ಶತಮಾನದ ಸಂಭ್ರಮಕ್ಕೆ ದಾಪುಗಾಲು
Team Udayavani, Sep 17, 2018, 5:26 PM IST
ಶಿರಸಿ: ಗ್ರಾಮೀಣ ಪತ್ತಿನ ಸೇವಾ ಸಹಕಾರಿ ಸಂಘಗಳಲ್ಲಿ ಮುಂಚೂಣಿಯಲ್ಲಿರುವ ತಾಲೂಕಿನ ಹೆಗಡೆಕಟ್ಟಾದ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವು ಸಾಲ ವಸೂಲಿಯಲ್ಲೂ ಶೇ. 99ಕ್ಕಿಂತ ಅಧಿಕ ಸಾಧನೆ ಮಾಡಿದ್ದು, ಸೇವೆಯ ಜೊತೆ ಲಾಭದದಲ್ಲೂ ಹಿಂದೆ ಬೀಳದೇ 32 ಲಕ್ಷ ರೂ. ನಿವ್ವಳವಾಗಿ ಉಳಿಸಿಕೊಂಡಿದೆ.
ಸೊಸೈಟಿ ಅಧ್ಯಕ್ಷ ಎಂ.ಪಿ. ಹೆಗಡೆ ಹೊನ್ನೆಕಟ್ಟ ಸಂಘದ ಸಾಧನೆಯ ವಿಷಯ ತಿಳಿಸಿ, ಕಳೆದ ಆರ್ಥಿಕ ವರ್ಷಾಂತ್ಯಕ್ಕೆ 33,82,086.79 ರೂ. ನಿವ್ವಳ ಲಾಭ ಗಳಿಸಿದ್ದು, ಇದು ಕಳೆದ ಸಾಲಿಗಿಂತ 2,55,053.71 ರೂ. ರಷ್ಟು ಹೆಚ್ಚಾಗಿದೆ. ಸದಸ್ಯರ ಪಾಲುಧನದ ಮೇಲೆ ಶೇ. 12 ಲಾಭಾಂಶ ನೀಡಲು ಆಡಳಿತ ಸಮಿತಿ ತೀರ್ಮಾನಿಸಿದೆ ಎಂದು ವಿವರಿಸಿದ್ದಾರೆ.
ಸಂಘದಲ್ಲಿ 683 ಸದಸ್ಯರಿದ್ದು, ಶೇರು ಬಂಡವಾಳ 51,68,900 ರೂ. ಹೊಂದಿದ್ದು ಠೇವು 13,02,05,479.30 ರೂ. ಇದ್ದು ವರದಿ ವರ್ಷದಲ್ಲಿ 104887934 ರೂ. ಸಾಲ ವಿತರಿಸಿದೆ. ವರದಿ ವರ್ಷಾಂತ್ಯಕ್ಕೆ ಶೇ.99.66 ಸಾಲ ವಸೂಲಾತಿ ಆಗಿದ್ದು ಇರುತ್ತದೆ. ಸಂಘದ ಕಾಯ್ದಿಟ್ಟ ನಿಧಿಗಳು ರೂ. 19003913.42 ಇದೆ. ಸಂಘದ ದುಡಿಯುವ ಬಂಡವಾಳವು ಕಳೆದ ಸಾಲಿಗಿಂತ 36,06,141 ರೂ. ರಷ್ಟು ಹೆಚ್ಚಳವಾಗಿ ವರ್ಷಾಂತ್ಯಕ್ಕೆ 15,84,78,334 ರೂ. ಆಗಿದೆ. ಸದಸ್ಯರ ಮಹಸೂಲುಗಳನ್ನು ಮಾರ್ಕೆಟಿಂಗ್ ಸೊಸೈಟಿಗಳ ಮೂಲಕ 3,991 ಕ್ವಿಂ. ವಿಕ್ರಯಿಸಿದ್ದು ಅದರ ಮೌಲ್ಯ 10,37,47,027 ರೂ. ಆಗಿದೆ. ಇದರಿಂದ 4,87,074 ರೂ. ರಿಬೇಟನ್ನು ಕೂಡ ಸಂಘ ಪಡೆದಿದೆ. ಸಂಘದ ಕಿರಾಣಿ ವಿಭಾಗದಲ್ಲಿ 2.22 ಕೋ.ರೂ. ವಸ್ತುಗಳು ವಿಕ್ರಯಿಸಿ 1,17,916 ರೂ. ನಿಕ್ಕೀ ಲಾಭಗಳಿಸಿದೆ. ಸಂಘವು ಕಳೆದ ಹನ್ನೊಂದು ವರ್ಷಗಳಿಂದ ಸತತವಾಗಿ ಆಡಿಟ್ ವರ್ಗೀಕರಣದಲ್ಲಿ ‘ಅ’ ಶ್ರೇಣಿಯಲ್ಲಿ ಮುಂದುವರೆದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಘವು ತನ್ನ ಸದಸ್ಯರಿಗೆ ತ್ವರಿತವಾಗಿ ವಿವಿಧ ರೀತಿಯ ಕೃಷಿ ಮತ್ತು ಕೃಷಿಯೇತರ ಸಾಲಗಳನ್ನು ನೀಡುತ್ತಿದೆ. ಸಂಘವು ಯಚಡಿ ಭಾಗದ ಗ್ರಾಮದ ಸದಸ್ಯರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಯಚಡಿಯಲ್ಲಿ ತನ್ನ ಶಾಖೆಯನ್ನು ತೆರೆದಿದ್ದು, ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ವಸ್ತುಗಳನ್ನು ವಿಕ್ರಯಿಸುತ್ತಿದೆ. ಶಿಕ್ಷಣ ಹಾಗೂ ಸಾರ್ವಜನಿಕ ಸೇವಾ ಕಾರ್ಯದಲ್ಲಿಯೂ ಗುರುತಿಸಿಕೊಂಡಿರುವ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು, ತನ್ನ ಸದಸ್ಯರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಶ್ರಮಿಸುತ್ತಿದೆ. ಕಾಲಕಾಲಕ್ಕೆ ಸಂಘದ ಸದಸ್ಯರಿಗೆ ದೊರೆಯಬೇಕಾದ ಸವಲತ್ತುಗಳನ್ನು ನೀಡಿ, ಸದಸ್ಯರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂಬುದು ಹೆಮ್ಮೆ ಎಂದಿರುವ ಅವರು, ಸಹಕಾರಿ ಕ್ಷೇತ್ರದ ಸೇವೆಯಲ್ಲಿ ಹೆಗಡೆಕಟ್ಟಾ ಸೊಸೈಟಿ ನಿರಂತರ 99ನೇ ವರ್ಷದಲ್ಲಿದ್ದು ಶತಮಾನದತ್ತ ದಾಪುಗಾಲು ಹಾಕುತ್ತಿದೆ.
ರೈತರು ಕೃಷಿಯತ್ತ ಒಲವುಗಳಿಸಲು ಸಲಹೆ ಹಾಗೂ ಸದಸ್ಯರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತ ಬಂದಿದೆ. ಸಂಘದ ಸರ್ವ ಸಾಧಾರಣ ಸಭೆ ಸೆ.19 ರಂದು ಮಧ್ಯಾಹ್ನ 3:30ಕ್ಕೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ ಎಂದೂ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.