ಕೈಗಾ 5-6ನೇ ಘಟಕ ಸ್ಥಾಪನೆಗೆ ಬೆಂಬಲ
Team Udayavani, Nov 24, 2019, 2:40 PM IST
ಕಾರವಾರ: ಕೈಗಾ ಘಟಕ 5-6 ಸ್ಥಾಪನೆಗೆ ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಕಾರ್ಮಿಕರ ಬೆಟರ್ ಮೆಂಟ್ ಮತ್ತು ವೆಲ್‌ಫೇರ್ ಸಂಘ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ದೇಶಪಾಂಡೆ ಹಾಗೂ ಎಸ್.ಎಲ್. ಘೋಕ್ಲೃಕರ್‌ಗೆ ಸಹ ಮನವಿ ಸಲ್ಲಿಸಿದೆ. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೈಗಾ ಅಣುಸ್ಥಾವರ ವಿದ್ಯುತ್ ಬೇಡಿಕೆ ನೀಗಿಸಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಎಂದು ಹೇಳಿದರು. ಸಂಘದ ಅಧ್ಯಕ್ಷ ಶ್ಯಾಮ್ ವಾಲ್ಮೀಕಿ ಮಾತನಾಡಿ ಕೈಗಾ ಅಣುಸ್ಥಾವರದಲ್ಲಿ ಈಗಾಗಲೇ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಎರಡು ದಶಕಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೈಗಾದ ಲಾಭ ನಷ್ಟಗಳನ್ನು ಈಗಾಗಲೇ ಅನುಭವಿಸಿಯಾಗಿದೆ. ಅನೇಕ ಜನ ನೇರ ಮತ್ತು ಪರೋಕ್ಷ ಸೌಲಭ್ಯ ಪಡೆದಾಗಿದೆ. ಈಗ ಕೈಗಾ ಇಟ್ಟುಕೊಂಡೇ ಪರಿಸರ ರಕ್ಷಣೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕಿದೆ. ಈಗಾಗಲೇ ಎನ್‌ಪಿಸಿಎಲ್ ನಿಗದಿತ ಯೋಜನೆಯ ಆರು ಘಟಕಗಳಿಗೆ ಬೇಕಾಗುವ ಭೂಮಿ ಮೊದಲೇ ಪಡೆದಿರುವ ಕಾರಣ ಯೋಜನೆ ನಿಲ್ಲಿಸುವುದು ಕಷ್ಟಸಾಧ್ಯ. ಪರಿಸರ ಉಳಿಸಿಕೊಂಡೇ ಯೋಜನೆಯನ್ನು ಮುಂದುವರಿಸಬೇಕು.
ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಬೇಕೆಂಬುದು ನಮ್ಮ ನಿಲುವು ಆಗಿದೆ ಎಂದು ಹೇಳಿದರು. ಕಾರ್ಮಿಕರಿಗೆ, ಸಿಮೆಂಟ್, ಕಬ್ಬಿಣ, ಬಣ್ಣ ಮತ್ತು ಎಲೆಕ್ಟ್ರಿಕ್ ಗುತ್ತಿಗೆದಾರರಿಗೆ ಭಾರೀ ಅನುಕೂಲಕರವಾಗಲಿದೆ. ವಾಹನ ಬಾಡಿಗೆ, ಕಾರ್ಮಿಕರು, ಅಡುಗೆ ಸಿದ್ಧಪಡಿಸುವವರು, ಬಟ್ಟೆ ಇಸ್ತ್ರಿ ಅಂಗಡಿಯಿಂದ ಹಿಡಿದು ಪರೋಕ್ಷ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ನಿರ್ಮಾಣದ ನಂತರ ನಾನಾ ಬಗೆಯ ಉದ್ಯೋಗಗಳ ಸೃಷ್ಟಿ ಸಹಆಗಲಿದೆ. ಪರಿಸರ ಉಳಿಸಿಕೊಂಡು, ಅಣುಸ್ಥಾವರ ಸ್ವಾಗತಿಸುವುದು ಒಳಿತು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ವಾಲ್ಮೀಕಿ, ಮಂಜುನಾಥ ರೇವಣಕರ್, ಮೆಹಬೂಬ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.