ಸ್ಪೀಕರ್ ಕಾಗೇರಿ ಹೇಳಿದ ತಟ್ಟಿಕೈ ಲಿಂಬು ಸೆಟ್ ಸ್ವಾದ ಕಥೆ!
Team Udayavani, Sep 7, 2022, 9:36 PM IST
ಶಿರಸಿ: ಮೂರು ವರ್ಷಗಳ ಹಿಂದೆ ಸಿದ್ದಾಪುರದ ತಟ್ಟಿಕೈನ ಲಿಂಬು ಸೆಟ್ ಒಯ್ದಿದ್ದೆ. ತಿಂದರೆ ಸ್ವಾದ. ಆರೋಗ್ಯಕ್ಕೂ ಹಿತಕರ. ಪಕ್ಕಾ ಲೋಕಲ್ ಮೇಡ್. ವಿಧಾನ ಸೌಧದಲ್ಲೂ ಅದು ಜನಪ್ರಿಯ ಹೀಗೆಂದು ಹೇಳಿದವರು ಇನ್ಯಾರೂ ಅಲ್ಲ, ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
ಸ್ವರ್ಣವಲ್ಲೀ ಮಠದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಗ್ರಾಮಾಭ್ಯುದಯದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಬುಧವಾರ ಪಾಲ್ಗೊಂಡ ಸ್ಪೀಕರ್ ಸ್ವದೇಶಿ ಉತ್ಪನ್ನ, ಅವಕಾಶ, ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಕನಸು ಎಲ್ಲ ಪ್ರಸ್ತಾಪಿಸಿ ಲೋಕಲ್ ತಿಂಡಿ ಜನಪ್ರಿಯತೆಯನ್ನು ಕೂಡ ಪ್ರಸ್ತಾಪಿಸಿದರು.
ಸ್ವ ಸಹಾಯ ಸಂಘಗಳ ಉತ್ಪನ್ನಕ್ಕೆ ಯಾವ ಮಟ್ಟದ ಬೇಡಿಕೆ ಇದೆ ಎಂಬುದನ್ನು ನಾನೇ ಕಂಡಿದ್ದೇನೆ. ಯಾವಾಗಲೋ ಹಳ್ಳಿಕಡೆ ಹೋದಾಗ ಸ್ಥಳೀಯ ಸಂಘಗಳು ಸಿದ್ದಪಡಿಸಿದ್ದ ಲಿಂಬು ಮೌತ್ ಪ್ರೆಶ್ನರ್ ಖರೀದಿಸಿದ್ದೆ. ವಿಧಾನ ಸೌಧದ ಆವರಣದಲ್ಲಿ ನಾನು ಲಿಂಬು ಫ್ರೆಶ್ನರ್ ತಿಂದಿದ್ದು ನೋಡಿ ಉಳಿದ ಶಾಸಕರು, ಸಚಿವರೂ ನನ್ನಿಂದ ಪಡೆದು ತಿಂದಿದ್ದರು. ಆ ಬಳಿಕ ಎಲ್ಲರೂ ನನ್ನಲ್ಲಿ ಲಿಂಬು ಪ್ರೆಶ್ನರ್ ಕೇಳಲಾರಂಭಿಸಿದ್ದಾರೆ. ಸಿಎಂ ಕೂಡ ರುಚಿ ನೋಡಿದ್ದಾರೆ. ಅದಾದ ಬಳಿಕ ಕೆಜಿ ಯಷ್ಟು ಇಟ್ಟುಕೊಳ್ಳುತ್ತೇನೆ ಎಂದರು.
ತೊಡದೇವು, ಹರಿಗಡಲೆ, ಚಿಪ್ಸ, ಹಪ್ಪಳ ಸೇರಿದಂತೆ ಅನೇಕ ವಸ್ತುಗಳಿಗೆ ಬೇಡಿಕೆ ಇವೆ. ಮಕ್ಕಳಿಗೆ ಲೇಸು ಕುರಕುರಿ ಬದಲಿಗೆ ಇದನ್ನು ತಿನ್ನಿಸುವದು ಕಲಿಸಬೇಕು ಎಂದೂ ಮನವಿ ಮಾಡಿದರು. ಈ ವೇಳೆ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.