ರಾಷ್ಟ್ರದ ಜನರಿಗೆ ಗಾಂಧಿಜಿ, ಲಾಲಬಹುದ್ದೂರ್ ಶಾಸ್ತ್ರೀ ಇಂದಿಗೂ ಪ್ರೇರಕರು: ಕಾಗೇರಿ
Team Udayavani, Oct 2, 2021, 12:06 PM IST
ಶಿರಸಿ: ಮಹಾತ್ಮಾ ಗಾಂಧಿಜಿ, ಲಾಲಬಹುದ್ದೂರ್ ಶಾಸ್ತ್ರೀ ಅವರು ಯುವ ಪೀಳಿಗೆಗೆ, ರಾಷ್ಟ್ರದ ಜನರಿಗೆ ಇಂದಿಗೂ ಪ್ರೇರಣೆ ಆದವರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.
ಶನಿವಾರ ನಗರದ ಬಿಡಕಿ ಬಯಲಿನಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಬಂಧಕ್ಕೆ ಬಹುಮಾನ, ಹಿರಿಯ ನಾಗರೀಕರಿಗೆ ಸಮ್ಮಾನ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಮಾತನಾಡಿದರು.
ಗಾಂಧಿಜಿ, ಲಾಲಬಹುದ್ದೂರ ಶಾಸ್ತ್ರಿಗಳು ದೇಶಕ್ಕೇ ಬದುಕನ್ನು ಮೀಸಲು ಇಟ್ಟವರು. ಭಾರತದ ಸಂಸ್ಕೃತಿಯ ಪ್ರತೀಕವಾಗಿ ಜೀವನ ನಡೆಸಿದವರು. ಪ್ರಪಂಚದ ಹಲವು ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದವರು ಎಂದರು.
ಸ್ವದೇಶಿ ಚಿಂತನೆ ಬೆಳಸಿಕೊಳ್ಳವೇಕು. ಆತ್ಮನಿರ್ಭರ ಭಾರತವಾಗಿ ಮಾಡಲು ಮುಂದಾಗಬೇಕು. ನಮ್ಮ ಮನಸ್ಸು ಬುದ್ದಿ ಸ್ವಚ್ಛವಾಗಿರಬೇಕು, ನಮ್ಮ ಪರಿಸರ ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಗಾಂಧಿಜಿ, ಶಾಸ್ತ್ರಿಗಳ ಬದುಕು, ಮೌಲ್ಯ ನೆನಪಿಸಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ವಹಿಸಿ, ಸ್ವಚ್ಛ, ಸ್ವಸ್ಥ ಭಾರತ ಆಗಬೇಕು ಎಂದರು.
ವೇದಿಕೆಯಲ್ಲಿ ಡಿವೈಎಸ್ಪಿ ರವಿ ನಾಯಕ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಪೌರಾಯುಕ್ತ ಕೇಶವ ಚೌಹ್ವಾಣ ಇತರರು ಇದ್ದರು.
ನಗರ ಹಾಗೂ ಗ್ರಾಮೀಣ ಭಾಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ಸ್ವಚ್ಛತೆಗೆ ಜನತೆ ಸಹಭಾಗಿತ್ವದಲ್ಲಿ ಆದ್ಯತೆ ನಡೆಸಬೇಕು. – ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.