SSLC Result ಪೇಟೆಲಿದ್ದೂ ಹಳ್ಳಿ ಶಾಲೆಯಿಂದ ರ‍್ಯಾಂಕ್ ಪಡೆದ ಹುಡುಗಿ!
ಸಾಹಿತ್ಯಾಸಕ್ತ ಹುಡುಗನಿಗೆ 621 ಅಂಕ!
Team Udayavani, May 8, 2023, 10:28 PM IST
ಶಿರಸಿ: ವಾಸ್ತವ್ಯ ಪೇಟೆಯಲ್ಲಿ, ಆದರೆ, ಹೈಸ್ಕೂಲ್‌ಗೆ ಹೋಗುವದು ಹಳ್ಳಿಗೆ! ಯಾವುದೇ ಟ್ಯೂಶನಗೂ ಹೋಗದೇ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ವಿದ್ಯಾರ್ಥಿನಿ ಸೌಜನ್ಯ ವಿನಾಯಕ ಹೆಗಡೆ ದಾಖಲೆ ಮಾಡಿದ್ದಾಳೆ. ಹಳ್ಳಿ ಮಕ್ಕಳು ಶಿಕ್ಷಣಕ್ಕಾಗಿ ಪೇಟೆಗೆ ತೆರಳಿದರೆ ಈಕೆ ಕುಳವೆ ಬರೂರು ಜನತಾ ವಿದ್ಯಾಲಯಕ್ಕೆ ತೆರಳಿ ಈ ಸಾಧನೆ ಮಾಡಿದ್ದಾಳೆ.
625ಕ್ಕೆ 623 ಅಂಕ ಪಡೆದ ಈಕೆ ವಿನಾಯಕ ಹೆಗಡೆ ಗುಬ್ಬಿಗದ್ದೆ, ಪ್ರಿಯಲಕ್ಷ್ಮೀ ಅವರ ಪುತ್ರಿ. ಕನ್ನಡ 125, ಸಂಸ್ಕೃತ, ಗಣಿತ, ವಿಜ್ಞಾನದಲ್ಲಿ ಶೇ.100 ಅಂಕ ಪಡೆದು ಸಾಧನೆ ಮಾಡಿದ್ದಾಳೆ, ನಿರಂತರ ಓದು, ಶಿಕ್ಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎನ್ನುತ್ತಾಳೆ ಸೌಜನ್ಯ. ರಾಜ್ಯಕ್ಕೆ ಮೂರನೇ ರ‍್ಯಾಂಕ್, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಸಾಹಿತ್ಯಾಸಕ್ತ ಹುಡುಗನಿಗೆ 621 ಅಂಕ!
ಇದೇ ಪ್ರೌಢ ಶಾಲೆಯ ಯುವ ಕವಿ ದರ್ಶನ ಜಯಂತ ಭಟ್ಟ 625 ಕ್ಕೆ 621 ಅಂಕ ಪೆದು ಸಾಧನೆ
ಮಾಡಿದ್ದಾನೆ. ದರ್ಶನಗೆ ಕನ್ನಡಕ್ಕೆ ೧೨೫, ಗಣಿತಕ್ಕೆ ೧೦೦, ಸಮಾಜ ವಿಜ್ಷಾಣಕ್ಕೆ 100 ಅಂಕ ಪಡೆದಿದ್ದಾನೆ. ದರ್ಶನ್ ಹೆಗಡೆ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದಾನೆ. ಪ್ರಗತಿ ಪರ ಕೃಷಿಕ ಕಬಗಾರಿನ ಜಯಂತ ಭಟ್ಟ ಅವರ ಪುತ್ರ ದರ್ಶನ್ ಈ ಸಾಧನೆ ಮಾಡಿದ್ದು, ಹಳ್ಳಿ ಹುಡುಗನೊಬ್ಬ, ಹಳ್ಳಿ ಶಾಲೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಾಗುವಂತೆ ಆಗಿದ್ದಾನೆ. ದಿನಕರ ದೇಸಾಯಿ ಕನಸಿನ ಜನತಾ ವಿದ್ಯಾಲಯದಲ್ಲಿ ಇಬ್ಬರು ರಾಜ್ಯ ಮಟ್ಟದ ರ‍್ಯಾಂಕ್ ಪಡೆದಿದ್ದುದು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.