ರಸ್ತೆಯ ಅಂಚನ್ನೇ ಕಬಳಿಸಿದ ಸಮುದ್ರರಾಜ
•ಮಳೆರಾಯನ ಅಬ್ಬರಕ್ಕೆ 17 ಕೋಟಿ ರೂ. ಆಸ್ತಿ ಹಾನಿ; 7 ಜೀವಗಳು ಬಲಿ•ಅಂಬಿಗವಾಡದಲ್ಲಿ ಕಡಲ್ಕೊರೆತ
Team Udayavani, Aug 3, 2019, 12:26 PM IST
ಕಾರವಾರ: ತಾಲೂಕಿನ ದೇವಭಾಗ ಸಮುದ್ರದಂಚಿನಲ್ಲಿ ಕಡಲ್ಕೊರೆತ ಉಂಟಾಗಿದೆ. ಅಂಬಿಗವಾಡ ಎಂಬಲ್ಲಿ ರಸ್ತೆಯನ್ನೇ ಕಬಳಿಸುವ ಹಂತವನ್ನು ತಲುಪಿದ್ದು, ಇನ್ನೆರಡು ದಿನಗಳಲ್ಲಿ ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿವೆ.
ರಸ್ತೆ ಕಡಲ್ಕೊರೆತಕ್ಕೆ ತುತ್ತಾದರೆ ಜನ ಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಮಳೆ ಕಡಿಮೆಯಾಗಿದ್ದರೂ ಸಮುದ್ರದ ಅಬ್ಬರ ಕಡಿಮೆಯಾಗಿಲ್ಲ. ಅಲೆಗಳ ಆರ್ಭಟಕ್ಕೆ ಸಮುದ್ರ ತೀರದ ರಸ್ತೆಗಳು ಬಲಿಯಾಗುವ ಲಕ್ಷಣಗಳಿವೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತುರ್ತಾಗಿ ಉಸುಕಿನ ಚೀಲಗಳನ್ನಾದರೂ ಸಮುದ್ರ ಕೊರೆತ ಇರುವಲ್ಲಿ ಪೇರಿಸಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಕಡಲ್ಕೊರೆತಕ್ಕೆ ಬೃಹತ್ ಬಂಡೆಗಲ್ಲು ಪೇರಿಸಿದ ಸ್ಥಳವೇ ಬಲಿಯಾಗುತ್ತಿದೆ. 100 ಮೀ. ಉದ್ದಕ್ಕೆ ಮತ್ತೆ ಬೃಹತ್ ಬಂಡೆಗಳು ಅಥವಾ ರಬ್ಬರ್ ತಂತ್ರಜ್ಞಾನದ ತಡಗೋಡೆ ನಿರ್ಮಿಸುವ ಅನಿವಾರ್ಯತೆ ಇದೀಗ ಉಂಟಾಗಿದೆ. ಕಡಲ್ಕೊರೆತದ ಸ್ಥಳಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಭೇಟಿ ನೀಡಿದ್ದು, ತುರ್ತು ಕ್ರಮಕ್ಕೆ ಬಂದರು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಂದಾಜು 17.39 ಕೋಟಿ ರೂ. ನಷ್ಟ: ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾಗಿದ್ದು, ಸುಮಾರು 17.39 ಕೋಟಿ ನಷ್ಟವಾಗಿದೆ ಎಂದು ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಬಗ್ಗೆ ನಿಖರವಾಗಿ ಇನ್ನಷ್ಟು ವಿವಿರ ಮಾಹಿತಿ ಬರಬೇಕಿದೆ. ಇದು ಪ್ರಥಮ ಮಾಹಿತಿ ಆಧರಿಸಿದ್ದು ಎಂದು ಜಿಲ್ಲಾಡಳಿತ ಹೇಳಿದೆ.
ವಿದ್ಯುತ್ ಸ್ಪರ್ಶ, ನೆಲ ಮಟ್ಟದ ಬಾವಿಗಳಿಗೆ ಬೀಳುವುದು, ಪ್ರವಾಹದಲ್ಲಿ ಸಿಕ್ಕಿ ಹೋದ ಘಟನೆ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. 16 ಜಾನುವಾರುಗಳು ಮೃತಪಟ್ಟಿವೆ ಎಂದು ಜಿಲ್ಲಾಡಳಿತ ಹೇಳಿದೆ.
ಜುಲೈನಲ್ಲಿ ಈ ಸಲ ಮಳೆ ಆರ್ಭಟ ಜೋರಾಗಿತ್ತು. ಜೊಯಿಡಾ, ಯಲ್ಲಾಪುರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಕೊರತೆ ಎನಿಸಿದರೂ, ಜುಲೈನಲ್ಲಿ ಉತ್ತಮ ಮಳೆಯಾಯಿತು ಎಂಬುದು ಕೃಷಿ ಅಧಿಕಾರಿಗಳ ಅಂಬೋಣ.
ಕಂದಾಯ ಇಲಾಖೆ ಅಧಿಕಾರಿಗಳು ಹೇಳುವಂತೆ ಜಿಲ್ಲೆಯಲ್ಲಿ 135.53 ಕಿಮೀ ರಸ್ತೆ ಹಾಳಾಗಿದೆ. ರಸ್ತೆ ಹಾನಿಯೇ 10.75 ಕೋಟಿ ರೂ., 17 ಸೇತುವೆಗಳಿಗೆ ಧಕ್ಕೆಯಾಗಿದ್ದು, ಇದರ ಹಾನಿ 1.24 ಕೋಟಿಯಷ್ಟಾಗಿದೆ. 29 ಖಾಸಗಿ ಕಟ್ಟಡಗಳ ಹಾನಿ 52,32 ಲಕ್ಷ ರೂ.ಗಳಷ್ಟಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಗಂಜಿ ಕೇಂದ್ರಗಳನ್ನು ಸಹ ತೆರೆಯಲಾಗಿತ್ತು. ಭಾರೀ ಮಳೆ ಪ್ರವಾಹದಿಂದ 66 ರಸ್ತೆಗಳಿಗೆ ಹಾನಿಯಾಗಿದೆ. ಅಂಕೋಲಾದಲ್ಲಿ 19, ಭಟ್ಕಳದಲ್ಲಿ 12, ಕಾರವಾರದಲ್ಲಿ 10, ಮುಂಡಗೋಡ 15, ಸಿದ್ದಾಪುರ 8, ಜೊಯಿಡಾದಲ್ಲಿ 1, ಯಲ್ಲಾಪುರದಲ್ಲಿ 16 ರಸ್ತೆಗಳಿಗೆ ಹಾನಿಯಾಗಿದೆ. ಕುಮಟಾ, ಶಿರಸಿ ತಾಲೂಕುಗಳ ರಸ್ತೆಗಳ ಹಾನಿಯ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ. ಅಂಕೋಲಾ, ಸಿದ್ದಾಪುರಗಳಲ್ಲಿ ತಲಾ 2 ಸೇತುವೆಗಳು, ಯಲ್ಲಾಪುರ 8, ಮುಂಡಗೋಡ 1, ಹೊನ್ನಾವರದಲ್ಲಿ 3 ಸೇತುವೆಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.