ಬೆಳದಿಂಗಳ ರಾತ್ರಿಯಲ್ಲಿ ಹೃದಯಸ್ಪರ್ಶಿ ಸಮ್ಮಾನ
Team Udayavani, Feb 6, 2018, 7:19 PM IST
ಹೊನ್ನಾವರ: ಜಿಲ್ಲೆಯಲ್ಲಿ ಹಿಂದುಸ್ತಾನಿ ಸಂಗೀತದ ಸವಿ ಫಸರಿಸಲು ಕಾರಣರಾದ 60-85ರ ವರ್ಷವರೆಗಿನ 47 ಹಿರಿಯ ಕಲಾವಿದರನ್ನು ಅಭಿನಂದಿಸುವ ಅಪರೂಪದ ಸಮಾರಂಭ ಕರಿಕಾನಮ್ಮ ದೇವಿ ದೇವಸ್ಥಾನ ಬೆಟ್ಟದ ಮೇಲೆಯೇ ನಡೆಯಿತು.
ಶಾಸ್ತ್ರೀಯ ಸಂಗೀತ ಎಂದರೆ ಮಾರು ದೂರ ಸರಿಯುತ್ತಿದ್ದ ಕಾಲದಲ್ಲಿ ಸಂಗೀತ ಸಾಧನೆ ಮಾಡುತ್ತಾ ಶಿಷ್ಯರನ್ನು ತರಬೇತಿಗೊಳಿಸಿ ಸಂಗೀತದ
ಬೆಟ್ಟವನ್ನು ಕಷ್ಟಪಟ್ಟು ಏರಿದ ಕಲಾವಿದರನ್ನು ಇಂದಿನ ಕಲಾವಿದರು ಸಂಭ್ರಮದಿಂದ ಗೌರವಿಸಿದರು. ಎಲ್ಲ ಕಲಾವಿದರ ಆರೋಗ್ಯ, ಆಯುಷ್ಯ ಕೋರಿ ಶ್ರೀ ಕರಿಕಾನಮ್ಮ ದೇವಿಯಲ್ಲಿ ಪ್ರಾರ್ಥಿಸಲಾಯಿತು. ಗಜಾನನ ಭಂಡಾರಿ ಇವರ ಶಹನಾಯಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಮಾತನಾಡಿ, ಪ್ರಕೃತಿಯೇ ದೇವರು, ದೇವರಲ್ಲಿ ಪ್ರಕೃತಿ ಇದ್ದಾನೆ. ಈ ಸನ್ನಿಧಿಯಲ್ಲಿ ಸ್ವರಸಾಧಕರನ್ನು ಸನ್ಮಾನಿಸುತ್ತಿರುವುದು ಗಂಧರ್ವ ಲೋಕದ ಗೌರವ ದೊರೆತಂತೆ ಎಂದು ಅಭಿನಂದಿಸಿದರು.
ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೆಲ್ಕೊ ಇಂಡಿಯಾ ಸಂಸ್ಥಾಪಕ ಡಾ| ಹರೀಶ ಹಂದೆ ಮಾತನಾಡಿ, ಜಗತ್ತನ್ನು ಒಂದುಗೂಡಿಸುವ ಸಂಗೀತಕ್ಕೆ ಜಗತ್ತಿನಷ್ಟೇ ವ್ಯಾಪ್ತಿಯಿದೆ. ಸಂಗೀತ ಜಗತ್ತಿಗೆ ಸೇರಿದ್ದು, ಉತ್ತರಾದಿ, ದಕ್ಷಿಣಾದಿ, ಕಾಶ್ಮೀರಿ, ಪಹಾಡಿ, ಪಾಶ್ಚಾತ್ಯ ಯಾವ ಹೆಸರಿನಿಂದ ಕರೆದರೂ ಸಂಗೀತದ ಉದ್ದೇಶ ಮನುಕುಲವನ್ನು ಒಂದು ಮಾಡುವುದು. ಜಿಲ್ಲೆಯ ಕಲಾವಿದರನ್ನು ಸೇರಿಸಿ ಅಭಿನಂದಿಸುತ್ತಿರುವವರನ್ನು ಅಭಿನಂದಿಸುತ್ತೇನೆ ಎಂದರು.
ಇದೇ ಸಮಾರಂಭದಲ್ಲಿ ಅವಿನಾಶ ಹೆಬ್ಟಾರ ಸಂಸ್ಮರಣಾ ಯುವ ಪುರಸ್ಕಾರವನ್ನು ಮಂಗಳೂರಿನ ಅಂಕುಶ ನಾಯಕ ಇವರಿಗೆ ಗಣ್ಯರು ಪ್ರದಾನ
ಮಾಡಿದರು. ನಾದ-ಮಾಧವ ರಾಷ್ಟ್ರೀಯ ಪ್ರಶಸ್ತಿಯನ್ನು ಪಂ| ಶಿವಾನಂದ ತರಲಗಟ್ಟಿ ಅವರಿಗೆ ತಲುಪಿಸುವುದಾಗಿ ಪ್ರಕಟಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ, ಸಾಮವೇದ ವಿದ್ವಾಂಸ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡಿದರು. ಕಲಾಸಂಗಮದ ಅಧ್ಯಕ್ಷ ಡಾ| ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಹೆಗಡೆ ಕಲಾºಗ ವಂದಿಸಿದರು. ಕಾರ್ಯಕ್ರಮವನ್ನು ಕಲಾಮಂಡಲ, ಎಸ್.ಕೆ.ಪಿ. ದೇವಸ್ಥಾನ ಟ್ರಸ್ಟ್, ಮ್ಯೂಸಿಕ್ ಟ್ರಸ್ಟ್ ಇವು ಸಂಯೋಜಿಸಿದ್ದವು. ನೂರಕ್ಕೂ ಹೆಚ್ಚು ವಿದೇಶಿ ಕಲಾಸಕ್ತರ ಸಹಿತ ಸಾವಿರಕ್ಕೂ ಹೆಚ್ಚು ಸಂಗೀತ ಪ್ರೇಮಿಗಳು ಬೆಳತನಕ ನಡೆದ ಸಂಗೀತ ಆಸ್ವಾದಿಸಿದರು.
ಪಂ| ಹಾಸನಗಿ ಗಣಪತಿ ಭಟ್, ಕೃಷ್ಣರಾವ್ ಕಲ್ಗುಂಡಿ ಕೊಪ್ಪ, ಎಂ.ಟಿ. ಭಾಗವತ್, ಆರ್.ವಿ. ಹೆಗಡೆ ಹಳ್ಳದಕೈ, ಪಂ| ಪರಮೇಶ್ವರ ಹೆಗಡೆ, ಶ್ರೀಪಾದ
ಹೆಗಡೆ ಕಂಪ್ಲಿ ಸಹಿತ ಹೆಚ್ಚಿನ ಎಲ್ಲ ಕಲಾವಿದರು ಕಾರ್ಯಕ್ರಮ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.