Swarnavalli Mutt; ಥಂಡಿಮನೆಗೆ ಹೊಸ್ತೋಟ, ಅತ್ತಿಮುರಡಿಗೆ ದಂಟ್ಕಲ್ ಪ್ರಶಸ್ತಿ
Team Udayavani, Sep 17, 2023, 3:52 PM IST
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ನೀಡುವ ರಾಜ್ಯ ಮಟ್ಟದ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ಈ ಬಾರಿ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಹಾಗೂ ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿ ಹಿರಿಯ ವಿದ್ವಾಂಸ ಅತ್ತಿಮುರಡು ವಿಶ್ವೇಶ್ವರ ಹೆಗಡೆ ಅವರಿಗೆ ಪ್ರಕಟಿಸಲಾಗಿದೆ.
ಸೆ.23 ಹಾಗೂ24 ರಂದು ಸ್ವರ್ಣವಲ್ಲೀಯಲ್ಲಿ ನಡೆಯುವ ಯಕ್ಷೋತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವಿಶ್ವೇಶ್ವರ ಹೆಗಡೆ ಅತ್ತೀಮುರುಡು
ಸಿದ್ದಾಪುರ ತಾಲೂಕಿನ ಹೇರೂರಿನ ಹತ್ತಿರದವರು. ಏಕಲವ್ಯನಾಗಿ, ಕೃಷಿ ಚಟುವಟಿಕೆಗಳ ಜವಾಬ್ದಾರಿಗಳ ಮಧ್ಯದಲ್ಲೇ ಸ್ವಾಧ್ಯಯನದ ಅನೇಕ ಸಾಧನೆ ಮಾಡಿದವರು. ಬೆಳ್ಳಿ ಜಾರಿದ ಮೇಲೆ, ಯುದ್ಧ ಮಂಡಲ ಮಧ್ಯದೊಳಗೆ, ಗೀತ ಭಾರತ, ಹೂವು ಕಟ್ಟಿದ ಹುತ್ತ, ಬಿಳಗಿಯ ಅರಸು ಮನೆತನ, ಶತಮಾನದ ಗತಿ ಬಿಂಬ, ಚಿಗುರು-ಚಪ್ಪರ- ಕಂಟಿ, ಹೇರೂರು ಸೀಮೆ ( ಐತಿಹಾಸಿಕ ಸಮೀಕ್ಷಾಧ್ಯಯನ) , ಇಟಗಿ ಇತಿ ವೃತ್ತ, ನಿಸರ್ಗ ಸಂದೇಶ ( ಯಕ್ಷಗಾನ), ಒಂಟಿ ಬಂಡೆ (ನಾಟಕ) ಕೃತಿಗಳು, ನಾಟ್ಯ ಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ ( ಹಿಂದಿಯಿಂದ ಕನ್ನಡಾನುವಾದ), ಲಘು ವಾಸುದೇವ ಮನನಮ್ ( ಸಂಸ್ಕೃತದಿಂದ ಕನ್ನಡ), ನಾಟ್ಯ ಶಾಸ್ತ್ರ ವಿಚಾರ ( ಇಂಗ್ಲೀಷನಿಂದ ಕನ್ನಡ) ಮುದ್ರಣಗೊಂಡಿದೆ. ನಾಟ್ಯ ಶಾಸ್ತ್ರ ವಿಶ್ವಕೋಶ ಭಾಗ 1 ಮತ್ತು 2 ( ಹಿಂದಿಯಿಂದ ಕನ್ನಡ), ರಾಜಾ ಭಾಸ್ಕರವರ್ಮ, ದ್ವಾರಕಾವತರಣ, ಶೂನ್ಯ ಸಂಪಾದನೆ( ಅಲ್ಲಮಪ್ರಭುವಿನ ಕಥೆ) ಮುದ್ರಣವಾಗಬೇಕಿದೆ. ೨೦೧೭ರಲ್ಲಿ ಸಿದ್ದಾಪುರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾದವರು. ಶಾಸ್ತ್ರ ತಿಲಕ, ಉಪಾಯನ, ಚಂದುಬಾಬು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಥಂಡಿಮನೆ
ಶ್ರೀಪಾದ ಭಟ್ಟ ಅವರು ಶಿರಸಿಯ ಸಾಲಕಣಿ ಕೋಳಿಗಾರ ಥಂಡಿಮನೆಯವರು. ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರು. 60 ರ ಸಂಭ್ರಮದಲ್ಲಿ ಇರುವ ಇವರು ನಿರಂತರವಾಗಿ 40 ವರ್ಷದಿಂದ ವೃತ್ತಿ ಮೇಳದ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
ಪಂಚಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ ಪ್ರಪ್ರಥಮವಾಗಿ ಒಡ್ಡೋಲಗದ ವೇಷಧಾರಿಯಾಗಿ ಪ್ರವೇಶಿಸಿದ ಶ್ರೀಪಾದ ಥಂಡಿಮನೆ ಅವರು ಈಗ ಪೆರ್ಡೂರು ಮೇಳದ ಪ್ರಧಾನ ವೇಷಧಾರಿಯಾಗಿ ವಿಜ್ರಂಭಿಸುತ್ತಿರುವುದು ಅವರ ಸಾಧನೆಯ ಮಜಲುಗಳನ್ನು ತೋರಿಸುತ್ತದೆ.
ರಂಗದಲ್ಲಿ ತಮ್ಮ ಗತ್ತು ಗಾಂಭೀರ್ಯಗಳಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಭಿಮಾನದ ವಾತಾವರಣ ಸೃಷ್ಟಿಸುವ ಭಟ್ಟರು ಖಳ ನಾಯಕ, ಕಥಾ ನಾಯಕನ ಪಾತ್ರಕ್ಕೆ ಹೆಸರಾಗಿದ್ದಾರೆ.
ಅವರ ಪ್ರಾಮಾಣಿಕ ಸಾಧನೆಯನ್ನು ಗುರುತಿಸಿ ಅನೇಕ ಬಿರುದುಗಳು, ಸಮ್ಮಾನಗಳು ಅವರನ್ನು ಅರಸಿಕೊಂಡು ಬಂದಿದೆ. ಮುಂಬಯಿ, ಹೈದರಾಬಾದ್ ಕನ್ನಡ ಸಂಘ ಇವರನ್ನು ಗೌರವಿಸಿ ಸಮ್ಮಾನಿಸಿದೆ. ಬೆಂಗಳೂರಿನ ಯಕ್ಷಗಾನ ಯೋಗಕ್ಷೇಮ ಅಭಿಯಾನದ ಥಂಡಿಮನೆ ಯಕ್ಷ ಗೌರವ ನೀಡಿ ಗೌರವಿಸಿತ್ತು. ಸ್ವರ ಸಿಂಹ, ಗತ್ತಿನ ಗಂಡುಗಲಿ, ಯಕ್ಷ ಕೇಸರಿ, ಸ್ವರ ಸಾಮ್ರಾಟ, ಯಕ್ಷ ಭೂಷಣ ಇನ್ನೂ ಅನೇಕ ಬಿರುದುಗಳು ಇವರಿಗೆ ದಕ್ಕಿದೆ ಎಂಬುದು ಉಲ್ಲೇಖನೀಯ ಎಂದು ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.