ತಜ್ಞರಿಂದ ಕಲ್ಲು ಸಂಕ ಪರಿಶೀಲನೆ
Team Udayavani, Apr 2, 2021, 7:29 PM IST
ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಲವಳ್ಳಿಸಮೀಪ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಅಪರೂಪದಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಅಲ್ಲಿನ ಭೂ ಗುಣದಅಧ್ಯಯನಕ್ಕೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಭೂಗರ್ಭ ಶಾಸ್ತ್ರಜ್ಞರಾದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಆಗಮಿಸಿದ್ದರು.
ಜಗತ್ತಿನಲ್ಲೇ ಎರಡನೆಯದು ಎನ್ನಲಾಗುವ ಪ್ರಕೃತಿ ನಿರ್ಮಿತ ಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಗ್ರಾಮಸ್ಥರು ಸರಕಾರಕ್ಕೆಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿಯವರು ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪನವರ ಗಮನಕ್ಕೆ ತಂದು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಮೂಲಕ 20 ಲಕ್ಷ ರೂ.ಗಳ ಅನುದಾನ ಮಂಜೂರಿ ಮಾಡಿಸಿದ್ದರು.
ಶಿಥಿಲಗೊಳ್ಳುತ್ತಿರುವ ಕಲ್ಲುಸಂಕದ ಸಂರಕ್ಷಣೆ ಕಾಮಗಾರಿ ನಡೆಸುವ ಮುನ್ನ ಅದಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಕಾರಣಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭಶಾಸ್ತ್ರಜ್ಞರನ್ನು ಇಲ್ಲಿನ ಭೂ ಗುಣದ ಪರೀಕ್ಷೆಗೆ ಕರೆತಂದಿದ್ದರು.ಕಲ್ಲು ಸಂಕದ ಮೇಲ್ಭಾಗ ಹಾಗೂ ಕೆಳಗಿನ ಹಳ್ಳದಲ್ಲಿನಮಣ್ಣು, ಕಲ್ಲುಗಳ ಪರೀಕ್ಷೆ, ಹಳ್ಳದಲ್ಲಿ ನೀರು ಹರಿಯುವಿಕೆಗಳಬಗ್ಗೆ ಪರೀಕ್ಷೆ ನಡೆಸಿದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಕಲ್ಲು ಸಂಕ ಲ್ಯಾಟ್ರೇಟ್ (ಜಂಬಿಟ್ಟಿಗೆ) ನಿಂದ ಪರಿವರ್ತಿತವಾದ ಅಗ್ನಿಶಿಲೆ ಕಲ್ಲುಗಳಿಂದ ರಚನೆಯಾಗಿದ್ದು ತಳ ಭಾಗದಲ್ಲಿಹರಿಯುವ ಹಳ್ಳದ ನೀರಿನ ಹರಿಯುವಿಕೆ ಕಾರಣದಿಂದ ಕೊರೆದಿದೆ. ಮಿಲಿಯಗಟ್ಟಲೆ ವರ್ಷಗಳ ಹಿಂದಿನ ಪ್ರಕ್ರಿಯೆ ಇದಾಗಿದ್ದು ನೀರಿನೊಳಗಿನ ಶಿಲೆಗಳು ಹಗುರವಾಗಿದ್ದು ಮೇಲ್ಭಾಗದ ಶಿಲೆಗಳು ಭಾರವಾಗಿವೆ. ವಾತಾವರಣದಬದಲಾವಣೆ ಕಾರಣದಿಂದ ಶಿಲೆಗಳು ಶಿಥಿಲಗೊಳ್ಳುತ್ತಿವೆ.ಕಲ್ಲುಸಂಕದ ಸುತ್ತಲಿನ ಭಾಗದ ನೆಲದಲ್ಲಿ ಈ ಶಿಲಾರಚನೆ ಇದೆ.ಇಲ್ಲಿ ಕಾಮಗಾರಿ ಮಾಡುವುದು ಸೂಕ್ಷ್ಮ ಮತ್ತು ಸವಾಲಿನ ಕೆಲಸವಾಗಿದೆ. ನಾವು ಯೋಜನಾ ವರದಿ ನೀಡುವ ಮುನ್ನಇನ್ನೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ವಿವರಿಸಿದರು.
ಮಳೆಗಾಲದ ರಭಸದ ನೀರಿನ ಹರಿವಿನ ಕಾರಣ ಕಲ್ಲುಸಂಕದ ತಳಭಾಗದ ಕಲ್ಲುಗಳು ಕುಸಿದಿವೆ. ಹಾಗಾಗಿ ಹಳ್ಳದ ನೀರಿನ ಹರಿಯುವಿಕೆಯನ್ನು ಕಲ್ಲುಸಂಕದ ಮತ್ತೂಂದುತಳಭಾಗದಲ್ಲಿ ಹರಿಯುವಂತೆ ಮಾಡಬೇಕು. ಯಾವುದೇಕಾರಣಕ್ಕೂ ಸಿಮೆಂಟ್ ಮುಂತಾದ ಆಧುನಿಕ ಪರಿಕರಗಳಬಳಕೆ ಬೇಡ. ಹಳ್ಳದ ಅಂಚಿನಲ್ಲಿ ಪಿಚಿಂಗ್ ನಿರ್ಮಾಣ ಮತ್ತುಗಿಡಗಂಟಿಗಳನ್ನ ತೆರವು ಮಾಡಬೇಕು ಎಂದು ಗ್ರಾಮಸ್ಥರಾದ ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಆಗ್ರಹಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭ ಶಾಸ್ತ್ರಜ್ಞರ ವರದಿ ಹಾಗೂ ಗ್ರಾಮಸ್ಥರ ಅಭಿಪ್ರಾಯಪಡೆದು ಕಲ್ಲು ಸಂಕಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದರು.
ಪ್ರಾಧಿಕಾರದ ಸಹಾಯಕ ನಿರ್ದೇಶಕ ಶೇಜೇಶ್ವರ, ಕಾರವಾರನಿರ್ಮಿತಿ ಕೇಂದ್ರದ ಸಂಯೋಜನಾ ಆಯುಕ್ತ ಕುಮಾರ ಶೆಟ್ಟಿ,ಗ್ರಾಪಂ ಸದಸ್ಯ ಶ್ರೀನಿವಾಸ, ಗ್ರಾಮಸ್ಥರಾದ ನಾರಾಯಣ್,ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.