ಶಾಶ್ವತದೆಡೆ ತುಡಿಯುವವರು ಸನ್ಯಾಸಿಗಳು: ರಾಘವೇಶ್ವರ ಶ್ರೀ
Team Udayavani, Mar 23, 2018, 8:07 PM IST
ಸಿದ್ದಾಪುರ: ಸೀಮಿತದಿಂದ ಅಸೀಮತೆಯೆಡೆಗೆ ಸಾಗಲು ಸನ್ಯಾಸ ಮಾರ್ಗ ಕಲ್ಪಿಸುತ್ತದೆ. ಜೀವನವನ್ನು, ಸ್ವಂತವನ್ನು ಪಕ್ಕಕ್ಕಿಟ್ಟು ಸಂತನಾಗಬೇಕಾಗುತ್ತದೆ. ಸನ್ಯಾಸವು ತ್ಯಾಗದ ಅಡಿಪಾಯದ ಮೇಲೆ ಮೈದಳೆಯುತ್ತದೆ. ಅಶಾಶ್ವತವಾದುದನ್ನೆಲ್ಲಾ ಬಿಟ್ಟು ಶಾಶ್ವತದೆಡೆಗೆ ತುಡಿಯುವವರು ಸನ್ಯಾಸಿಗಳಾಗುತ್ತಾರೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು
ಹೇಳಿದರು.
ಪಟ್ಟಣದ ಗೌತಮದಲ್ಲಿ ತಮ್ಮ ಸನ್ಯಾಸಗ್ರಹಣದ 25ನೇ ವರ್ಷದ ಪಾದಾರ್ಪಣೆ ದಿನದಂದು ದುರ್ಬಲ ಕುಟುಂಬವೊಂದನ್ನು ದತ್ತು ಪಡೆದು ಆ ಕುಟುಂಬವನ್ನು ಜೀವದಾನದ ಮೂಲಕ ಪೋಷಿಸುವ ವಾತ್ಸಲ್ಯ ದಿನವನ್ನಾಗಿ ಸನ್ಯಾಸಗ್ರಹಣ ದಿನಾಚರಣೆ ನಡೆಸಿದ ಶ್ರೀಗಳು ಮಠದ ಜೀವನದಾನ ಟ್ರಸ್ಟ್ ಮೂಲಕ ಉಪ್ಪಿನಂಗಡಿ ವಲಯ ಕಾಸರಗೋಡ ಮುಳಿಯಾಲದ ಧರ್ಮಸ್ಥಳ ನಿವಾಸಿಯಾಗಿದ್ದು ಕಿಡ್ನಿ ವೈಫಲ್ಯದಿಂದ ಕಳೆದ ಆರು ವರ್ಷಗಳಿಂದ ಬಳಲುತ್ತಿರುವ ಗೋಪಾಲಕೃಷ್ಣ ಭಟ್ ರಿಗೆ ಜೀವನದಾನವನ್ನು ಅನುಗ್ರಹಿಸಿ
ಆಶೀರ್ವಚನ ನೀಡುತ್ತಿದ್ದರು.
ಸನ್ಯಾಸ ಹುಲಿಯ ಸವಾರಿಯಂತೆ ಅದನ್ನು ನಡೆಸಲು ಸಾಕಷ್ಟು ಶಕ್ತಿಬೇಕು, ಪತನವಾದರೆ ಹುಲಿಯೇ ತಿನ್ನಬಹುದು ಎಂದು ನಮಗೆ ಸನ್ಯಾಸದೀಕ್ಷೆ ನೀಡಿದ ಹಿರಿಯ ಶ್ರೀಗಳು ಹೇಳುತ್ತಿದ್ದರು. ಪೂರ್ವಾಶ್ರಮದಲ್ಲಿರುವಾಗ ಸನ್ಯಾಸ ಮುಳ್ಳಿನ ಕಿರೀಟವೆಂದೂ ಅನೇಕರು
ಎಚ್ಚರಿಸಿದ್ದರು. ಆದರೆ ನಾವು ಯಾವುದೇ ಅಡೆತಡೆಯನ್ನೂ ಮೀರಿ ಇಷ್ಟು ದೂರ ಬರಲು ಸಾಧ್ಯವಾಯಿತು. ನಮಗೆ ಸನ್ಯಾಸವೇನೂ ಮುಳ್ಳಿನ ಕಿರೀಟವೆನಿಸಲಿಲ್ಲ. ನಾವು ಅನೇಕ ವಿಧಾಯಕ ಕಾರ್ಯಕ್ರಮಗಳ ಮೂಲಕ ಅರ್ಧಮಂಡಲ (24 ವರ್ಷ) ಪೂರೈಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಜೀವನದಾನ ಟ್ರಸ್ಟಿನ ಅಧ್ಯಕ್ಷ, ಶ್ರೀಮಠದ ಕಾರ್ಯನಿರ್ವಹಣಾ ಅಧಿಕಾರಿ ಕೆ.ಜಿ.ಭಟ್ಟ ಮಾತನಾಡಿದರು. ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ವೇ.ಶೇಷಗಿರಿ ಭಟ್ಟ ಉಪಸ್ಥಿತರಿದ್ದರು. ಜೀವನದಾನ ಅನುಗ್ರಹ ಪಡೆದ
ಗೋಪಾಲಕೃಷ್ಣ ಭಟ್ಟರ ಧರ್ಮಪತ್ನಿ ಮೀನಾಕ್ಷಿ, ಮಕ್ಕಳಾದ ಅನುರಾಧಾ, ಚೈತ್ರಾ ಹಾಗೂ ಅಳಿಯ ಸುರೇಶ ಪಾಲ್ಗೊಂಡಿದ್ದರು. ಆರ್.ಎಸ್.ಹೆಗಡೆ ಹರಗಿ ಪ್ರಾಸ್ತಾವಿಕ ಮಾತನಾಡಿದರು. ಗುರುಭಿಕ್ಷಾ ಸೇವೆ ನಡೆಸಿದ ಅನಂತ ರಾಮಯ್ಯ ಹೆಗಡೆ, ಪಾರ್ವತಿ
ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.