ಸ್ವರ್ಣವಲ್ಲೀ ಕೃಷಿ ಪ್ರಶಸ್ತಿ, ಕರಕುಶಲ, ಕೂಡು ಕುಟುಂಬ ಪ್ರಶಸ್ತಿ ಪ್ರಕಟ
Team Udayavani, Apr 30, 2023, 4:45 PM IST
ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನವು ಪ್ರತೀ ವರ್ಷ ನೀಡುವ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು , ಮೇ ೪ರಂದು ಸ್ವರ್ಣವಲ್ಲೀಯಲ್ಲಿ ನಡೆಯಲಿರುವ ಕೃಷಿ ಜಯಂತಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಾಧಕ ಕೃಷಿಕ ಕೃಷಿ ಕಂಠೀರವ ಪ್ರಶಸ್ತಿಗೆ ವಾನಳ್ಳಿ ಕಣ್ಣಿಮನೆಯ ಗಣಪತಿ ಕೃಷ್ಣ ಭಟ್ಟ , ಸಾಧಕ ಕೃಷಿ ಮಹಿಳೆ ಪ್ರಶಸ್ತಿಗೆ ಜೋಯಿಡಾ ಶಿರೋಳದ ಪಾರ್ವತಿ ಮಹಾದೇವ ಗಾವಡಾ, ಉತ್ತಮ ಕೃಷಿ ಕುಟುಂಬ ಪ್ರಶಸ್ತಿಗೆ ಸಿದ್ದಾಪುರದ ಹೇರೂರು ಹೂಡ್ಲಮನೆಯ ಮಂಜುನಾಥ ದೇವರು ಹೆಗಡೆ ಆಯ್ಕೆ ಆಗಿದ್ದಾರೆ.
ಉತ್ತಮ ಕುಶಲಕರ್ಮಿ ಪ್ರಶಸ್ತಿಗೆ ಅಂಕೋಲಾದ ಹಿಲ್ಲೂರಿನ ಗೋವಿಂದ ಗಣಪಯ್ಶ ಹೆಗಡೆ ಕರೀಕಲ್ ಆಯ್ಕೆ ಆಗಿದ್ದಾರೆ.ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಗೆ ಪ್ರಥಮ ಸ್ಥಾನಕ್ಕೆ ವಾಜಗದ್ದೆ ಶೀಗೆಹಳ್ಳಿಯ ದತ್ತಾತ್ರೆಯ ಗಣಪತಿ ಹೆಗಡೆ ಸಹೋದರರು, ದ್ವಿತೀಯ ಸ್ಥಾನವನ್ನು ಇಬ್ಬರು ಹಂಚಿಕೊಂಡಿದ್ದು, ಸಿದ್ದಾಪುರದ ನಂದ್ಯಾನೆಯ ಮಹಾಬಲೇಶ್ವರ ವೆಂಕಟರಮಣ ಹೆಗಡೆ, ಯಲ್ಲಾಪುರದ ಕೆಂಚನಳ್ಳಿ ಕೆರೆಹೊಸಳ್ಳಿಯ ನಾರಾಯಣ ಗಣಪತಿ ಭಟ್ ಆಯ್ಕೆ ಆಗಿದ್ದಾರೆ.
ಕೃಷಿ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಶ್ರೀ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಪ್ರತಿಷ್ಠಾನದ ಪರವಾಗಿ ಪ್ರಗತಿಪರ ರೈತರಾದ ಸುಬ್ರಾಯ ಎಲ್.ಹೆಗಡೆ ತ್ಯಾಗಲಿ, ಸಚ್ಚಿದಾನಂದ ಹೆಗಡೆ ಕಲಗದ್ದೆ ಸ್ವತಃ ಭೇಟಿ ಮಾಡಿ ಆಯ್ಕೆ ಮಾಡಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಹಕ್ಕಿಮನೆ ಜಂಟಿಯಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.