ಮಹಿಳೆಯರಿಗೆ ಸುರಕ್ಷತೆಯ ಭರವಸೆ ನೀಡುವ ಸ್ವಧಾರ ಆಶ್ರಯ ತಾಣ ಆರಂಭ
Team Udayavani, Dec 18, 2021, 12:13 PM IST
ಶಿರಸಿ: ಇಲ್ಲಿನ ಸ್ಕೋಡ್ ವೇಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಪರಿತ್ಯಕ್ತ ಮಹಿಳೆಯರ ಆಶ್ರಯ ತಾಣ ಸ್ವಧಾರ ಗೃಹ ಆರಂಭಿಸಲಾಗಿದೆ ಎಂದು ಸ್ಕೋಡ್ ವೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದರು.
ಅವರು ಶನಿವಾರ ನಗರದ ಸ್ವಧಾರ ಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ನಿರ್ಗತಿಕರು ಇದ್ದಿದ್ದು ಕಂಡರೆ ಕರಕೊಂಡು ಬರುತ್ತೇವೆ. ಇಲ್ಲಿ ಬಂದವರಿಗೆ ಸುರಕ್ಷತೆಯ ಭರವಸೆ ಇದೆ ಎಂಬ ವಾತಾರಣ ನಿರ್ಮಿಸಿದ್ದೇವೆ ಎಂದರು.
58ಜನ ಈಗಾಗಲೇ ಆಶ್ರಯ ಪಡೆದಿದ್ದೇವೆ. 6 ವರ್ಷದ ವರೆಗಿನ ಮಗು ಇದ್ದರೆ ಅವರಿಗೂ ಆಶ್ರಯ. ದುಡಿಯುವ ಆಸಕ್ತಿ ಇರುವ ಮಹಿಳೆಗೆ ತರಬೇತಿ ಸಹ ನೀಡುತ್ತೇವೆ. ಹೆಚ್ಚಿನದಾಗಿ ದೌರ್ಜನ್ಯಕ್ಕೆ ಒಳಗಾದವರು ಬರುತ್ತಿದ್ದಾರೆ. ನಿರ್ಗತಿಕರ ಮೇಲೆ ಮತ್ತೆ ದೌರ್ಜನ್ಯ ಆಗಬಾರದು ಎಂಬ ಕಾರಣಕ್ಕೆ ಸ್ವಧಾರ ಗೃಹ ಮಾಡಿದ್ದೇವೆ ಎಂದರು.
18 ವರ್ಷಕ್ಕಿಂತ ಮೇಲ್ಪಟ್ಟು ಸಮಸ್ಯೆಯಲ್ಲಿರುವವರು 30 ರಿಂದ 50 ಜನ ಉಳಿಯಬಹುದು. ಆರ್ಥಿಕ, ಸಾಮಾಜಿಕ ಭದ್ರತೆ ನೀಡಲಾಗುತ್ತದೆ. ಯಾವುದೇ ಬೆಂಬಲ ಇಲ್ಲದವರು ಇಲ್ಲಿ ನೆರವುಪಡೆಯಬಹುದು. ಒಬ್ಬರಿಗೆ ಸರಕಾರ 43 ರೂ. ಕೊಡುತ್ತದೆ ಊಟೋಪಹಾರ ಮಾಡಬೇಕು. ಸರಕಾರದ ಮೇಲೆ ಪೂರ್ಣ ಅಲ್ಲ. ಸಾರ್ವಜನಿಕರ ನೆರವೂ ಇದೆ ಎಂದರು.
ನಿತ್ಯ, ಯೋಗ, ಪ್ರಾರ್ಥನೆ ಎಲ್ಲ ಸೌಲಭ್ಯ ಇದೆ. ಸ್ವತಂತ್ರವಾಗಿ ನಿಲ್ಲುವ ತನಕ ಅವಕಾಶ ನೀಡಲಾಗುತ್ತದೆ ಎಂದ ಅವರು, ಈಗ ಇರುವ ಕಟ್ಟಡ ಸ್ವಂತದ್ದಲ್ಲ. ಆದರೆ, ಸ್ವಂತ ಕಟ್ಟಡ ಆಗಬೇಕು. ನಗರಸಭರ ಅಥವಾ ಸ್ಥಳೀಯ ಆಡಳಿತ 2 ಗುಂಟೆ ಜಾಗ ನೀಡಿದರೆ ದಾನಿಗಳ ಸಹಕಾರದೊಂದಿಗೆ ಸ್ವಂತ ಕಟ್ಟಡ ನಿರ್ಮಿಸುತ್ತೇವೆ
ಅಗತ್ಯ ಉಳ್ಳವರು 9743522521 ಸಂಪರ್ಕ ಮಾಡಬಹುದು ಎಂದೂ ಹೇಳಿದರು.
ಈ ವೇಳೆ ಸಿಡಿಪಿಒ ದತ್ತಾತ್ರಯ ಹೆಗಡೆ, ಸ್ಫೋಡ್ ವೇಸ್ ಸೌಹಾರ್ದದ ಸರಸ್ವತಿ ಎನ್.ರವಿ, ದಾನೇಶ್ವರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.