![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 22, 2022, 7:35 PM IST
ಅಂಕೋಲಾ: ಉ.ಕ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಹೇರಿಕೆಯಿಂದ ವಿನಾಯಿತಿ ನೀಡಿ ನಾಟಕ ಯಕ್ಷಗಾನ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕೆಂದು ಉ.ಕ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರರಿಗೆ ತಾಲೂಕ ರಂಗಭೂಮಿ ಕಲಾವಿದರ ವೇದಿಕೆ ವತಿಯಿಂದ ಅಂಕೋಲಾ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
2021-19 ರಲ್ಲಿ ಚುನಾವಣೆ ನೀತಿಸಂಹಿತೆ ಮತ್ತು 2020 ರಿಂದ 2022 ಕೋವಿಡ್ ಹೀಗೆ ಸತತ 5 ವರ್ಷಗಳಿಂದ ನಾಟಕ, ಯಕ್ಷಗಾನ ಮುಂತಾದ ಯಾವುದೇ ಕಾರ್ಯಕ್ರಮಗಳಿಲ್ಲದೆ ಕಲಾವಿದರು, ರಂಗಸಜ್ಜಿಕೆ, ಸಂಗೀತ, ಹಿಮ್ಮೇಳ, ಲೈಟಿಂಗ್, ಸೌಂಡ್ ಸಿಸ್ಟಂ, ವಾದ್ಯದವರು ಮುಂತಾದ ಅವಲಂಬಿತರು ಅತಂತ್ರರಾಗಿ ಜೀವನ ನಿರ್ವಹಣೆ ಮಾಡುವದು ತೀರ ಕಷ್ಟಕರವಾಗಿದೆ. ಮಕ್ಕಳ ಶಾಲಾ ಫೀ ತುಂಬಲಾಗದೆ ನಮ್ಮ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗುವಂತಾಗಿದೆ.
ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರೀದಿಸಿದ ಲೈಟಿಂಗ್ ಸೌಂಡ್ ಸಿಸ್ಟಂ ಪರಿಕರಗಳ ಬಳಕೆಯಾಗದೆ ಹಾಳಾಗಿವೆ ಮತ್ತು ಹಾಳಾಗುತ್ತಿವೆ. ಸಾಲ ನೀಡಿದವರು ಮನೆ ಬಾಗಿಲಿಗೆ ಬರುತ್ತಿದ್ದು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ದೇವಸ್ಥಾನಗಳ ವಾರ್ಷಿಕ ಪೂಜೆ ನಿಮಿತ್ತ ನಡೆಯುವ ಕಾರ್ಯಕ್ರಮಗಳ ಹಿಂದೆ ಅನೇಕ ಅವಲಂಬಿತರು ಜೀವನ ನಡೆಸುತ್ತಾರೆ. ಇದೀಗ ಮತ್ತೆ ರಾತ್ರಿ ಕರ್ಫ್ಯೂ ಹೇರಿಕೆಯಿಂದಾಗಿ ಕಾರ್ಯಕ್ರಮಗಳನ್ನೇ ಅವಲಂಬಿಸಿದ ನಾವು ಅಕ್ಷರಶಃ ಬೀದಿಗೆ ಬಂದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಎಸ್. ಜಾಂಬಳೇಕರ ಮನವಿ ವಾಚಿಸಿದರು. ಕಲಾವಿದರ ವೇದಿಕೆಯ ಉಪಾಧ್ಯಕ್ಷ ಸುಜೀತ ನಾಯ್ಕ, ಧನಂಜಯ ನಾಯ್ಕ ಕುಂಬಾರಕೇರಿ, ರಾಮಕೃಷ್ಣ ನಾಯ್ಕ, ಗಣಪತಿ ಎಲ್ ನಾಯ್ಕ ಮೋಹನ ನಾಯ್ಕ, ಹರೀಶ ಬಾನಾವಳಿ ಅವರ್ಸಾ, ವಿನಾಯಕ ನಾಯ್ಕ, ಮಹೇಶ ನಾಯ್ಕ ತೆಂಕಣಕೇರಿ, ಗಣಪತಿ ಗೌಡ ಹಡವ, ಇಂದ್ರ ಗೌಡ ಉಳವರೆ, ಶಿವಾನಂದ ನಾಯ್ಕ ಅಲಗೇರಿ, ಪ್ರಶಾಂತ ಬಂಟ ಕೇಣಿ, ವೆಂಕಟರಮಣ ನಾಯ್ಕ, ಮೋಹನ ನಾಯ್ಕ, ದಾಮು ನಾಯ್ಕ ಇನ್ನಿತರ ಕಲಾವಿದರು ಇದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.