ಮೆಕ್ಕಂಜೆ ಸೇತುವೆ ಸಂಪೂರ್ಣ ಶಿಥಿಲ
| ಬ್ರಿಟಿಷರ ಕಾಲದ ಅತ್ಯಂತ ಹಳೆಯ ಸೇತುವೆ| ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು-ಅಧಿಕಾರಿ ವರ್ಗ
Team Udayavani, Sep 16, 2021, 8:43 PM IST
ಕುಮಟಾ: ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಮೆಕ್ಕಂಜೆ ಸೇತುವೆ ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ ಇದನ್ನು ದುರಸ್ತಿಗೊಳಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಂಡು ಕಾಣದಂತಿದ್ದು ಕೈಕಟ್ಟಿ ಕುಳಿತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಪುರಸಭಾ ವ್ಯಾಪ್ತಿಯ ಶಶಿಹಿತ್ತಲ-ವನ್ನಳ್ಳಿ-ಹೆಡ್ ಬಂದರಿಗೆ ಸಾಗುವ ಮಾರ್ಗದಲ್ಲಿ ಅಳಿವೆ ಪ್ರದೇಶವಾದ ಶಶಿಹಿತ್ತಲ ಬಳಿ 29-12-1879 ರಲ್ಲಿ ಇಂಗ್ಲೆಂಡಿನ ಮೆಕ್ಕಂಜೆ ಎಂಬ ಇಂಜಿನೀಯರ್ ಈ ಸೇತುವೆಯನ್ನು ನಿರ್ಮಿಸಿದ್ದ. ಹೀಗಾಗಿ ಇದಕ್ಕೆ ಮೆಕ್ಕಂಜೆ ಎನ್ನುವ ಹೆಸರು ಬಂತು ಎನ್ನಲಾಗುತ್ತಿದೆ. ಈ ಸೇತುವೆ 20 ಅಡಿ ಉದ್ದ ಹಾಗೂ 10 ಅಡಿ ಅಗಲವಿದೆ. ಸುಮಾರು 160 ವರ್ಷಗಳ ಹಿಂದೆ ಬ್ರಿàಟಿಷರು ಭಾರತವನ್ನು ಆಳುತ್ತಿದ್ದರು. ಈ ಸಂದರ್ಭದಲ್ಲಿ ಇಲ್ಲಿನ ಸಾಂಬಾರ ಪದಾರ್ಥಗಳು, ಹತ್ತಿ, ಅಕ್ಕಿ, ದಿನಸಿ ಸಾಮಾನುಗಳು ಭಾರತದಿಂದ ಇಂಗ್ಲೆಂಡ್, ಜರ್ಮನಿ, ಅಮೆರಿಕಾ ಇನ್ನಿತರ ದೇಶಗಳಿಗೆ ಜಲ ಮಾರ್ಗದ ಮೂಲಕ ರಫ್ತಾಗುತ್ತಿದ್ದವು. ಆದರೆ ಶಶಿಹಿತ್ತಲ ಬಳಿ ಬೃಹದಾಕಾರ ಹಳ್ಳ ಹರಿಯುತ್ತಿದ್ದರಿಂದ ಸಾಗಾಟ ಹಾಗೂ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಇದನ್ನು ಮನಗಂಡ ಬ್ರಿàಟಿಷ ಸರ್ಕಾರ ಮೆಕ್ಕಂಜೆ ಮುಂದಾಳತ್ವದಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಯಿತು.
ಮೆಕ್ಕಂಜೆ 29-12-1879 ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಆರಂಭಿಸಿದ. ಕುಮಟಾದ ವಾಲಗಳ್ಳಿಯಲ್ಲಿ ಲಭ್ಯವಿದ್ದ ಜೇಡಿ (ಜೀಗುಟು) ಮಣ್ಣಿಗೆ ಬೆಲ್ಲ ಹಾಗೂ ಸುಣ್ಣ ಮಿಶ್ರಣ ಮಾಡಿ ಗಡುಸು ಸಿಮೆಂಟ್ ತಯಾರಿಸಿ ಕಮಾನಿನಾಕಾರದಲ್ಲಿ ಸೇತುವೆ ನಿರ್ಮಿಸಲಾಗಿದೆ. ನಿರ್ಮಾಣ ಕಾರ್ಯದಲ್ಲಿ ಸ್ಥಳೀಯ ಹಾಲಕ್ಕಿ ಸಮುದಾಯದ ಹುಲಿಯ ಗೌಡ ಅವರ ನೇತೃತ್ವದ ತಂಡ ಸಹಕಾರ ನೀಡಿತ್ತು. ಜೊತೆಗೆ ಈ ಸೇತುವೆ ನಿರ್ಮಾಣಕ್ಕೆ 4400 ರೂ ವೆಚ್ಚವಾಗಿತ್ತು ಎನ್ನಲಾಗಿದೆ. ಇದೀಗ ಈ ಸೇತುವೆ ಕುಮಟಾ-ಶಶಿಹಿತ್ತಲ-ವನ್ನಳ್ಳಿ ಬಂದರ, ಮಂಗೋಡ್ಲ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದು ದಿನನಿತ್ಯ ಸಾವಿರಾರು ಜನರು, ವಾಹನಗಳು ಸಂಚರಿಸುತ್ತವೆ.
ವನ್ನಳ್ಳಿ ಸಮುದ್ರ ತೀರ ಪ್ರವಾಸಿ ತಾಣವಾಗಿರುವುದು ಹಾಗೂ ಮೀನುಗಾರಿಕೆಗೆ ಹೆಸರಾಗಿರುವುದರಿಂದ ಮೀನು ಇಲ್ಲಿಂದ ಹೊರ ರಾಜ್ಯಗಳಿಗೆ ರಫ್ತಾಗುತ್ತಿದೆ. ಹೀಗಾಗಿ ಈ ಸೇತುವೆ ದುರಸ್ತಿ ಅತ್ಯಗತ್ಯ. ವಿಪರ್ಯಾಸವೆಂದರೆ ಸೇತುವೆ ನಿರ್ಮಾಣಗೊಂಡು ಹಲವು ವರ್ಷಗಳು ಸಂ ದಿರುವುದರಿಂದ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಸೇತುವೆಯ ಪುನರ್ ನಿರ್ಮಾಣ ಅಥವಾ ದುರಸ್ತಿಗೆ ತಾಲೂಕಾಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಸೇತುವೆ ಕುಸಿದು ಅವಘಡ ಸಂಭವಿಸಬಹುದಾದ ಸಾಧ್ಯತೆ ಇದೆ. ಕಾರಣ ಪುರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಈ ಸೇತುವೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.