪೂರ್ವಾಹ್ನ 11.30ರ ಸಮಯದಲ್ಲಿ ಆಶಾ ಮನೆಗೆ ಬಂದಿದ್ದರು. ಅವರ ತಾಯಿ ಕೂಡ ಮನೆಯಲ್ಲಿ ಇದ್ದರು. 11.50ರ ಸಮಯದಲ್ಲಿ ಮಹೇಶ್ ರಾವ್, ಮಂಜುನಾಥ, ಉದಯಕುಮಾರ ಶೆಟ್ಟಿ ಕಾರಿನಲ್ಲಿ ಮನೆಗೆ ಬಂದು ಆವಾಚ್ಯ ಶಬ್ದಗಳಿಂದ ಬೈದು ಮನೆಯ ಒಳಗೆ ಆಕ್ರಮವಾಗಿ ಪ್ರವೇಶ ಮಾಡಿ, ಆತ್ಮಹತ್ಯೆಗೆ ಪ್ರರàಪಿಸಿದ್ದಾರೆ. ಆಗ ಆಶಾ ಮಹಡಿಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಶಾ 28 ವರ್ಷಗಳ ಕಾಲ ಸೊಸೈಟಿಯಲ್ಲಿ ವಿವಿಧ ಹುದ್ಧೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಭಾರ ವ್ಯವಸ್ಥಾಪಕಿಯಾಗಿದ್ದರು. ಎಂದಿನಂತೆ ಮಾ. 20ರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘದಲ್ಲಿ ಆಡಿಟ್ ನಡೆಯುತ್ತಿತ್ತು. ಮಧ್ಯಾಹ್ನದ ಸಮಯದಲ್ಲಿ ಕಚೇರಿಯಿಂದ ಯಾರಿಗೂ ತಿಳಿಸದೇ ನೇರವಾಗಿ ಮನೆಗೆ ಹೋಗಿದ್ದರು.
ಸಂಘದ ಇಬ್ಬರು ಆತ್ಮಹತ್ಯೆ
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪಗಳು ಕೇಳಿಬರುತ್ತಿವೆ. ಇದರ ಬಗ್ಗೆ ಇಲಾಖೆಗಳ ತನಿಖೆ ಹಾಗೂ ಸರಕಾರಿ ಸಂಸ್ಥೆಗಳ ಆಡಿಟ್‌ನಿಂದ ವಿಚಾರಗಳು ಹೊರಬರುತ್ತವೆ. ಈಗಲೂ ಆಡಿಟ್ ಹಾಗೂ ತನಿಖೆಗಳು ನಡೆಯುತ್ತಿವೆ. ಹೀಗಿರುವಾಗ ಕಳೆದ 2 ವರ್ಷದ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಸಂಪತ್ ಕಾಮತ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಆಶಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗಳು ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.