ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬಹಳ ನೋವುಂಟು ಮಾಡುತ್ತದೆ
Team Udayavani, Mar 27, 2022, 12:59 PM IST
ಶಿರಸಿ: ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬಹಳ ನೋವನ್ನುಂಟು ಮಾಡುತ್ತದೆ ಎಂದು ಕಥೆಗಾರ ಸಂತೋಷಕುಮಾರ ಮೆಹೆಂದಳೆ ಭಾನುವಾರ ಹೇಳಿದರು.
ನಗರದ ಕಣಜದಲ್ಲಿ ಮಂಗಳಮುಖಿಯರ ಸಾಂಗತ್ಯದಲ್ಲಿ ಎಂಬ ಕೃತಿಯ ದ್ವಿತೀಯ ಮುದ್ರಣದ ಬಿಡುಗಡೆಯಲ್ಲಿ ಮಾತನಾಡಿದರು.
ತೃತೀಯ ಲಿಂಗಿಯನ್ನು ಏಕೆ ಸಮಾಜದ ಮುಖ್ಯವಾಹಿನಿಯಲ್ಲಿ ನೋಡುವದಿಲ್ಲ. ಮನೆ ಬಿಟ್ಟು ಓಡಿ ಹೋಗುವದೇ ಬದುಕಾಗಿದೆ. ಅಬ್ಬಬ್ಬಾ ಎಂದರೆ ಎಸ್ಸೆಸ್ಸೆಲ್ಸಿ ತನಕ ಓದುತ್ತಾರೆ. ಅವರ ಸಂಕಟ, ಸಂಕಷ್ಟ ಬದುಕು ನೋಡಿದರೆ ಮರುಕ ಬರುತ್ತದೆ ಎಂದ ಅವರು, ಮಂಗಳಮುಖಿಯರ ಕುರಿತು ಇದೇ ಮೊದಲ ಕೃತಿಯಾಗಿದೆ. ಮಂಗಳಮುಖಿಯರ ಜಗತ್ತು ಬಹಳ ವಿಚಿತ್ರವಾಗಿರುತ್ತದೆ. ಮಂಗಳಮುಖಿಯರ ನೋವು, ಸಂಕಟಗಳನ್ನು ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಸು.ಬಕ್ಕಳ ಮಾತನಾಡಿ, ಸಮಾಜದಲ್ಲಿರುವ ಸಮಸ್ಯೆಗಳನ್ನು ವಿಭಿನ್ನ ಶೈಲಿಯಲ್ಲಿ ಲೇಖಕರು ಕೃತಿಯಲ್ಲಿ ತಿಳಿಸಿದ್ದಾರೆ . ಮಂಗಳಮುಖಿಯರ ಜೀವನದ ಕುರಿತು ಬರೆದ ಕೃತಿ ಬಹಳ ಕೂತೂಹಲಕಾರಿಯಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜನ ಬರಹಗಾರರಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಪ್ರಕಾಶನಗಳಿಲ್ಲ. ಜಿಲ್ಲೆಗೊಂದು ಸಹಕಾರಿ ಮುದ್ರಣಾಲಯ ಪ್ರಾರಂಭವಾದರೆ ಬಹಳ ಅನುಕೂಲವಾಗಲಿದೆ. ವಸ್ತುನಿಷ್ಠವಾಗಿ ವಿಶ್ಲೇಷಿಸುವ ಮನಸ್ಥಿತಿಯವರಿದ್ದರೆ ಮಾತ್ರ ಉತ್ತಮ ಕೃತಿಗಳು ಬರಲು ಸಾಧ್ಯ ಎಂದರು.
ಕೃತಿಯ ಕುರಿತು ಮಾತನಾಡಿದ ಸಾಹಿತಿ ಶಿವಕುಮಾರ, ಇದೊಂದು ವಿಭಿನ್ನ ಶೈಲಿಯ ಕೃತಿಯಾಗಿದೆ. ಮಂಗಳಮುಖಿಯರ ಸಮಾಜದ ಆಶೋತ್ತರಗಳನ್ನು ಬಿಂಬಿಸುವ ಪ್ರಯತ್ನವನ್ನು ಲೇಖಕರು ಈ ಕೃತಿ ಯಲ್ಲಿ ಮಾಡಿದ್ದಾರೆ. ಈ ಸಮುದಾಯ ಬಹಳ ಹಿಂದಿನಿಂದಲೂ ಇದೆ. ಆದರೆ ನಾವು ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ದೈವದತ್ತವಾಗಿ ಬಂದವರು. ಲೇಖಕರು ಕೃತಿ ಯಲ್ಲಿ ಅವರ ನೋವು ಸಂಕಟಗಳನ್ನು ಉಲ್ಲೇಖಿಸಿದ್ದಾರೆ ಎಂದರು.
ಕಾರ್ಯಕ್ರಮವನ್ನು ವಿ ಪಿ ಹೆಗಡೆ ವೈಶಾಲಿ ಸ್ವಾಗತಿಸಿ, ಪತ್ರಕರ್ತ ಶಿವಪ್ರಸಾದ ಹೆಗಡೆ ಹಿರೇಕೈ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
Karate: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಕರಾಟೆ ಪಟುಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.