ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Team Udayavani, Jan 16, 2025, 4:37 PM IST
ಶಿರಸಿ: ತನ್ನ ಅನಾರೋಗ್ಯ ನಿರ್ವಹಣೆಗಾಗಿ ಕೂಡಿಟ್ಟ ಹಣವುಳ್ಳ ಚೀಲವನ್ನು ಬಸ್ಸಿನಲ್ಲೇ ಬಿಟ್ಟು ಇಳಿದು ಹೋಗಿದ್ದ ವೃದ್ದೆಯನ್ನು ಹುಡುಕಿ ಅವರಿಗೆ ಹಣದ ಚೀಲವನ್ನು ತಲುಪಿಸುವ ಮೂಲಕ ವಾಯುವ್ಯ ಸಾರಿಗೆ ಸಂಸ್ಥೆಯ ಸಿಬಂದಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ ಎನ್ನುವ 70 ವರ್ಷದ ವಯೋವೃದ್ಧ ಮಹಿಳೆ. ತನ್ನ ಚಿಕಿತ್ಸೆಗಾಗಿ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿಯನ್ನು ಮಾರಿ ಕೂಡಿಟ್ಟ 9.500 ರೂಪಾಯಿ ಹಣವನ್ನು ಖಾಲಿ ಅಕ್ಕಿ ಚೀಲದೊಳಗೆ ಇರಿಸಿ, ಶಿರಸಿ – ಹಾವೇರಿ ಮಾರ್ಗದ ಬಸ್ಸಿನಲ್ಲಿ ಎರಡು ದಿನದ ಹಿಂದೆ ಪ್ರಯಾಣಿಸಿದ್ದರು. ಅಂದು ಇಳಿಯುವ ಗಡಿಬಿಡಿಯಲ್ಲಿ ಹಣ ಇದ್ದ ಚೀಲವನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟು ಇಳಿದಿದ್ದರು.
ಗಂಟುಕಟ್ಟಿದ ಈ ಚೀಲವನ್ನು ಗಮನಿಸಿದ ಶಿರಸಿ ಹಾವೇರಿ ವಾಹನದ ಖಾಯಂ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್ ಅವರು ಚೀಲವನ್ನು ಜೋಪಾನದಿಂದ ಕಾಪಾಡಿ ಅದರಲ್ಲಿರುವ ಪಡಿತರ ಚೀಟಿಯಲ್ಲಿನ ವಿಳಾಸದ ಆಧಾರದ ಮೇಲೆ ಮೂಲ ವಾರಸುದಾರರನ್ನು ಪತ್ತೆ ಮಾಡಿ, ಮಹಿಳೆಗೆ ಮರಳಿಸುವಲ್ಲಿ ಯಶಸ್ಸಾದರು.
ಕಡು ಬಡತನದಲ್ಲಿರುವ ಈ ವೃದ್ಧೆ ಹಣ ಹಾಗೂ ಸಾಮಾನುಗಳನ್ನು ಮರಳಿ ಪಡೆದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ವಾಹಕನ ಪ್ರಾಮಾಣಿಕತೆಗೆ ವಾಯುವ್ಯ ಸಾರಿಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Just Married: ಮಚ್ಚನಿಗೆ ಕಿಚ್ಚನ ಸಾಥ್; ʼಜಸ್ಟ್ ಮ್ಯಾರೀಡ್ʼನಿಂದ ಹಾಡು ಬಂತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Chikkamagaluru: ಎರಡು ದಿನದ ಮಗುವನ್ನು ಕಾಫಿ ತೋಟದಲ್ಲಿ ಬಿಟ್ಟುಹೋದ ತಾಯಿ
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.