ಹಣಗಳಿಸುವುದೇ ಸರ್ವಸ್ವ ಆಗಬಾರದು, ಹಣಕ್ಕಿಂತ ಜ್ಞಾನ ಸರ್ವಸ್ವ ಆಗಬೇಕು: ಸ್ಪೀಕರ್ ಕಾಗೇರಿ
Team Udayavani, Jun 1, 2022, 1:23 PM IST
ಶಿರಸಿ: ಹಣ ಗಳಿಸುವದಷ್ಟೇ ನಮ್ಮ ಜೀವನದ ಸರ್ವಸ್ವ ಆಗಬಾರದು. ಹಣಕ್ಕಿಂತ ಜ್ಞಾನ ಸರ್ವಸ್ವ ಆಗಬೇಕು ಎಂದು ಕರ್ನಾಕಟ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ನಗರದ ದೈವಜ್ಞ ಕಲಾಕಾರರ ಸಂಘ ನಿರ್ಮಾಣ ಮಾಡಿದ ಜ್ಞಾನೇಶ್ವರಿ ಸಭಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಭೋಗದ ಜೀವನ ಹಿಡಿದರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂದ ಅವರು, ನಮಗೆ ನಮ್ಮ ಇತಿಹಾಸ ಗೊತ್ತಿರಬೇಕು. ನಮ್ಮ ಇತರರು ಇತಿಹಾಸ ಅಪ್ಪ, ಅಜ್ಜ, ಮುತ್ತಜ್ಜ ಹೀಗೆ ವಂಶವೃಕ್ಷ ಗೊತ್ತಿರಬೇಕು. ನಮ್ಮ ದೇಶದ, ಸಮಾಜದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.
ದೈವಜ್ಞ ಯುವ, ಮಹಿಳಾ, ಕಲಾಕಾರರ ಸಂಘಟನೆ ಬಲವಾಗಿದೆ. ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಕಾರ್ಯ ಆಗಬೇಕು. ಸಮಾಜದ ಇತರರ, ರಾಷ್ಟ್ರದ ಹಿತದ ಜೊತೆ ನಮ್ಮ ಹಿತವನ್ನೂ ಕಾಯಬೇಕು. ಸಮಾಜ ಮುನ್ನಡೆಯಲು ಇದು ಸಹಕಾರಿ ಆಗಲಿದೆ ಎಂದರು.
ಕರ್ಕಿ ಜ್ಞಾನೇಶ್ವರಿ ಪೀಠದ ಮಠಾಧೀಶ ಶ್ರೀಸಚ್ಚಿದಾನಂ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳು ಸಾನ್ನಿಧ್ಯ ನೀಡಿದ್ದರು.
ಸಚಿವ ಶಿವರಾಮ ಹೆಬ್ಬಾರ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಆರ್.ಎಸ್.ರಾಯ್ಕರ ಉಪ್ಪೋಣಿ, ದೈವಜ್ಞ ಬ್ರಾಹ್ಮಣ ಸಭಾದ ಅಧ್ಯಕ್ಷ ರಾಮು ರಾಯ್ಕರ ಬ್ಲಾಕ್ ಕಾಂಗ್ರೆಸ್ ಅಧ್ಯಯನ ಜಗದೀಶ ಗೌಡ, ಅನಂತ ಭಟ್ಟ ಹಿರೇಮನೆ, ಗಜಾನನ ಪಾಲನಕರ, ಕೆ.ಪಿ.ಕಾನಳ್ಳಿ, ಸುರೇಶ ಶೇಟ್, ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆರ್ಣೇಕರ್, ಸುರೇಶ ಶೇಟ್, ಎಸ್.ಎಸ್.ಗೀತಾ, ಶಾರದಾ ಶೇಟ್, ಗಂಗಾಧರ ಭಟ್ಟ, ಆರ್.ಜಿ.ಶೇಟ್ ಕಾನಸೂರು,ಪ್ರಭಾಕರ ವೆರ್ಣೇಕರ್, ವಿನಾಯಕ ಶೇಟ್, ಉದಯಕುಮಾರ ಕಾನಳ್ಳಿ, ಮದನ ದಿವಾಕರ, ಸಂತೋಷ ರೇವಣಕರ, ಗಜಾನನ ಪಾಲಕನಕರ, ಡಿ.ಎಚ್.ಸಾನು, ವಿಜಯಕುಮಾರ ಭಟ್ಟ, ರಂಗನಾಥ ರಾಯ್ಕರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.