ಮೇಲ್ಸೇತುವೆಯೂ ಇಲ್ಲ -ಚತುಷ್ಪಥವೂ ಇಲ್ಲ!
ಕುಮಟಾ-ಹೊನ್ನಾವರ-ಭಟ್ಕಳ ತಾಲೂಕಿನ ಜನರ ಗೋಳು ಕೇಳುವವರ್ಯಾರು?
Team Udayavani, May 26, 2022, 5:51 PM IST
ಹೊನ್ನಾವರ: ದಕ್ಷಿಣ ಕನ್ನಡದ ಚತುಷ್ಪಥದಂತೆ ಉತ್ತರ ಕನ್ನಡದಲ್ಲೂ 60 ಅಡಿ ಚತುಷ್ಪಥವಾಗುತ್ತಿದೆ. ಅಗತ್ಯವಿದ್ದಲ್ಲಿ ಮೇಲ್ಸೇತುವೆ, ಸರ್ವಿಸ್ ರಸ್ತೆಗಳಾಗುತ್ತಿವೆ. ಆದರೆ ಓಡಾಡುವುದು ಸುಲಭವಾಗಲಿದೆ ಎಂಬ ಕುಮಟಾ, ಹೊನ್ನಾವರ, ಭಟ್ಕಳ ನಗರದವರ ಕನಸು ಭಗ್ನವಾಗಿದೆ.
60 ಅಡಿ ಚತುಷ್ಪಥವೂ ಇಲ್ಲ, ಮೇಲ್ಸೇತುವೆ ಇಲ್ಲ, ಸರ್ವಿಸ್ ರಸ್ತೆಯೂ ಇಲ್ಲ. ಈ ಮಾರ್ಗದಲ್ಲಿ ದಿನಕ್ಕೊಂದು ಅಪಘಾತವಾಗುತ್ತಿದೆ. ಓಡಾಡುವವರು ದುಸ್ವಪ್ನ ಕಾಣುತ್ತಿದ್ದಾರೆ.
ತಮ್ಮತಮ್ಮ ಆಸ್ತಿ ಉಳಿಸಿಕೊಳ್ಳಲು ಕೆಲವರು ಮಾಡಿದ ತಂತ್ರವೋ, ಕುತಂತ್ರವೋ ಯಶಸ್ವಿಯಾಗಿದ್ದು ಕುಮಟಾ ಮಿರ್ಜಾನ್, ಹೆಗಡೆ, ಚಂದಾವರ, ಧಾರೇಶ್ವರ, ಹಳದೀಪುರ. ಹೊನ್ನಾವರ-ಬೆಂಗಳೂರು ರಸ್ತೆ, ಕಾಸರಕೋಡು, ಮಂಕಿ, ಮುಡೇìಶ್ವರ, ಶಿರಾಲಿವರೆಗಿನ ಗ್ರಾಮಗಳ ಜನಕ್ಕೆ ಹೆದ್ದಾರಿಗೆ ಬರಲು ಸರ್ವಿಸ್ ರಸ್ತೆ ಇಲ್ಲ, ರಾಜ್ಯ ಹೆದ್ದಾರಿಗಳನ್ನು ಜೋಡಿಸುವಲ್ಲಿ ಚತುಷ್ಪಥವೂ ಇಲ್ಲ.
ಕೆಲವು ಕಡೆ 40 ಅಡಿ ಹೆದ್ದಾರಿಗೆ ಮಧ್ಯೆ ಕಾಂಕ್ರೀಟ್ ಗೋಡೆ ಡಿವೈಡರ್ ಹಾಕಿದ್ದಾರೆ. ಮೇಲಿನ ಬೇಡಿಕೆಗಳನ್ನು ಮುಂದಿಟ್ಟು ತಡವಾಗಿ ಎಚ್ಚೆತ್ತುಕೊಂಡ ಜನ ಪ್ರತಿಭಟನೆ ನಡೆಸಿದರು. ಪತ್ರಿಕೆಗಳಲ್ಲಿ ವರದಿಯಾಯಿತು. ಶಾಸಕರು ಬಂದು ಭರವಸೆ ಕೊಟ್ಟರು. ಸಂಸದರು ಬಂದರು, ರಾಜ್ಯ ಸರ್ಕಾರದಿಂದ ಶಾಸಕರು ಭೂಮಿ ಕೊಡಿಸಿದರೆ ಮೊದಲು ಸರ್ವೇ ಮಾಡಿದಂತೆ 60 ಅಡಿ ಚತುಷ್ಪಥ, ಸರ್ವಿಸ್ ರಸ್ತೆ, ಮೇಲ್ಸೇತುವೆಗಳನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಡುವುದಾಗಿ ಹೇಳಿದರು. ಯಾವ ಕೆಲಸವೂ ಆಗಲಿಲ್ಲ. ಮಳೆಗಾಲ ಬಂದಿದೆ.
ಯಾವುದೋ ರಾಜಕಾರಣಿಗೆ ಬೇಜಾರಾಗುತ್ತದೆ ಎಂದು ಸತ್ಯವನ್ನು ಬಚ್ಚಿಡುವ ಹೋರಾಟಗಾರರು ಯಾರ ಮೇಲೂ ಒತ್ತಡ ಹೇರಲಾರದಷ್ಟು ದುರ್ಬಲರು. ಒಕ್ಕಟ್ಟಿಲ್ಲದ ಹೋರಾಟದಿಂದ ಬೆಚ್ಚಿಬೀಳುವ ಸತ್ಯವನ್ನು ಬಿಚ್ಚಿಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ಎಲ್ಲೂ ಇಲ್ಲದಂತಹ ಅರೆಬರೆ ಕಾಮಗಾರಿಯಾದ ಕುಮಟಾ-ಹೊನ್ನಾವರ-ಭಟ್ಕಳ ಮಧ್ಯೆಯ ಚತುಷ್ಪಥದ ಹೋರಾಟಕ್ಕೂ ಮೊದಲ ಮಳೆಯಲ್ಲಿ ಥಂಡಿಯಾದಂತಿದೆ.
ಇತ್ತೀಚೆ ಅತ್ಯಂತ ಪ್ರಮುಖವಾದ ಹೊನ್ನಾವರ ಪ್ರಭಾತ ಸರ್ಕಲ್ ಬಳಿ ಚರಂಡಿ ನಿರ್ಮಿಸ ಹೊರಟಾಗ ಜನ ತಡೆದರು. ಗುತ್ತಿಗೆದಾರರು ಕೆಲಸವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಹಳದೀಪುರದಲ್ಲಿ ವಾರಕ್ಕೊಂದು ಅಪಘಾತವಾಗುತ್ತಿದ್ದು ಜನ ಆಗಾಗ ಪ್ರತಿಭಟಿಸುತ್ತಿದ್ದಾರೆ. ಮೂರು ತಾಲೂಕುಗಳ ಹೋರಾಟ ಸಮಿತಿ ಒಟ್ಟಾಗಿ ಚತುಷ್ಪಥವನ್ನು ಚುನಾವಣೆ ವಿಷಯವನ್ನಾಗಿಟ್ಟು ಸತತ ಹೋರಾಡದಿದ್ದರೆ ಕೇಂದ್ರ ಸರ್ಕಾರದ ಮತ್ತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿಕೊಡಲು ಯಶಸ್ವಿಯಾಗದಿದ್ದರೆ ಚತುಷ್ಪಥ ಎಂಬುದು ದುಸ್ವಪ್ನವಾಗಿಯೇ ಉಳಿಯಲಿದೆ. –ಜೀಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.