Sirsi: ಹಿಂದೂ ರಾಷ್ಟ್ರದ ಗೆಲುವೇ ನಮ್ಮ ಮೂಲ ಉದ್ದೇಶವಾಗಬೇಕು: ಸಂಸದ ಅನಂತಕುಮಾರ ಹೆಗಡೆ
Team Udayavani, Jan 20, 2024, 3:36 PM IST
ಶಿರಸಿ: ನಮ್ಮ ಗೆಲುವು ಕೇವಲ ಬಿಜೆಪಿ ಆಗಬಾರದು. ಹಿಂದೂ ರಾಷ್ಟ್ರದ ಗೆಲುವೇ ನಮ್ಮ ಮೂಲ ಉದ್ದೇಶವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು.
ಅವರು ಜ.20ರ ಶನಿವಾರ ಕಾನಸೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿ, ಡಿಬೇಟ್ ಮಾಡುವವರು ಮಾಡುತ್ತಾರೆ. ನಮ್ಮ ಗುರಿ ಹಿಂದೂ ರಾಷ್ಟ್ರ. ಇದಾದರೆ ಜಗತ್ತಿನಲ್ಲಿ ಎಲ್ಲವೂ ಸರಿ ಹೋಗುತ್ತದೆ. ವ್ಯವಸ್ಥೆಯೂ ಸರಿ ಆಗುತ್ತದೆ ಎಂದರು.
ಕಳೆದ 10 ವರ್ಷದಲ್ಲಿ ಬಂದ ಬಿಜೆಪಿ ದೇಶದ ಆರ್ಥಿಕತೆ ಸುಧಾರಿಸಿದೆ. ಇದು ಮುಂಚೆ ಯಾಕೆ ಇರಲಿಲ್ಲ? ಅದಕ್ಕೊಂದು ಯೋಚನೆ, ಯೋಜನೆ ಬೇಕು ಎಂದರು.
ರಾಮಂದಿರ ಕಟ್ಟುವುದು ದೊಡ್ಡ ಸಮಸ್ಯೆ ಆಗಿರಲ್ಲ. ರಾಷ್ಟ್ರೀಯ ಜಾಗರಣದ ಮೂಲಕ ಮಂದಿರ ಕಟ್ಟಬೇಕಿತ್ತು. ಅದಕ್ಕೆ 500 ವರ್ಷ ತೆಗೆದುಕೊಂಡಿತು. ರಾಮ ಸೀತೆ ಎಲ್ಲಡೆ ಇದಾರೆ ಎನ್ನುವರು. ಅಯೋಧ್ಯೆ ನಮ್ಮ ಶ್ರದ್ಧಾ ಕೇಂದ್ರ. ಅಪಮಾನಕ್ಕೆ ಒಳಗಾದ ಶ್ರದ್ದಾ ಕೇಂದ್ರಕ್ಕೆ ಮುಕ್ತಿ ಸಿಗಬೇಕು ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಗೆ ಆದ ಸಂಘಟನಾ ಹಿನ್ನಡೆ ಸರಿಯಾಗಬೇಕು. ದುರಹಂಕಾರಿ ಆಡಳಿತ ಬಂದ ಬಳಿಕ ರಾಜ್ಯದಲ್ಲಿ ಅನ್ಯಾಯ ಹೆಚ್ಚಾಗಿದೆ. ಅದನ್ನು ನಾವು ನಿಲ್ಲಿಸ್ತೇವೆ. ಯಾರೇ ಕೂಗಾಡಿದರೂ ಸರಿ ಅದನ್ನು ಸರಿ ಮಾಡುತ್ತೇವೆ. ತಳ ಹಂತದಲ್ಲಿ ಸಹಕಾರ ಬೇಕು. ಅಮಿತ್ ಷಾ ಅವರೂ ಕಳೆದ ಭಾರಿಯ ಲೋಕಸಭಾ ಚುನಾವಣೆಯ ಮತಗಳ ದಾಖಲೆ ಮುರಿಯಬೇಕು. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಚುನಾವಣೆಯಲ್ಲಿ ಎದರುಗಡೆ ಇರುವವರು ನೆಲಕಚ್ಚಬೇಕು. ಯಾರೇ ಇದ್ದರೂ ಒಳ್ಳೆಯ ವಿರೋಧ ಪಕ್ಷ ಆಗಿರಬೇಕು. ದೇಶದ್ರೋಹಿ ವಿರೋಧ ಪಕ್ಷವಾಗಿರಬಾರದು ಎಂದೂ ಹೇಳಿದರು.
ಲಾಲ್ ಬಹದ್ದೂರು, ಜಹಂಗಿರಬಾಬ, ಸಾರಾಬಾಯಿ ಅವರ ಸಾವು ಸರಣಿಯಾಗಿ ಆಯಿತು. ಇದಕ್ಕೆಲ್ಲ ತಡೆ ಆಗಿದ್ದು 2014ರಲ್ಲಿ. ಅಲ್ಲಿ ತನಕ ನಮ್ಮ ದೇಶದಲ್ಲಿ ಪ್ರಧಾನಿ ಆಗಿದ್ದರೂ ಕಂಟ್ರೋಲ್ ನಲ್ಲಿ ಇರಲಿಲ್ಲ. ಬಹಳ ಜನರಿಗೆ ಇದರ ಅಂತರಾಳ ಗೊತ್ತಿರಲ್ಲಿಲ್ಲ. ನಮ್ಮನ್ನು ಹೊರಗಿನ ಶಕ್ತಿ ಆಳುತ್ತಿತ್ತು. ರಾಷ್ಟ್ರೀಯತೆಯ ಸರಕಾರ ಬಂದ ಬಳಿಕ ಇದಕ್ಕೆ ತಡೆ ಬಿತ್ತು ಎಂದರು.
ಈ ವೇಳೆ ಕೆ.ಜಿ.ನಾಯ್ಕ, ಚಂದ್ರು ಎಸಳೆ, ಬಲರಾಮ ನಾಮಧಾರಿ, ಪ್ರಸನ್ನ ಹೆಗಡೆ, ಸುರೇಶ ಮೇಸ್ತ, ನಾರಾಯಣ ಹೆಗಡೆ ಚಾರೆ ಇತರರು ಇದ್ದರು.
ತುಂಬಾ ನಾಯಕರು ನಮ್ಮಲ್ಲೂ ಕನಸು ಕಾಣುತ್ತ ಭ್ರಮೆಯಲ್ಲಿ ಇರುವವರು ಇದ್ದಾರೆ. ಆದರೆ, ಭಗವಂತನೊಬ್ಬನಿದ್ದಾನೆ. ಯು ಟರ್ನ್ ತಗಂಡು ಗಾಡಿ ಹೊರಟಿದೆ. ನಾವು ಇದು ನಿರೀಕ್ಷೆ ಮಾಡಿದ್ದಲ್ಲ. – ಅನಂತಕುಮಾರ ಹೆಗಡೆ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.