ಶಿರಸಿಯಲ್ಲಿ ಯಶಸ್ವಿಯಾಗಿ ಜರುಗಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ
Team Udayavani, Aug 30, 2021, 9:50 PM IST
ಶಿರಸಿ: ಹಿಂದಿನ ದಿನಗಳಿಗೆ ಹೊಲಿಸಿದರೆ ಇಂದಿನ ದಿನದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಸಾಧಿಸಲು ಇಂದು ಅನೇಕ ಅವಕಾಶಗಳಿವೆ. ಅದು ಕ್ರೀಡಾ ಕ್ಷೇತ್ರವಾಗಿರಬಹುದು ಅಥವಾ ಇನ್ನೀತರೇ ಕ್ಷೇತ್ರವಾಗಿರ ಬಹುದು ಎಂದು ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಹೇಳಿದರು.
ಶಿರಸಿಯ ಅದ್ವೈತ ಸ್ಕೇಟರ್ಸ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ ಸ್ಕೇಟಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿರಸಿಯಂತಹ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಕೇಟಿಂಗ್ ಕ್ರೀಡೆಯ ತರಬೇತಿ ಆರಂಭವಾಗಿದೆ. ಅನೇಕ ಸ್ಕೇಟಿಂಗ್ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಜೀವನದಲ್ಲಿ ಸಾಧಿಸಿದಾಗ ಸಿಗುವ ಸಾರ್ಥಕತೆ ಇನ್ನೆಲ್ಲೂ ಸಿಗುವುದಿಲ್ಲ. ಪರಿಶ್ರಮವೇ ಸಾಧನೆಗೆ ದಾರಿಯಾಗುವುದು ಎಂದು ಉಪಸ್ಥಿತರಿದ್ದ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಶಿರಸಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವಂತೆ ಪ್ರೇರೇಪಿಸಿದರು.
ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯನ್ನು ನಾಲ್ಕು ವಿಭಾಗದಲ್ಲಿ ಏರ್ಪಡಿಸಲಾಗಿತ್ತು.
11-14 ವರ್ಷದ ವಿಭಾಗದಲ್ಲಿ
ಪ್ರಥಮ ಸ್ಥಾನ
ನವೀನ ಮಡಿವಾಳ
ದ್ವಿತೀಯ ಸ್ಥಾನ
ನವೀನ ಎಮ್ ಡಿ
9-11 ವರ್ಷದ ವಿಭಾಗದಲ್ಲಿ
ಪ್ರಥಮ ಸ್ಥಾನ
ಆರ್ಯನ್ ಮಾಡಗೆರಿ
ದ್ವಿತೀಯ ಸ್ಥಾನ
ಅದ್ವೈತ ಪ್ರಹ್ಲಾದ ದೇವ
7-8 ವರ್ಷದ ವಿಭಾಗದಲ್ಲಿ
ಪ್ರಥಮ ಸ್ಥಾನ : ಖುಷಿ ಸಾಲೇರ
ದ್ವಿತೀಯ ಸ್ಥಾನ : ಅದ್ವೈತ ಕಿರಣಕುಮಾರ ಕುಡಾಳಕರ
5-7 ವರ್ಷದ ವಿಭಾಗದಲ್ಲಿ
ಪ್ರಥಮ ಸ್ಥಾನ : ಶಂಕರ ಗೌಡ
ದ್ವಿತೀಯ ಸ್ಥಾನ : ಪ್ರಣೀತ ಜೋಗಳೆಕರ. ಸ್ಪರ್ಧಿಗಳು ವಿಜೇತರಾದರು.
ವಿಜೇತರಿಗೆ ಶಿರಸಿಯ ಕಾಮಧೇನು ಜ್ಯುವೇಲರಿಸ್ ಮಾಲಕ ಪ್ರಕಾಶ ಪಾಲನಕರ ಪ್ರಮಾಣಪತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಕಾಶ ಪಾಲನಕರ ಹಾಗೂ ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಇವರನ್ನು ಸ್ಕೇಟಿಂಗ್ ಕ್ಲಬಿನ ಪ್ರಧಾನ ಕಾರ್ಯದರ್ಶಿ ಗೌರಿ ಲೋಕೇಶ್ ಹಾಗೂ ಟ್ರಸ್ಟಿ ವಿಶ್ವನಾಥ ಕುಡಾಳಕರ ಸನ್ಮಾನಿಸಿದರು.
ಸ್ಪರ್ಧೆಯ ಆರಂಭದಲ್ಲಿ ಕ್ರೀಡಾಪಟುಗಳಿಗೆ ಅರ್ಚನಾ ಪಾವುಸ್ಕರ ಕ್ರೀಡಾ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಕ್ಲಬಿನ ಕ್ರೀಡಾಪಟುಗಳ ಪಾಲಕ ಪೋಷಕರೇ ನಿರ್ವಹಿಸಿದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ಶ್ಯಾಮಸುಂದರ ನಿವರ್ಹಿಸಿದರು.
ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ, ತರಬೇತುದಾರರಾದ ತರುಣ ಗೌಳಿ ಪಾಲಕ ಪೋಷಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.