ಅಂಕೋಲಾ: ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ
Team Udayavani, Dec 29, 2021, 7:27 PM IST
ಅಂಕೋಲಾ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬುಧವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಅಂಕೋಲಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜನಸಂಘದ ಹಿರಿಯ ಕಾರ್ಯಕರ್ತ ಅಶೋಕ ಮಹಾಲೆ ಅವರ ಹೊಟೇಲಿಗೆ ಭೇಟಿ ನೀಡಿ ಕರೆ ಲಾಡು- ಚಹ ಸೇವಿಸಿ ಸರಳತೆಗೆ ಸಾಕ್ಷಿಯಾದರು.
ವಿಶ್ವೇಶ್ವರ ಹೆಗಡೆ ಅವರು ಪ್ರಥಮ ಬಾರಿ ಶಾಸಕರಾಗಿದ್ದು ಅಂಕೋಲಾ ಕ್ಷೇತ್ರದಿಂದ ಎನ್ನುವುದು ಗಮನಾರ್ಹ.
ನಂತರ ಒಮ್ಮೆ ಆಯ್ಕೆ ಆದವರು ಮತ್ತೊಮ್ಮೆ ಆಯ್ಕೆ ಆಗುವುದಿಲ್ಲ ಎಂಬ ಅಂಕೋಲಾ ಕ್ಷೇತ್ರದ ಪ್ರತೀತಿ ಬದಲಿಸಿ ಮೂರು ಬಾರಿ ಆಯ್ಕೆ ಆಗಿ ದಾಖಲೆ ಬರೆದಿದ್ದಾರೆ. ಈ ಆಯ್ಕೆಗೆ ಸಹಕರಿಸಿದ ಹಿರಿಯ ಕಾರ್ಯಕರ್ತರಲ್ಲಿ ಓರ್ವರಾದ ಅಶೋಕ ಮಹಾಲೆ ಅವರನ್ನು ನೆನಪಿಸಿಕೊಂಡು ಈಗ ಕಾರವಾರ ರಸ್ತೆಯಲ್ಲಿರುವ ಪುಟ್ಟ ಹೊಟೇಲ್‌ಗೆ ಭೇಟಿ ನೀಡಿ ಕುಶಲೋಪಚರಿ ವಿಚಾರಿಸಿದರು.
ಅದೇ ರೀತಿ ಕಿತ್ತೂರು ಚೆನ್ನಮ್ಮಾ ರಸ್ತೆಯಲ್ಲಿರುವ ಇನ್ನೋರ್ವ ಹಿರಿಯ ರಾಮಚಂದ್ರ ನಾಯ್ಕ ಅವರ ಅಂಗಡಿಗೂ ಹೋಗಿ ಅವರ ಆರೋಗ್ಯ ವಿಚಾರಿಸಿದರು.
ನಾಮಧಾರಿ ದಹಿಂಕಾಲ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಪ್ರಮುಖರಾದ ಸಾಯಿ ಕಿರಣ ಶೇಟಿಯಾ, ಭಾಸ್ಕರ ನಾರ್ವೇಕರ್, ಸಂಜಯ ನಾಯ್ಕ, ನಾಗೇಂದ್ರ ನಾಯ್ಕ , ನಾಗೇಶ ನಾಯ್ಕ, ರಾಜು ನಾಯ್ಕ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.