ಶತಚಂಡಿಯಾಗ ಸಂಪನ್ನ
Team Udayavani, Jun 17, 2020, 11:31 AM IST
ಯಲ್ಲಾಪುರ: ನಾಯಕನಕೆರೆಯ ಶ್ರೀ ಬಾಲಾತ್ರಿಪುರ ಸುಂದರೀ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕರ ಸಂಕಲ್ಪದಂತೆ ಮಹಾಮಾರಿ ಕೋವಿಡ್ ನಿರ್ಮೂಲನೆಗಾಗಿ ಶಾರದಾಂಬಾ ಸಂಸ್ಕೃತ ಪಾಠಶಾಲೆ ಅಧ್ಯಾಪಕ, ವಿದ್ಯಾರ್ಥಿ-ಮಾಜಿ ವಿದ್ಯಾರ್ಥಿಗಳ ವೃಂದದಿಂದ ಹಮ್ಮಿಕೊಂಡಿದ್ದ ಶತಚಂಡೀಯಾಗ ಕಾರ್ಯಕ್ರಮ ಸಂಪನ್ನಗೊಂಡಿತು.
ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಂಗಳವಾರ ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಪುರೋಹಿತ ವೇ| ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಮತ್ತು ಅರ್ಚಕ ವೇ| ಗೋಪಾಲಕೃಷ್ಣ ಭಟ್ಟ ನೇತೃತ್ವದಲ್ಲಿ ಸುಮಾರು 25 ವೈದಿಕರ ಉಪಸ್ಥಿತಿಯಲ್ಲಿ ಶತಚಂಡಿಯಾಗ ನೆರವೇರಿತು.
ಲೋಕಕಲ್ಯಾಣಾರ್ಥವಾಗಿ ದೇವಿಯ ಕೃಪೆ ದೊರೆಯುವುದಕ್ಕೆ ಈ ಕಾರ್ಯಕ್ರಮ ಮಾಡಿರುವುದು ಸಮಾಜಕ್ಕೆ ಆದರ್ಶವೆಂದು ಶ್ರೀಗಳು ನುಡಿದರು. ಅಲ್ಲದೇ ಶಾರದಾಂಬೆ ಮತ್ತು ಹನುಮಂತ ದೇವರ ವಿಶೇಷ ವಾರ್ಷಿಕ ಕಾರ್ಯಕ್ರಮ ವೇ| ಕಟ್ಟೆ ಶಂಕರ ಭಟ್ಟ ನೇತೃತ್ವದಲ್ಲಿ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.