ಕಳೆದುಕೊಂಡ ಕ್ಷೇತ್ರ ಮತ್ತೆ ಪಡೆದ ಕಮಲ


Team Udayavani, May 16, 2018, 12:09 PM IST

31.jpg

ಭಟ್ಕಳ: ಕಳೆದ ಹತ್ತು ವರ್ಷಗಳಿಂದ ಭಟ್ಕಳ ವಿಧಾನ ಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿಜೆಪಿ ಮತ್ತೆ ಗೆಲುವು ಸಾಧಿಸುವ ಮೂಲಕ ತನ್ನದಾಗಿಸಿಕೊಂಡಿದೆ. ಕಳೆದ ಸುಮಾರು ಎರಡು ವರ್ಷಗಳಿಂದ ಯುವ ನಾಯಕ ಸುನಿಲ್‌ ನಾಯ್ಕ ಅವರು ಕ್ಷೇತ್ರದಲ್ಲಿ ಸುತ್ತಾಡಿ ತನ್ನದೇ ಆದ ಮತದಾರರನ್ನು ಸೃಷ್ಟಿಸಿಕೊಂಡಿದ್ದು ಕೊನೆಯ ಹಂತದಲ್ಲಿ ಅವರಿಗೆ ಟಿಕೆಟ್‌ ತಪ್ಪುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಹಠ ಹಿಡಿದ ಅವರು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಸಹಾಯದಿಂದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದು ಅಂತಿಮವಾಗಿ 5740 ಮತಗಳ ಅಂತರದಿಂದ ಹಾಲಿ ಶಾಸಕ ಮಂಕಾಳ ವೈದ್ಯ ಅವರನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ.

ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಬಿ.ಜೆ.ಪಿ.ಯ ಸುನಿಲ್‌ ನಾಯ್ಕ ಈ ಬಾರಿ ಕ್ಷೇತ್ರವನ್ನು ಬಿಜೆಪಿಗೆ ಮತ್ತೆ ಒಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಭಟ್ಕಳದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಅವರ ಅಭಿಮಾನಿಗಳು ಹೆಚ್ಚಿದ್ದು ಸುನಿಲ್‌ ನಾಯ್ಕಗೆ ಹೆಚ್ಚಿನ ಮತ ಬರಲು ಕಾರಣವಾಯಿತಲ್ಲದೇ ಕರಾವಳಿಯಲ್ಲಿಯೇ ಮೋದಿ ಅಲೆಯಲ್ಲಿ ಕಮಲ ಅರಳಿದ್ದು ಭಟ್ಕಳದಲ್ಲಿ ಕೂಡಾ ಕಮಲಕ್ಕೆ ಮೋದಿಯೇ ನೀರೆರೆದಿದ್ದು ಎನ್ನಲು ಅಡ್ಡಿಯಿಲ್ಲ.

ಬೆಳಗ್ಗೆ ಕುಮಟಾದ ಡಾ| ಎ.ವಿ. ಬಾಳಿಗಾ ಕಾಲೇಜಿನಲ್ಲಿಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಪ್ರಥಮ ಸುತ್ತಿನಲ್ಲಿಯೇ ಮುನ್ನಡೆಯನ್ನು ಸಾಧಿಸಿದ ಬಿ.ಜೆ.ಪಿ.ಯ ಸುನಿಲ್‌ ನಾಯ್ಕ ಕೊನೆಯ ತನಕವೂ ಅದೇ ಮುನ್ನಡೆಯನ್ನು ಕಾಯ್ದುಕೊಂಡು ಹೋಗಿದ್ದು 82,738 ಮತಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಾಲಿ ಶಾಸಕ ಮಂಕಾಳ ವೈದ್ಯರು 77,242 ಮತಗಳಿಸಿ ಅಂತಿಮವಾಗಿ 5,930 ಮತಗಳ ಅಂತರದಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಭಟ್ಕಳ ಕ್ಷೇತ್ರದಲ್ಲಿ ಬಿ.ಜೆ.ಪಿ. ಗೆಲುವಿಗೆ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಸುನಿಲ ನಾಯ್ಕ ಯುವಕರನ್ನು ಒಗ್ಗೂಡಿಸಿದರು. ಚುನಾವಣೆ ಘೋಷಣೆಯಾಗುತ್ತಲೇ ಕ್ಷೇತ್ರ ಸಂಚಾರ ಮಾಡಿ ಮತದಾರರನ್ನು ವೈಯಕ್ತಿಕವಾಗಿ ಭೇಟಿಯಾದರಲ್ಲದೇ ಕ್ಷೇತ್ರದಲ್ಲಿ ಮೋದಿ ಮತ್ತು ಕೇಂದ್ರ ಸರಕಾರದ ಯೋಜನೆಗಳು ಹಾಗೂ ಕೇಂದ್ರ ಸಚಿವ ಅನಂತ ಕುಮಾರ್‌ ಸಾಕಷ್ಟು ಬಾರಿ ಬಂದು ಹೋಗಿವುದು ಗೆಲುವಿನ ಗುಟ್ಟಾಗಿದೆ.

ಅಂತಿಮವಾಗಿ ಬಿ.ಜೆ.ಪಿ. ಅಭ್ಯರ್ಥಿ ಸುನಿಲ್‌ ನಾಯ್ಕ 83,172, ಕಾಂಗ್ರೆಸ್‌ನ ಮಂಕಾಳ ವೈದ್ಯ 77242, ಎಂ.ಇ.ಪಿ. ಪಕ್ಷದ ಗಫೂರ್‌ ಸಾಬ್‌ 1146, ರಾಜೇಶ ನಾಯ್ಕ 944, ಅಬ್ದುಲ್‌ ರೆಹಮಾನ್‌ 569, ಪ್ರಕಾಶ ಪಿಂಟೋ 527 ನೊಟಾ 1986ಕ್ಕೆ ಹೋಗಿದೆ. ವಿಶೇಷವೆಂದರೆ ಈ ಬಾರಿ ಭಟ್ಕಳ ಮತದಾರ ಕ್ಷೇತ್ರದಲ್ಲಿ ನೋಟಾ ಮೂರನೇ ಸ್ಥಾನ ಗಳಿಸಿದೆ.

ಭಟ್ಕಳ ಮತಕ್ಷೇತ್ರವಾದ ನಂತರ ಗೆದ್ದ ಆತ್ಯಂತ ಕಿರಿಯ ಶಾಸಕ (39) ಹಾಗೂ ಭಟ್ಕಳ ಮತಕ್ಷೇತ್ರದಲ್ಲಿ ಇಲ್ಲಿಯ ತನಕ ಅತ್ಯಂತ ಹೆಚ್ಚು ಮತಗಳನ್ನು ಪಡೆದು (83172) ಆಯ್ಕೆಯಾದ ಹೆಗ್ಗಳಿಕೆಗೆ ಸುನಿಲ್‌ ನಾಯ್ಕ ಭಾಜನರಾಗಿದ್ದಾರೆ. 

ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಆರಿಸಿ ಬಂದಿರುವ ನೂತನ ಶಾಸಕ ಸುನಿಲ್‌ ನಾಯ್ಕ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಸಾವಿರಾರು ಜನರು ಇಲ್ಲಿನ ಶಂಶುದ್ದೀನ್‌ ಸರ್ಕಲ್‌ನಲ್ಲಿ ಸ್ವಾಗತಿಸಿದರು.

ಸುನಿಲ್‌ ನಾಯ್ಕ ಹಾಗೂ ಅನಂತಕುಮಾರ್‌ ಹೆಗಡೆ ಅವರು ಶಂಶುದ್ಧೀನ್‌ ಸರ್ಕಲ್‌ನಲ್ಲಿ ಬಂದಿಳಿಯುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ಮುತ್ತಿಗೆ ಹಾಕಿ ಜೈಕಾರ ಕೂಗಿದರು. ನಿರಂತರ ಜೈಕಾರ ಕೂಗುತ್ತಲೇ ಸ್ವಾಗತಿಸಿ ತೆರೆದ ಜೀಪನ್ನು ಏರಿದ ಇವರು ಜೀಪಿನಲ್ಲಿ ಮೆರವಣಿಗೆ ಮೂಲಕ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ತನಕ ಮೆರವಣಿಗೆ ಸಾಗಿದರು.

ಜನತೆ ಈ ಬಾರಿ ನನಗೆ ಅಶೀರ್ವಾದ ಮಾಡಿದ್ದಾರೆ. ಆತ್ಯಂತ ಹೆಚ್ಚು ಮತಗಳನ್ನು ನೀಡಿ ಅಯ್ಕೆ ಮಾಡಿದ ಮತದಾರರನ್ನು ಆಭಿನಂದಿಸುತ್ತೇನೆ. ಭಟ್ಕಳದ ಆಭಿವೃದ್ಧಿಗೆ ಜನತೆ ಇಟ್ಟ ವಿಶ್ವಾಸಕ್ಕೆ ಸರಿಯಾಗಿ ಕೆಲಸ ಮಾಡುತ್ತೇನೆ.
 ಸುನಿಲ್‌ ನಾಯ್ಕ, ನೂತನ ಶಾಸಕ

ಜನತೆಯ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ಕ್ಷೇತ್ರದ ಜನತೆ ನನ್ನ ಅಭಿವೃದ್ಧಿಯನ್ನು ನೋಡಿ ಮತದಾನ ಮಾಡಿದ್ದರೂ ಕೂಡಾ ನನಗೆ ಸೋಲಾಗಿರುವುದಕ್ಕೆ ಬೇಸರವಿಲ್ಲ. ನಾನು ಈ ಹಿಂದಿನಂತೆಯೇ ನನ್ನ ಜನಪರ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಜನರೊಂದಿಗೆ ಸದಾ ನಾನು ಇರುತ್ತೇನೆ ಎನ್ನುವ ಭರವಸೆಯನ್ನು ಜನತೆಗೆ ನೀಡುತ್ತೇನೆ.
 ಮಂಕಾಳ ವೈದ್ಯ , ಪರಾಜಿತ ಅಭ್ಯರ್ಥಿ

 ಮತ ಮಾಹಿತಿ
ಬೆಳಗ್ಗೆ ಕುಮಟಾದ ಡಾ| ಎ.ವಿ.ಬಾಳಿಗಾ ಕಾಲೇಜಿನಲ್ಲಿಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಪ್ರಥಮ ಸುತ್ತಿನಲ್ಲಿಯೇ ಮುನ್ನಡೆಯನ್ನು ಸಾಧಿಸಿದ ಬಿ.ಜೆ.ಪಿ.ಯ ಸುನಿಲ್‌ ನಾಯ್ಕ ಕೊನೆಯ ತನಕವೂ ಅದೇ ಮುನ್ನಡೆಯನ್ನು ಕಾಯ್ದುಕೊಂಡು ಹೋಗಿದ್ದು 82,738 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಸುತ್ತಿನಲ್ಲಿಯೂ ತಮ್ಮ ಗೆಲುವಿನ ಅಂತರವನ್ನು ಅವರು ಕಾಯ್ದುಕೊಂಡಿದ್ದು, ಕಾರ್ಯಕರ್ತರಲ್ಲಿ ಹಾಗೂ ಬಿಜೆಪಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಗೆಲುವಿಗೆ ಕಾರಣವೇನು?

ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಬಿಜೆಪಿಯ ಸುನಿಲ್‌ ನಾಯ್ಕ ಈ ಬಾರಿ ಕ್ಷೇತ್ರವನ್ನು ಬಿಜೆಪಿಗೆ ಮತ್ತೆ ಒಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಭಟ್ಕಳದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಅವರ ಅಭಿಮಾನಿಗಳು ಹೆಚ್ಚಿದ್ದು ಸುನಿಲ್‌ ನಾಯ್ಕಗೆ ಹೆಚ್ಚಿನ ಮತ ಬರಲು ಕಾರಣವಾಯಿತಲ್ಲದೇ ಕರಾವಳಿಯಲ್ಲಿಯೇ ಮೋದಿ ಅಲೆಯಲ್ಲಿ ಕಮಲ ಅರಳಿದ್ದು ಭಟ್ಕಳದಲ್ಲಿ ಕೂಡಾ ಕಮಲಕ್ಕೆ ಮೋದಿಯೇ ನೀರೆರೆದಿದ್ದು ಎನ್ನಲು ಅಡ್ಡಿಯಿಲ್ಲ.

ಸೋಲಿಗೆ ಕಾರಣವೇನು?
ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದರೂ, ಶಾಸಕರಾಗಿ ಐದು ವರ್ಷಗಳ ಕಾಲ ಯಾವುದೇ ವಿರೋಧವಿಲ್ಲದೇ ಮನೆಗೆ ಬಂದವರಿಗೆ ಸಹಾಯ ಮಾಡುತ್ತಾ ಎಲ್ಲರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದ ಶಾಸಕ ಮಂಕಾಳ ವೈದ್ಯ ಅವರು ನಂಬಿದವರೇ ಕೈಕೊಟ್ಟಿರುವುದು, ಮೋದಿ ಅಲೆಯಲ್ಲಿ ಅಭಿವೃದ್ಧಿ, ಸಹಾಯ ಯಾವುದೂ ಕೆಲಸಕ್ಕೆ ಬಾರದಿರುವುದು ಮತ್ತು ರಾಜ್ಯದಲ್ಲಿ ಸಿದ್ಧರಾಮಯ್ಯ ಹಿಂದೂ ವಿರೋಧಿ ಅಳ್ವಿಕೆ ವಿರೋಧಿ ಅಲೆ ಇರುವುದು ಇವರ ಸೋಲಿಗೆ
ಕಾರಣ ಎನ್ನಬಹುದು.

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.