ಗ್ರಹಣ ಕಾಲ ಮಹಾಬಲೇಶ್ವರನಿಗೆ ವಿಶೇಷ ಪೂಜೆ
Team Udayavani, Jun 22, 2020, 10:08 AM IST
ಹೊನ್ನಾವರ: ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು.
ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು ಅವಕಾಶ ನೀಡಲಾಯಿತು. ಸರಕಾರದ ನಿಯಮಗಳ ಪ್ರಕಾರ ಜನರ ದೇಹದ ಉಷ್ಣಾಂಶ ನೋಡಿ, ಸ್ಯಾನಿಟೈಜರ್ ಸಿಂಪಡಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶ್ರೀದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆಯಲ್ಲಿ ಆತ್ಮಲಿಂಗಕ್ಕೆ ನಿರಂತರ ಗಂಗಾಜಲಾಭಿಷೇಕ ಏರ್ಪಡಿಸಲಾಗಿತ್ತು. ರಾಷ್ಟ್ರದ ಗಡಿಯಲ್ಲಿ ಹೋರಾಡುತ್ತಿರುವ ಧೀರಯೋಧರಿಗೆ ಜಯ ಸಿಗಲೆಂದು ಮತ್ತು ರಾಷ್ಟ್ರದಲ್ಲಿ ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೋವಿಡ್-19 ಸಂಪೂರ್ಣ ನಾಶಹೊಂದುವಂತೆ ಪ್ರಾರ್ಥಿಸಿ ಅಭಿಷೇಕ ಮಾಡಲಾಯಿತು. ಗ್ರಹಣ ಮೋಕ್ಷದ ನಂತರ ಸ್ಥಳಶುದ್ಧಿ ಮಾಡಿ, ಶುದ್ಧಿ ಹೋಮ ಮಾಡಿ ಶ್ರೀದೇವರಿಗೆ ವಿಶೇಷ ಮಹಾಪೂಜೆ ಮಾಡಲಾಯಿತು. ವೇ| ಪರಮೇಶ್ವರ ಮಾರ್ಕಾಂಡೆ ಮಹಾಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್ ಅಯ್ಯರ್
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.