ಬಂತು ಮೊದಲ ಕಂತು; ಇನ್ನೂ ಬರಬೇಕಿದೆ ಬಹುಪಾಲು!
Team Udayavani, Jun 12, 2019, 11:49 AM IST
ಶಿರಸಿ: ಸಾಲ ಮನ್ನಾ ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರದ ಬಜೆಟ್‌ನ ಮೊದಲ ಕಂತಿನ ಹಣ ಬಂದಿದೆ.
ಲೋಕಸಭಾ ಚುನಾವಣೆ ಬಳಿಕ ಬಿಡುಗಡೆಗೊಂಡಿದೆ ಎನ್ನಲಾದ ಸಾಲ ಮನ್ನಾ ಬಾಪ್ತಿನಲ್ಲಿ ಈಗಾಗಲೇ 40 ಸಾವಿರದಷ್ಟು ರೈತರ ಖಾತೆಗೆ ನೇರ ಜಮಾಗೊಂಡಿದೆ. ಒಂದು ಲಕ್ಷ ರೂ. ಒಳಗೆ ಬೆಳೆಸಾಲ ಪಡೆದಿದ್ದ ಚಿಕ್ಕ ಹಾಗೂ ಅತಿ ಚಿಕ್ಕ ರೈತರ ಉಳಿತಾಯ ಖಾತೆಗೆ ಪ್ರಥಮ ಕಂತಿನ ಹಣ ಪಾವತಿಸಲಾಗಿದೆ. ಆದರೆ, ಒಂದು ಲಕ್ಷಕ್ಕಿಂತ ಅಧಿಕ ಮೊತ್ತ ಇರುವ ಅಥವಾ ಸಾಲಮನ್ನಾ ಮಾನದಂಡದ ವ್ಯಾಪ್ತಿಗೆ ಬಾರದೇ ಇರುವ ರೈತರ ಖಾತೆಗೆ ಜಮಾ ಆಗಿಲ್ಲ. ಮಾರ್ಚ್, ಏಪ್ರಿಲ್ ವೇಳೆ ಸಾಲ ಮನ್ನಾ ಪಾವತಿ ಮಾಡಿದ್ದ, ಮಾಡದ ರೈತರ ಖಾತೆಗೆ ಹಣ ಬಂದಿದೆ.
ರೈತರನ್ನು ಸಾಲದಿಂದ ಋಣಮುಕ್ತಗೊಳಿಸುವ ಯೋಜನೆಯಡಿ ಕಳೆದ ವಿಧಾನಸಭಾ ಚುನಾವಣಾ ಪೂರ್ವದ ಘೋಷಣೆಯನ್ನು ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಆಡಿದಂತೆ ಈಗ ಅದರ ಪ್ರಕ್ರಿಯೆ ಶುರು ಮಾಡಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಸರ್ಕಾರದಿಂದಲೇ ಪಾವತಿ ಆಗುತ್ತಿದೆ.
175 ಕೋಟಿ ರೂ!: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಮೂಲಕ ರೈತರಿಗೆ ಸಾಲ ವಿತರಿಸಲಾಗಿತ್ತು. ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಬೆಳೆಸಾಲವನ್ನು ಏಪ್ರಿಲ್ 15, ಏಪ್ರಿಲ್ 31ರೊಳಗೆ ವಿತರಿಸಲಾಗಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜಗಲಪೇಟೆ ಸೊಸೈಟಿಗಳಿಗೆ ಮಾತ್ರ ಮೇ 31ರ ಬೆಳ ಸಾಲ ಮರು ಪಾವತಿ ಅಖೈರು ದಿನವಾಗಿತ್ತು.
ಇದೀಗ ಪ್ರಥಮ ಹಂತವಾಗಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ ಬೆಳೆಗಾರರಿಗೆ ನೇರವಾಗಿ 175 ಕೋ.ರೂ. ಹಂಚಿಕೆಯಾಗಿದೆ. ಕೆಲವು ರೈತರು ಹಣ ಮರು ಪಾವತಿಸದೇ ಇದ್ದವರ ಖಾತೆಯಿಂದ ಸರ್ಕಾರ ಹಣ ವರ್ಗಾವಣೆ ಮಾಡಿಕೊಳ್ಳಲು ಸೂಚಿಸಿದೆ. ಈ ಮೂಲಕ ಸರ್ಕಾರ ರೈತರನ್ನು ಋಣಮುಕ್ತಗೊಳಿಸಲು ಮುಂದಾಗಿದೆ.
ಬರಬೇಕಿದೆ ಇನ್ನೂ: ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಬೆಳೆಸಾಲ ಪಡೆದ ರೈತರ ಸಂಖ್ಯೆ 86,815. ಕೆಡಿಸಿಸಿ ಬ್ಯಾಂಕ್ ಮೂಲಕ ಇಷ್ಟು ರೈತರಿಗೆ ಗರಿಷ್ಠ 3 ಲಕ್ಷ ರೂ. ತನಕ 700 ಕೋಟಿ ರೂ.ಗಳಷ್ಟು ಬೆಳೆ ಸಾಲ ವಿತರಿಸಲಾಗಿತ್ತು.
ಈಗ ಬಂದಿರುವ ಹಣದ ಮೊತ್ತ ಕೇವಲ 175 ಕೋ.ರೂ. ಲಕ್ಷದೊಳಗೆ ಸಾಲ ಪಡೆದ ಸುಮಾರು 40 ಸಾವಿರ ರೈತರಿಗೆ. ಇನ್ನುಳಿದ ಮೊತ್ತ ಹಾಗೂ 46 ಸಾವಿರ ರೈತರಿಗೆ ಹಣ ಬರಬೇಕಿದೆ.
ರೈತರು ಬೆಳೆ ಸಾಲ ಪಡೆದ ಮಾಸದಂತೆ ಸಾಲ ಮನ್ನಾ ಹಣ ಕೂಡ ಬರಬೇಕಿದೆ. ನಿರೀಕ್ಷೆ ಪ್ರಕಾರ ನಡೆದರೆ ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದಾಗಿದೆ ಎನ್ನುತ್ತದೆ ಉನ್ನತ ಮೂಲವೊಂದು.
ದೃಢೀಕರಣಗೊಳ್ಳಬೇಕು: ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಸಾಲ ಪಡೆದವರು ಮರು ಪಾವತಿಯನ್ನು ಉಳಿಕೆ ಹಣ ಮಾಡಿದ್ದರೆ ಅದು ದೃಢೀಕರಣದ ಬಳಿಕ ಉಳಿದ ಹಣ ಬರಲಿದೆ. ತಾಲೂಕು ಕಂದಾಯ ಅಧಿಕಾರಿಗಳಿಂದ ದೃಢೀಕರಣಗೊಳಿಸಿ ಬರಬೇಕಿದೆ. ಈ ಪೈಕಿ 9800 ಅರ್ಜಿಗಳ ದೃಢೀಕರಣದಲ್ಲಿ 1100 ಅರ್ಜಿಗಳು ಇನ್ನೂ ಪೂರ್ಣವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.