ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭ
Team Udayavani, May 16, 2020, 5:51 PM IST
ಕುಮಟಾ: ತಾಲೂಕಿನಾದ್ಯಂತ ಮುಂಗಾರು ಭತ್ತದ ಬೆಳೆಯ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಜಯಾ ಹಾಗೂ ಎಂಟಿಯು-1,000 ತಳಿಯ ಸಹಾಯ ಧನದ ಬೀಜ ವಿತರಣೆ ಆರಂಭಿಸಲಾಗಿದೆ.
ತಾಲೂಕಿನಾದ್ಯಂತ ಒಟ್ಟೂ 2.850 ಹೆಕ್ಟೇರ್ ಭತ್ತದ ಬೆಳೆ ಬೆಳೆಯುವ ಪ್ರದೇಶಗಳಿದ್ದು, ಕೂಜಳ್ಳಿ ಹಾಗೂ ಅಳ್ವೆಕೋಡಿ ಭಾಗಗಳಲ್ಲಿನ ರೈತರು ಒಣ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಉಳಿದೆಡೆಗಳಲ್ಲಿ ಸಾಮಾನ್ಯವಾಗಿ ನೀರು ಬಿತ್ತನೆ ಹಾಗೂ ಹೋಬಳಿ ಭಾಗಗಳಲ್ಲಿ ಸಾಲು ನಾಟಿ ಅಧಿಕವಾಗಿದೆ. ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ಹಂತದಲ್ಲಿ 440 ಕ್ವಿಂಟಾಲ್ ಜಯಾ ಹಾಗೂ 220 ಕ್ವಿಂಟಾಲ್ ಎಂಟಿಯು-1,000 ತಳಿಯ ಬೀಜವನ್ನು ತರಿಸಿ, ಪ್ರತಿ ಕಿ.ಲೋಗೆ 8 ರೂ.ಗಳ ಸಹಾಯ ಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಬೇಡಿಕೆಗೆ ತಕ್ಕಂತೆ ಮೂರು ಹಂತಗಳಲ್ಲಿ ಬಿತ್ತನೆ ಬೀಜವನ್ನು ತರಿಸಿಕೊಡಲಾಗುವುದು. ತಾಲೂಕಿನಲ್ಲಿ ಬೀಜ ಭತ್ತದ ಒಟ್ಟೂ ಬೇಡಿಕೆ ಸರಿ ಸುಮಾರು 950 ಕ್ವಿಂಟಾಲ್ಗಳಿದ್ದು, ಈಗಾಗಲೇ ಹೆಚ್ಚಿನ ಭಾಗಗಳಲ್ಲಿ ಹಸಿರೆಲೆ ಗೊಬ್ಬರ ಹಾಕಿ, ಭೂಮಿ ಹದಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.