ದೇವರ ಚಿಂತನೆಯು ಯಾವುದೇ ಸಮಸ್ಯೆ ತರುವುದಿಲ್ಲ: ಸ್ವರ್ಣವಲ್ಲೀ ಶ್ರೀ


Team Udayavani, Jul 9, 2023, 12:04 PM IST

ದೇವರ ಚಿಂತನೆಯು ಯಾವುದೇ ಸಮಸ್ಯೆ ತರುವುದಿಲ್ಲ: ಸ್ವರ್ಣವಲ್ಲೀ ಶ್ರೀ

ಶಿರಸಿ: ದೇವರ ಚಿಂತನೆಯು ಯಾವುದೇ ಸಮಸ್ಯೆ ತರುವುದಿಲ್ಲ. ನಿತ್ಯವೂ ದೇವರ ಚಿಂತನೆ, ಜಪ, ಭಜನೆ, ಪೂಜೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು‌ ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.

ಸೋಂದಾ ಸ್ವರ್ಣವಲ್ಲೀ‌ ಮಠದಲ್ಲಿ ಸಂಕಲ್ಪಸಿದ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಭಂಡಾರಿ ಸಮಾಜದಿಂದ ಪಾದ ಪೂಜೆ, ಭಿಕ್ಷಾ‌ ಸೇವೆ ಸ್ವೀಕರಿಸಿ‌ ಆಶೀರ್ವಚನ ನುಡಿದರು.

ನಿಜವಾದ ನೆಮ್ಮದಿಯಿಂದ ಬದುಕಲು ಒಳ್ಳೆಯ ಉಪಾಯಗಳನ್ನು ಹೊರಗಡೆ ಹುಡುಕುವುದು ಬೇಡ. ನಮ್ಮೊಳಗೇ ಅದನ್ನು ಹುಡುಕಿಕೊಳ್ಳಬೇಕು. ದಿನಾಲೂ ಸ್ವಲ್ಪ ಹೊತ್ತು ದೇವರ ಚಿಂತನೆಯನ್ನು ಮಾಡಬೇಕು. ಉಳಿದ ಚಿಂತನೆಗಳಿಂದ ಸಂತೋಷ ಬಂದರೂ ನಿಜವಾದ ಸಂತೋಷ ದೇವರ ಚಿಂತನೆ ಮತ್ತು ಪೂಜೆಯಿಂದ ಮಾತ್ರ ಸಿಗುತ್ತದೆ ಎಂದರು.

ಯಾರಿಗಾದರೂ ವ್ಯವಹಾರಿಕ ಚಿಂತನೆಯಿಂದ ಹೊರಗೆ ಹೋಗಬೇಕು ಅಂತಿದ್ದರೆ ದೇವರ ಕುರಿತಾದ ಭಜನೆ, ಧ್ಯಾನ, ಜಪ ಮಾಡಬೇಕು. ಚಿಂತನೆಯ ಮೂಲಕ ಮನಸ್ಸಿನ ಒಳ ಕೋಣೆಗೆ ಹೋಗಬೇಕು. ಆಗ ಮನುಷ್ಯ ನೆಮ್ಮದಿಯನ್ನು ಕಾಣಲು ಸಾಧ್ಯವಿದೆ ಎಂದರು‌.

ವ್ಯವಹಾರದ ಚಿಂತನೆ ಅನಿವಾರ್ಯವಾದರೂ ಅದರಿಂದ ಸಂತೋಷ ಹುಡುಕಲು ಸಾಧ್ಯವಿಲ್ಲ.ಮನೆಯಲ್ಲಿ ದೇವರ ಕೋಣೆ, ಹೊರ ಕೋಣೆ ಇದ್ದಂತೇ ಮನಸ್ಸಿನಲ್ಲೂ ಹೊರ ಕೋಣೆ, ಒಳ ಕೋಣೆ ಬೇರೆ ಮಾಡಿಕೊಳ್ಳಬೇಕು. ಮನೆಯಲ್ಲಿ ದೇವರ ಕೋಣೆಯಲ್ಲಿ ವ್ಯವಹಾರ ಮಾತನಾಡುವುದಿಲ್ಲ. ಹಾಗೇಯೇ ಹೊರ ಕೋಣೆಯಲ್ಲಿ ವ್ಯವಹಾರ ಮಾತನಾಡುತ್ತಾರೆ. ಹೀಗೆ ದೇವರ ಚಿಂತನೆಯನ್ನೂ ಮನಸ್ಸಿನ ಒಳ ಕೋಣೆಯಲ್ಲಿಯೂ, ಹೊರ ಕೋಣೆಯಲ್ಲಿ ವ್ಯವಹಾರ ಚಿಂತನೆ ಮಾಡಬೇಕು ಎಂದರು‌.

ಒಳ ಕೋಣೆಯಲ್ಲಿ ಬಹು ಲಕ್ಷ ಹಾಕಿ ದೇವರ ಚಿಂತನೆ, ದೇವರ ಉಪಾಸನೆ, ಜಪ, ಭಜನೆ ಮಾಡಬೇಕು. ಒಳ ಕೋಣೆಯಲ್ಲಿ ಯಾವುದೇ ವ್ಯವಹಾರ ಇಟ್ಟುಕೊಳ್ಳಬಾರದು. ಇದು ನಿಜವಾದ ಯೋಗದ ಸೂತ್ರ ಎಂದೂ ನುಡಿದ ಸ್ವರ್ಣವಲ್ಲೀ ಶ್ರೀಗಳು,ದೇವರ ಚಿಂತನೆ ಮಾಡುವಾಗ ಇತರೆ ವಿಷಯದ ಬಗ್ಗೆ ಲಕ್ಷ್ಯ ಹಾಕಬಾರದು ಎಂದೂ ಸಲಹೆ ಮಾಡಿದರು.ದಿನದ ಕೆಲ ಹೊತ್ತು ದೇವರ ಚಿಂತನೆ ಮಾಡಿದಾಗ ಆಗ ವ್ಯಕ್ತಿಗೆ ನಿದ್ರೆ ಸರಿಯಾಗಿ ಬರುತ್ತದೆ. ಆಗ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.

ಸಂಗೀತದಲ್ಲಿ ತಲ್ಲಿನರಾದರೆ ಉಳಿದ ಚಿಂತನೆಗಳು ಬರುವುದಿಲ್ಲ. ಸಂಗೀತದಲ್ಲಿ ಅಳುವ ಮಗು ಕೂಡ ತನ್ನ ಅಳುವನು ನಿಲ್ಲಿಸುತ್ತದೆ. ಪಶುಗಳೂ ತಲ್ಲೀನವಾಗುತ್ತವೆ. ಅಂಥ ಶಕ್ತಿ ಸಂಗೀತಕ್ಕೆ ಇದೆ. ಸಂಗೀತ ಮನಸ್ಸಿಗೆ‌ ಭಕ್ತಿ ಭಾವ ಉದ್ದೀಪನ ಗೊಳಿಸುತ್ತದೆ. ದೇವರಿಗೂ ಇದು ಪ್ರಿಯ. ಅಂಥ‌ ಸೇವೆಯನ್ನು ಬಂಡಾರಿ ಸಮಾಜ ಶ್ರೀ ಮಠದ ಪರಂಪರೆಯದುದ್ದಕ್ಕೂ ಮಾಡುತ್ತಿದೆ. ಶ್ರೀ ಮಠದ ಉತ್ಸವಾದಿಗಳಲ್ಲಿ ಅತ್ಯಂತ ಸುಶ್ರಾವ್ಯವಾಗಿ ವಾದ್ಯವನ್ನು ನುಡಿಸುವದರ ಮೂಲಕ ಒಳ್ಳೆಯ ವಾತಾವರಣ ನಿರ್ಮಿಸುತ್ತದೆ ಎಂದು‌ ಬಣ್ಣಿಸಿದರು.

ಭಂಡಾರಿ ಸಮಾಜದ ಸಂಗೀತ ಸೇವೆ, ಕುಲ‌ ಕಸುಬು ಮುನ್ನಡೆಸುತ್ತಿದ್ದಾರೆ. ಆ ಪರಂಪರೆ ಉಳಿಸಿಕೊಳ್ಳಬೇಕು. ಹೊಸ‌ ಮಕ್ಕಳಿಗೆ‌ ಕಲಿಸಬೇಕು ಎಂದೂ ಸೂಚಿಸಿದರು‌‌.ರಾಜಸ ಗುಣ ಕಡಿಮೆ‌‌ ಆಗಲು ಸಾತ್ವಿಕ ಆಹಾರ ಬಳಸಬೇಕು. ಸಸ್ಯ ಆಹಾರಿಗಳು ಅನ್ಯ ಹಾರಿಗಳಾಗುತ್ತಿದ್ದಾರೆ. ಇದು ಆತಂಕ ಹೆಚ್ಚಿಸಿದೆ. ಸಾಂಪ್ರದಾಯಿಕ ಸಸ್ಯಹಾರಿಗಳು ಅನ್ಯ ಆಹಾರಿಗಳಾದರೆ ದೈಹಿಕ, ಮಾನಸಿಕ ಸಮಸ್ಯೆ ಆಗುವ ಅಪಾಯಗಳಿವೆ. ಮಹಾತ್ಮಾ ಗಾಂಧೀಜಿ ಅವರು ಜೀವನದ ಉದ್ದಕ್ಕೂ ಸಸ್ಯಹಾರಿಗಳು ಪಾಲಿಸಿ, ಪ್ರತಿಪಾದಿಸಿಕೊಂಡವರು. ಯಾವುದೇ ವಿಷಯದಲ್ಲೂ ಮಕ್ಕಳು ದಾರಿ ತಪ್ಪಬಾರದು, ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದರು ನುಡಿದರು.

ಪಾರಂಪರಿಕ ಸಂಗೀತ‌ ಮರೆಯಬಾರದು. ಪಾಶ್ಚಾತ್ಯ‌ ಸಂಗೀತದ‌ ಕಡೆಗೆ ಒಲವು ತೋರಿ ಆಧುನಿಕ ವಿಕೃತಿಯತ್ತ ಹೋಗುತ್ತಿದ್ದೇವೆ. ಮನಸ್ಸು ಸಮಾದಾನಿ ಆಗದೇ ಇರಲು ಇದೂ‌ ಒಂದು ಕಾರಣ. ಪಾರಂಪರಿಕ ಸೌಂದರ್ಯ ಇರುವ ಕಲೆಗಳ ಕುರಿತು ಗಮನ ಹರಿಸಬೇಕು ಎಂದೂ ಶ್ರೀಗಳು ಪ್ರತಿಪಾದಿಸಿದರು.

ಈ ವೇಳೆ ಮಠದ ಆಡಳಿತ ಮಂಡಳಿಯ ಆರ್.ಎಸ್.ಹೆಗಡೆ ಭೈರುಂಬೆ ಮಾತನಾಡಿದರು. ಸಭೆಯಲ್ಲಿ ದತ್ತಾತ್ರಯ ಭಂಡಾರಿ ಸ್ವರ್ಣವಲ್ಲೀ, ಮಂಜುನಾಥ ಭಂಡಾರಿ ಹೊಸಗದ್ದೆ, ಪರಶುರಾಮ ಭಂಡಾರಿ ಮಂಜುಗುಣಿ, ವಿಶ್ವೇಶ್ವರ ಭಂಡಾರಿ ಇತರರು ಇದ್ದರು.

ಈಚೆಗೆ‌ ಮನೆ ಕಟ್ಟುವಾಗ ಮಾಡುವಾಗ ದೇವರ ಕೋಣೆ ಬೇರೆ ಮಾಡಿಕೊಳ್ಳುವುದಿಲ್ಲ. ಅಡುಗೆ‌ ಮನೆ ಒಳಗೇ ಒಂದು ಗುಡಿ ಮಾಡಿ ಇಟ್ಟು ಬಿಡುತ್ತಾರೆ. ಇದನ್ನು‌‌ ಮಾಡದೇ ಗೃಹ ನಿರ್ಮಾಣದಲ್ಲಿ ದೇವರ ಕೋಣೆ ಬೇರೆ ನಿರ್ಮಾಣ ಮಾಡಬೇಕು
-ಸ್ವರ್ಣವಲ್ಲೀ ಶ್ರೀ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

4-

Karate: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಕರಾಟೆ ಪಟುಗಳು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.