ಅಧ್ಯಕ್ಷರೂ ಕಮೀಷನ್ ತಗೋತಾರಂತೆ: ಸದಸ್ಯರ ಆರೋಪ
Team Udayavani, Nov 23, 2017, 3:11 PM IST
ಶಿರಸಿ: ನಗರಸಭೆ ಅಧ್ಯಕ್ಷರು ಮೂರು ಪರ್ಸಂಟ್ ಕಮೀಷನ್ ತಗೋತೀರಂತೆ. ಗುತ್ತಿಗೆದಾರರು ದೂರುತ್ತಿದ್ದಾರೆ. ಆದರೂ ಕೆಲಸ ಆಗಲ್ಲ ಎಂದು ಸದಸ್ಯ ಅಮಾನುಲ್ಲಾ ಖಾನ್ ಗಂಭೀರವಾಗಿ ಆರೋಪಿಸಿದರು.
ಅಟಲ್‌ಜಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಮಾನುಲ್ಲಾ, ಸಾಕಷ್ಟು ದೂರು ಬಂದಿದೆ. ಏನ್ ಮಾಡ್ತೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅರುಣಾ ವೆರ್ಣೇಕರ್, ಯಾರು ಕೊಟ್ಟಿದ್ದಾರೆ ಹೇಳಿ. ನಾನು ಒಂದು ರೂಪಾಯಿ ತಗೊಂಡಿಲ್ಲ. ನೀವೇ 14 ಸಾವಿರ ರೂ. ತಗೋಂಡಿದೀರಿ ಎಂದು ಗುತ್ತಿಗೆದಾರರು ಹೇಳ್ತಾರಲ್ಲ ಎಂದು ಮರು ಸವಾಲು ಹಾಕಿದರು. ಮಧ್ಯೆ ಮಾತನಾಡಿದ ಶ್ರೀಕಾಂತ ತಾರೀಬಾಗಿಲು, ನಗರಸಭೆ ಮಾನ ಹರಾಜು ಹಾಕಬೇಡಿ, ಮೊದಲೇ ಮರ್ಯಾದೆ ಹೋಗುತ್ತಿದೆ, ಇನ್ನೂ ಕಳಿಬೇಡಿ, ವಿಷಯ ಮುಂದೆ ತಗೊಳ್ಳಿ ಎಂದು ಸೂಚಿಸಿದರು. ಇದಕ್ಕೂ ನಿಲ್ಲದೇ ಅಮಾನುಲ್ಲಾ ಆರು ವಾಡ್ ಗೆ ಮಾತ್ರ ಕಾಮಗಾರಿ ಹಾಕಿದ್ದು ಯಾಕೆ ಎಂದು ಕೇಳಿದಾಗ, ಖಡಕ್ ಆಗಿಯೇ ಉತ್ತರಿಸಿದ ವೆರ್ಣೇಕರ್ ಹೌದ್ರಿ, ಹಾಕಿದ್ದೇನೆ ಏನೀಗ? ಇನ್ನೂ ಉತ್ತರ ಬೇಕು ಎಂದರೆ ಹೊರಗಡೆ ಬನ್ನಿ ಎಂದರು.
ಕರಾವಳಿ ಅಭಿವೃದ್ಧಿ ಪ್ರಾದಿಕಾರದ ನೆರವಿನಿಂದ ನಿರ್ಮಾಣ ಮಾಡಲು ಉದ್ದೇಶಿಸಿದ ಮೀನು ಮಾರುಕಟ್ಟೆ ಬದಲಿಗೆ ಹೂವು, ತರಕಾರಿ
ಮಾರುಕಟ್ಟೆ ಪ್ರಸ್ತಾವನೆಗೆ ಅನುಮೋದನೆ ಇತ್ತು. ಇನ್ನೂ ಪತ್ರ ವ್ಯವಹಾರ ಆಗಿಲ್ಲ. ಹಣ ವಾಪಸ್ ಹೋಗಬಹುದು. ತಕ್ಷಣ ಏನೂ
ಅಂತ ಆಗಬೇಕು. ನಗರಕ್ಕೆ ಬಂದ ಅನುದಾನ ಹಿಂದೆ ಹೋಗಬಾರದು ಎಂದು ಶ್ರೀಕಾಂತ ತಾರೀಬಾಗಿಲು ಹೇಳಿದರು. ಮೀನು ಮಾರುಕಟ್ಟೆ ಆಗಿದ್ದರೆ ಸಮಸ್ಯೆ ಇರ್ತಿರಲಿಲ್ಲ ಎಂದು ಅಧ್ಯಕ್ಷರೇ ಹೇಳಿದಾಗ, ಆ ವಿಷಯ ಮುಗಿದಿದೆ. ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ತಾರೀಬಾಗಿಲು ಗರಂ ಆಗಿಯೇ ಹೇಳಿದರು. ಅರುಣ ಪ್ರಭು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಹಣ ವಾಪಸ್ಸು ಹೋಗದಂತೆ ಮನವಿ ಮಾಡಿಕೊಳ್ಳೋಣ ಎಂದೂ ಹೇಳಿದರು.
ಅರ್ಜಿ ನಮೂನೆ 3ರ ಕುರಿತು ಸಭೆಯ ಆರಂಭದಲ್ಲೇ ಅನೇಕ ಪ್ರಶ್ನೆಗಳನ್ನು ಪಕ್ಷ, ಪ್ರತಿ ಪಕ್ಷದ ಸದಸ್ಯರು ಪಟ್ಟು ಹಿಡಿದು ಕೇಳಿದರು.
ಕಳೆದ ಐದಾರು ತಿಂಗಳಿಂದ ಅಲೆದಾಟ ಮಾಡುತ್ತಿದ್ದಾರೆ. ಅವರಿಗೆ ಸಿಗದೇ ಇದ್ದ ಪರವಾನಗಿ ಏಜೆಂಟರ ಮೂಲಕ ಬಂದರೆ
ಆಗುತ್ತದೆ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ದೂರಿದರು. ಯಾರು ಅಂತ ಹೇಳಿ, ಅವರಿಗೆ ಪ್ರವೇಶ ಇಲ್ಲ ಎಂದು ಫಲಕ ಹಾಕುತ್ತೇವೆ
ಎಂದು ಪೌರಾಯುಕ್ತ ಮಹೇಂದ್ರಕುಮಾರ ಹೇಳಿದರು. ಇದು ಇಲ್ಲಿಯ ಸಮಸ್ಯೆ ಅಲ್ಲ, ಇಡೀ ರಾಜ್ಯದ್ದು, ಕಂಪ್ಯೂಟರಲ್ಲೇ ತಗೋತಿಲ್ಲ ಎಂದು ಪೌರಾಯುಕ್ತರು ಹೇಳಿದರು. ನಾವು ಮರ್ಯಾದೆ ಇಟ್ಟುಕೊಳ್ಳೂವಂತೆ ಕೂಡ ಇಲ್ಲದಂತಾಗಿದೆ ಎಂದು ಸದಸ್ಯರು ಅಲವತ್ತುಕೊಂಡರು. ನಗರಸಭೆ ಮಾಲೀಕತ್ವದ ಅಂಗಡಿಗಳ ಬಾಡಗೆ ವಿಚಾರ, ವಿವಿಧ ಗಟಾರ ಕಾಮಗಾರಿಗಳು, ರಸ್ತೆ ಹೊಂಡ, ಅತಿಕ್ರಮಣ ಸೇರಿದಂತೆ ಅನೇಕ ಪ್ರಶ್ನೆಗಳು ಕೇಳಿಬಂದವು. ರಾಚಪ್ಪ ಜೋಗಳೇಕರ್, ರವಿ ಚಂದಾವರ್, ಜ್ಯೋತಿ ಗೌಡ, ರಾಕೇಶ ತಿರುಮಲೆ ಸೇರಿದಂತೆ ಇತರರು ಚರ್ಚೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ
Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.